ರಾಮ್ ಜೇಠ್ಮಲಾನಿ 
ರಾಜ್ಯ

ಮೋದಿ ಒಬ್ಬ ಸುಳ್ಳ, ಮೋಸಗಾರ: ರಾಮ್ ಜೇಠ್ಮಲಾನಿ

ಮೋದಿಯೊಬ್ಬ ಸುಳ್ಳ, ಮೋಸಗಾರ ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ನಾನೇ ಮೂರ್ಖನಾದೆ, ಅವ" ಹಿರಿಯ ವಕೀಲರಾಮ್ ಜೇಠ್ಮಲಾನಿ ಹೇಳಿದ್ದಾರೆ.

ಬೆಂಗಳೂರು: "ಮೋದಿಯೊಬ್ಬ ಸುಳ್ಳ, ಮೋಸಗಾರ ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ನಾನೇ ಮೂರ್ಖನಾದೆ" ಹಿರಿಯ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು "ಮೋದಿ ಮೋಸಗಾರ, ವಿದೇಶದಲ್ಲಿದ್ದ ಕಪ್ಪು ಹಣವನ್ನು ಭಾರತಕ್ಕೆ ತರುವೆನೆಂದ ಪ್ರಣಾಳಿಕೆಯಲ್ಲಿ ನನ್ನಿಂದಲೇ ಬರೆದುಕೊಂಡು ಇಂದು ಅದರ ಬಗ್ಗೆ ಚಕಾರವೆತ್ತುತ್ತಿಲ್ಲ.ಇನ್ನು ಅಮಿತ್ ಶಾ ಅಂತಹವರಿಗೆ ಇದೊಂದು ನಗೆಚಾಟಿಕೆಯ ವಿಚಾರವಾಗಿದೆ" ಎಂದರು.
"ಕರ್ನಾಟಕದ ಜನ ಮೋದಿ ಮಾತಿಗೆ ಮರುಳಾಗಬೇಡಿ. ನಿಮಗಿಷ್ಟವಾದವರಿಗೆ ಮತ ನಿಡಿ. ಆದರೆ ಮೋದಿಯಂತಹಾ ಮೋಸಗಾರ ಮತ್ತು ಕೃತ್ಯಗಾರನ ಮೋಸವನ್ನು ಮರೆಯದಿರಿ. ಬಿಜೆಪಿಯಲ್ಲಿ ಅತಿ ಹೆಚ್ಚಿನ ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರಿದ್ದಾರೆ. ಇದು ಆ ಪಕ್ಷದ ಸ್ಥಿತಿಯನ್ನು ತೋರಿಸುತ್ತಿದೆ" ಎಂದು ಎಚ್ಚರಿಸಿದರು.
"ಮೋದಿಗೆ ಬುದ್ದಿ ಕಲಿಸುವವರೆಗೆ , ನನ್ನ ಕೊನೆಯುಸಿರು ಇರುವವರೆಗೆ ನಾನು ಹೋರಾಡುತ್ತೇನೆ. ನಾನು ವಕೀಲ ವೃತ್ತಿಯಿಂದ ನಿವೃತ್ತನಾಗಿದ್ದೇನೆ ಇನ್ನು ನನ್ನ ಜೀವನವೆಲ್ಲಾ ಮೋದಿಯ ಮೋಸವನ್ನು ಜನರಿಗೆ ತಿಳಿಸುವುದಕ್ಕೆ ಮೀಸಲು" ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!