ಅನಂತ್ ಕುಮಾರ್ ಹೆಗಡೆ 
ರಾಜ್ಯ

ಉತ್ತರ ಕನ್ನಡ: ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಕಾರು ಅಪಘಾತ

ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಅವರಿದ್ದ ಕಾರ್ ಮತ್ತೆ ಅಪಘಾತಕ್ಕೀಡಾಗಿದೆ.

ಕಾರವಾರ: ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಅವರಿದ್ದ ಕಾರ್ ಮತ್ತೆ ಅಪಘಾತಕ್ಕೀಡಾಗಿದೆ.
ಶಿರಸಿಯಿಂದ ಕುಮಟಾಗೆ ತೆರಳುವಾಗ ಇನ್ನೋವಾ ಕಾರೊಂದು ಅನಂತಕುಮಾರ ಹೆಗಡೆಯವರ ಬೆಂಗಾವಲು ವಾಹನಕ್ಕೆ ಅಡ್ಡವಾಗಿದೆ. ಆಗ ಬೆಂಗಾವಲು ವಾಹನ ಚಾಲಕ ಒಮ್ಮೆಗೇ ಬ್ರೇಕ್ ಹಾಕಿದ್ದ ಕಾರಣ ಸಚಿವರ ಕಾರು ಮುಂದಿದ್ದ ಬೆಂಗಾವಲು ವಾಹನಕ್ಕೆ ಗುದ್ದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಯಾಣ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಇದರಿಂದಾಗಿ ಯಾರಿಗೆ ಗಾಯಗಳಾಗಿಲ್ಲ ಎನ್ನಲಾಗಿದೆ.
ಅಪಘಾತದ ಸಂಬಂಧ ಸಚಿವರು ಟ್ವೀಟ್ ಮಾಡಿದ್ದು "ಕೇವಲ 30 ನಿಮಿಷಗಳ ಹಿಂದೆ ಕುಮಟಾದ ಬಳಿ ನನ್ನ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿತ್ತು. ಇನ್ನೊಂದು ಜೀವದಾನ ಸಿಕ್ಕಿತು" ಎಂದು ಬರೆದುಕೊಂಡಿದ್ದಾರೆ.
ಪ್ರಕರಣದ ಮಾಹಿತಿ ತಿಳಿದ ಕುಮಟಾ ಪೋಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. 
ಒಂದೇ ತಿಂಗಳಿನಲ್ಲಿ ಅನಂತಕುಮಾರ್ ಹೆಗಡೆಯವರ ಕಾರು ಇದು ಎರಡನೇ ಬಾರಿ ಅಪಘಾತಕ್ಕೀಡಾಗಿದೆ.ಏಪ್ರೀಲ್ 18 ರಂದು ಶಿರಸಿಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಹೊರವಲಯದಲ್ಲಿ  ಲಾರಿಯೊಂದು ಏಕಾಏಕಿ ಸಚಿವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸುಂಕದ ವಿವಾದ, ರಷ್ಯಾದ ತೈಲ ಖರೀದಿ ಮೇಲಿನ ಒತ್ತಡದ ನಡುವೆ ನಾಳೆ ಭಾರತ-ಅಮೆರಿಕ ವ್ಯಾಪಾರ ಮಾತುಕತೆ!

ವಂತಾರಾಗೆ ಕ್ಲೀನ್ ಚಿಟ್, ವಿನಃ ಕಾರಣ ಕಳಂಕ ತರುವುದು ಬೇಡ: ಸುಪ್ರೀಂ ಕೋರ್ಟ್‌

ಹುಡುಕಿ, ಹುಡುಕಿ ಕೊಲ್ಲುವ ಉದ್ದೇಶವಿದ್ದರೆ, ಸಂಧಾನ ಮಾತುಕತೆ ಏಕೆ?: ಇಸ್ರೇಲ್ ವಿರುದ್ಧ ಕತಾರ್ ದೊರೆ ಆಕ್ರೋಶ

ಮುಷ್ತಾಕ್​ರಿಂದ ದಸರಾ ಉದ್ಘಾಟನೆ: ಹೈಕೋರ್ಟ್ ತೀರ್ಪು ಸ್ವಾಗತಿಸಿದ ಕಾಂಗ್ರೆಸ್; ಕಾನೂನು ತರುತ್ತೇವೆ ಎಂದ ಬಿಜೆಪಿ

ಮಾಜಿ ಸಂಸದನಿಗೆ ಸಂವಿಧಾನ ಗೊತ್ತಿಲ್ಲ ಅಂದ್ರೆ ಏನು? ಅವನೊಬ್ಬ ಮೂರ್ಖ: ಪ್ರತಾಪ್ ಸಿಂಹ ವಿರುದ್ಧ ಸಿಎಂ ಕಿಡಿ

SCROLL FOR NEXT