ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ದೆವ್ವ ಬಿಡಿಸುತ್ತೇವೆಂದು 13 ವರ್ಷದ ಬಾಲಕಿಯ ಹತ್ಯೆ

13 ವರ್ಷಗ ಬಾಲಕಿಗೆ ದೆವ್ವ ಹಿಡಿದಿದೆ ಎಂದು ದೈಹಿಕ ಹಿಂಸೆ ನೀಡಿದ್ದರಿಂದಾಗಿ ಬಾಲಕಿ ಮೃತಪಟ್ಟಿರುವ ಘಟನೆ ಬೈಯಪ್ಪನಹಳ್ಳಿಯ ಮಲ್ಲೇಶಪಾಳ್ಯದಲ್ಲಿ ನಡೆದಿದೆ...

ಬೆಂಗಳೂರು: 13 ವರ್ಷಗ ಬಾಲಕಿಗೆ ದೆವ್ವ ಹಿಡಿದಿದೆ ಎಂದು ದೈಹಿಕ ಹಿಂಸೆ ನೀಡಿದ್ದರಿಂದಾಗಿ ಬಾಲಕಿ ಮೃತಪಟ್ಟಿರುವ ಘಟನೆ ಬೈಯಪ್ಪನಹಳ್ಳಿಯ ಮಲ್ಲೇಶಪಾಳ್ಯದಲ್ಲಿ ನಡೆದಿದೆ. 
ಚನ್ನಮ್ಮ ಲೇಔಟ್ ನಿವಾಸಿ ಗಾಯತ್ರಿ ಎಂಬುವವರ ಪುತ್ರಿ ಶರಣ್ಯ ಮೃತ ಬಾಲಕಿಯಾಗಿದ್ದಾಳೆ. ಘಟನೆ ಸಂಬಂಧ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರಮೀಳಾ, ಇವರ ಪುತ್ರಿ ರಮ್ಯಾ ಹಾಗೂ ಅವರ 17 ವರ್ಷದ ಪುತ್ರನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
ಮಗಳು ಶರಣ್ಯ ಇತ್ತೀಚೆಗೆ ವಿಚಿತ್ರವಾಗಿ ಆಡುತ್ತಿದ್ದಾಳೆ. ಎಷ್ಟೇ ಹೇಳಿದರೂ ಹೆಚ್ಚಾಗಿ ಟಿವಿ ನೋಡುತ್ತಾಳೆಂದು ಗಾಯತ್ರಿಯವರು ತಮ್ಮ ಸ್ನೇಹಿತೆ ಪ್ರಮೀಳಾ ಅವರ ಬಳಿ ಹೇಳಿಕೊಂಡಿದ್ದಾರೆ. 

ಈ ವೇಳೆ ಪ್ರಮೀಳಾ ಶರಣ್ಯಗೆ ದೆವ್ವ ಹಿಡಿದಿದ್ದು, ಹೀಗಾಗಿ ವಿಚಿತ್ರವಾಗಿ ಆಡುತ್ತಿದ್ದಾಳೆ. ದೆವ್ವ ಬಿಡಿಸುವ ತಂತ್ರಗಳು ನನಗೆ ಗೊತ್ತಿದ್ದು, ಓಂ ಶಕ್ತಿ ಫೋಟೋ ಇಟ್ಟುಕೊಂಡು ಮಾಟ-ಮಂತ್ರ ಮಾಡಿಸುತ್ತೇನೆ. ಕಷ್ಟ ನಿವಾರವಣೆ ಮಾಡುತ್ತೇನೆಂದು ಹೇಳಿದ್ದಾಳೆ. ಇದನ್ನು ನಂಬಿದ ಗಾಯತ್ರಿ ಮೂಢನಂಬಿಕೆಯಿಂದ ಪುತ್ರಿ ಶರಣ್ಯಳನ್ನು ಬುಧವಾರ ಮಧ್ಯಾಹ್ನ ಪ್ರಮೀಳಾ ಮನೆಗೆ ಕರೆದೊಯ್ದಿದ್ದಾರೆ. 

ಈ ವೇಳೆ ದೆವ್ವ ಬಿಡಿಸುವ ನೆಪದಲ್ಲಿ ಪ್ರಮೀಳಾ, ಆಕೆಯ ಪುತ್ರಿ ರಮ್ಯಾ ಹಾಗೂ ಪುತ್ರ ಸೇರಿಕೊಂಡು ಸೈಕಲ್ ಚೈನ್ ಮತ್ತು ಕಬ್ಬಣದ ರಾಡ್ ನಿಂದ ಶರಣ್ಯಾಳ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡ ಶರಣ್ಯಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಬಾಲಕಿ ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದಾಳೆ. 

ಇದರಿಂದ ಹೆದರಿಂದ ಪ್ರಮೀಳಾ ತಾನಾ ಠಾಣೆಗೆ ತೆರಳಿ ಬಾಲಕಿ ತಾಯಿ ವಿರುದ್ಧ ದೂರು ನೀಡಿದ್ದಾಳೆ. ಮಗಳು ಹೆಚ್ಚಾಗಿ ಟಿವಿ ನೋಡುತ್ತಾಳೆ ಹಾಗೂ ತನ್ನ ಮೊಬೈಲ್ ಬಳಕೆ ಮಾಡುತ್ತಾಳೆಂದು ಹತ್ಯೆ ಮಾಡಿದ್ದಾಳೆಂದು ದೂರಿನಲ್ಲಿ ಹೇಳಿಕೊಂಡಿದ್ದಳು. ಇದರಂತೆ ಗಾಯತ್ರಿಯವರನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT