ರಣದೀಪ್ ಸುರ್ಜೆವಾಲ 
ರಾಜ್ಯ

ಮತಚೀಟಿ ಸಿಕ್ಕಿದ್ದು ಬಿಜೆಪಿ ನಾಯಕಿ ಫ್ಲಾಟ್ ನಲ್ಲಿ: ಕಾಂಗ್ರೆಸ್ ಆರೋಪ

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಮತದಾರರ ಗುರುತಿನ ಚೀಟಿ ಸಂಗ್ರಹ ಪ್ರಕರಣ ಸಂಬಂಧ ಬಿಜೆಪಿ ಆರೋಪವನ್ನು ಕಾಂಗ್ರೆಸ್ ತಳ್ಳಿಹಾಕಿದೆ.

ಬೆಂಗಳೂರು :  ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ  ಜಾಲಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ  ಮತದಾರರ  ಗುರುತಿನ ಚೀಟಿ  ಸಂಗ್ರಹ ಪ್ರಕರಣ ಸಂಬಂಧ ಬಿಜೆಪಿ ಆರೋಪವನ್ನು  ಕಾಂಗ್ರೆಸ್  ತಳ್ಳಿಹಾಕಿದೆ.

 ಚುನಾವಣೆಯಲ್ಲಿ ನಿಶ್ಚಿತ  ಸೋಲಿನ ಭೀತಿಗೆ ಸಿಲುಕಿರುವ  ಬಿಜೆಪಿಯು  ಜಾಲಹಳ್ಳಿಯ ಅಪಾರ್ಟ್ ಮೆಂಟ್ ನಲ್ಲಿ  ಮತದಾರರ ಚೀಟಿ ವಶ ಎಂಬ ನಾಟಕವನ್ನು ಸೃಷ್ಟಿಸಿ ರಾಜ್ಯದ ಜನತೆಯ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರ  ರಣದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದ್ದಾರೆ.

ತಡರಾತ್ರಿ 1 ರ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಇಡೀ ಪ್ರಕರಣ ಬಿಜೆಪಿಯ ಸೃಷ್ಟಿ ಎಂದು ಬಣ್ಣಿಸಿದರು ಹಾಗೂ ತಮ್ಮ ಈ ವಾದಕ್ಕೆ ಎರಡು ಅಂಶಗಳನ್ನು ಮಂಡಿಸಿದರು.

 ಜಾಲಹಳ್ಳಿಯ ಎಸ್ ಎಲ್ ವಿ ಪಾರ್ಕ್ ಅಪಾರ್ಟ್ ಮೆಂಟ್ ನ  ಫ್ಲಾಟ್  ನಂ-155ರಲ್ಲಿ ಈ ಮತದಾರರ ಗುರುತಿನ ಚೀಟಿ ಪತ್ತೆಯಾಗಿದೆ. ಈ ಫ್ಲಾಟ್ ಬಿಜೆಪಿ ನಾಯಕಿ ಹಾಗೂ ಬಿಬಿಎಂಪಿ ಸದಸ್ಯೆ ಮಂಜಳಾ ನಂಜಾಮರಿ ಅವರಿಗೆ ಸೇರಿದ್ದು, ಈ ಫ್ಲಾಟ್ ನ್ನು ಅವರು  ತಮ್ಮ ದತ್ತು ಪುತ್ರ ರಾಕೇಶ್ ಗೆ ಬಾಡಿಗೆಗೆ ನೀಡಿದ್ದಾರೆ. ರಾಕೇಶ್  2015ರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ  ಸ್ಪರ್ಧಿಸಿ ಕಾಂಗ್ರೆಸ್ ವಿರುದ್ಧ ಸೋತಿದ್ದರು ಎಂದು ತಿಳಿಸಿದರು.

 ಇನ್ನೂ ಈ ಅಪಾರ್ಟ್ ಮೆಂಟ್ ಮೇಲೆ ಮೊದಲು ದಾಳಿ ಮಾಡಿದ್ದು, ಚುನಾವಣಾ ಆಯೋಗ  ಅಲ್ಲ ಅಥವಾ ಪೊಲೀಸರು ಅಲ್ಲ. ಬದಲಾಗಿ ಬಿಜೆಪಿ ಟೋಪಿ ತೊಟ್ಟ ಆ ಪಕ್ಷದ ಕಾರ್ಯಕರ್ತರು, ಅಂದರೆ ಬಿಜೆಪಿ ನಾಯಕಿಗೆ ಸೇರಿದ ಫ್ಲಾಟ್ ನಲ್ಲಿ ಮತದಾರರ ಚೀಟಿ ಇರುತ್ತದೆ. ಅದಕ್ಕೆ ಬಿಜೆಪಿಯ ಕಾರ್ಯಕರ್ತರೇ ದಾಳಿ ಮಾಡಿ ಚೀಟಿಗಳನ್ನು ವಶಪಡಿಸಿಕೊಂಡು ಚುನಾವಣಾ ಆಯೋಗಕ್ಕೆ ನೀಡುತ್ತಾರೆ.

 ಆದಾಗ್ಯೂ, ಬಿಜೆಪಿ ನಾಯಕರಾದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್,  ಅನಂತ್ ಕುಮಾರ್, ಸದಾನಂದಗೌಡ ಮೊದಲಾದವರು, ಇಡೀ ಪ್ರಕರಣವನ್ನು  ರಾಜರಾಜೇಶ್ವರಿ  ನಗರ ಕಾಂಗ್ರೆಸ್ ಅಭ್ಯರ್ಥಿ  ಮುನಿರತ್ನ ಹೆಗಲಿಗೆ  ಹೊರಿಸುವ ಹಾಗೂ  ಕಾಂಗ್ರೆಸ್ ಪಕ್ಷವೇ ಅಕ್ರಮ ನಡೆಸಿದೆ ಎಂದು ಬಿಂಬಿಸುವ  ಪ್ರಯತ್ನವನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.

 ಕೂಡಲೇ ಫ್ಲಾಟ್ ಮಾಲೀಕರಾದ ಮಂಜುಳಾ ನಂಜಾಮರಿ ಹಾಗೂ ರಾಕೇಶ್ ಮೇಲೆ  ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು  ರಣದೀಪ್ ಸಿಂಗ್ ಸುರ್ಜೆವಾಲಾ  ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ