ಸಂಗ್ರಹ ಚಿತ್ರ 
ರಾಜ್ಯ

ಕಾಂಗ್ರೆಸ್-ಜೆಡಿಎಸ್ ಗೆ ತೀವ್ರ ಮುಖಭಂಗ, ಯಡಿಯೂರಪ್ಪ ಪ್ರಮಾಣ ವಚನ ತಡೆ ಅಸಾಧ್ಯ ಎಂದ ಸುಪ್ರೀಂ ಕೋರ್ಟ್

ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಸರ್ಕಾರ ರಚನೆ ಹೈಡ್ರಾಮಾಕ್ಕೆ ಸುಪ್ರೀಂಕೋರ್ಟ್‌ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಯಡಿಯೂರಪ್ಪ ಪ್ರಮಾಣ ವಚನ ತಡೆ ಅಸಾಧ್ಯ ಎಂದು ತೀರ್ವು ನೀಡಿದೆ.

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಸರ್ಕಾರ ರಚನೆ ಹೈಡ್ರಾಮಾಕ್ಕೆ ಸುಪ್ರೀಂಕೋರ್ಟ್‌ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಯಡಿಯೂರಪ್ಪ ಪ್ರಮಾಣ ವಚನ ತಡೆ ಅಸಾಧ್ಯ ಎಂದು ತೀರ್ವು ನೀಡಿದೆ.
ಬಹುಮತ ವಿಲ್ಲದ ಬಿಜೆಪಿ ಪಕ್ಷಕ್ಕೆ ಅಧಿಕಾರ ರಚನೆ ಮಾಡುವ ಹಕ್ಕಿಲ್ಲ ಎಂದು ಹೇಳಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಜಾಗೊಳಿಸಿದೆ. ತನ್ನ ಮಹತ್ವದ ತೀರ್ಪಿನಲ್ಲಿ ಅಂತ್ಯಗೊಂಡಿದೆ. ಬಿಜೆಪಿಯನ್ನ ಸರ್ಕಾರ ರಚನೆಗೆ ಆಹ್ವಾನಿಸಿದ ರಾಜ್ಯಪಾಲರ ಕ್ರಮವನ್ನ ವಿರೋಧಿಸಿ ಮಧ್ಯರಾತ್ರಿಯೇ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದ ಕಾಂಗ್ರೆಸ್‌‌ ಹಾಗೂ ಜೆಡಿಎಸ್‌ ಗೆ ತೀವ್ರ ಮುಖಭಂಗವಾಗಿದೆ.
ಕೊನೆ ಪಕ್ಷ ಬಿಎಸ್‌ ಯಡಿಯೂರಪ್ಪ ಅವರ ಇಂದಿನ ಪ್ರಮಾಣ ವಚನ ಸಮಾರಂಭವನ್ನಾದರೂ ತಡೆಯುವ ಕಾಂಗ್ರೆಸ್‌ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿತು. ಅಷ್ಟೇ ಅಲ್ಲ ಸಂವಿಧಾನದ 361 ವಿಧಿ ಅನ್ವಯ ರಾಜ್ಯಪಾಲರ ಪರಮಾಧಿಕಾರವನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ ಎಂದು ಸುಪ್ರೀಂಕೋರ್ಟ್‌ ಕಡ್ಡಿ ಮುರಿದಂತೆ ಹೇಳಿತು. 
ನೈತಿಕವಾಗಿ ಬಿಜೆಪಿಗೆ ಸರ್ಕಾರವನ್ನ ರಚಿಸಲು ಆಹ್ವಾನ ನೀಡಿರುವ ರಾಜ್ಯಪಾಲರ ಕ್ರಮ ನೈತಿಕವಾಗಿ ಸರಿಯಿಲ್ಲ ಎಂದು ಅಭಿಷೇಕ್‌ ಮನು ಸಿಂಘ್ವಿ, ನ್ಯಾ. ಸಿಕ್ರಿ ನೇತೃತ್ವದ ತ್ರೀಸದಸ್ಯ ಪೀಠದ ಎದುರು ಬಲವಾದ ವಾದ ಮಂಡಿಸಿದರು. ಸುಮಾರು 2ಗಂಟೆಗಳ ಕಾಲ ನಿರಂತರವಾಗಿ ರಾಜ್ಯಪಾಲರ ನಡೆಯನ್ನ ವಿರೋಧಿಸಿ ವಾದ ಮಂಡಿಸಿದರು. 
ರಾಜ್ಯಪಾಲರ ಆದೇಶವನ್ನ ವಜಾ ಮಾಡುವಂತೆ ಬೊಮ್ಮಾಯಿ ಪ್ರಕರಣ ಸೇರಿದಂತೆ ಇನ್ನಿತರ ಸುಪ್ರೀಂಕೋರ್ಟ್‌ ತೀರ್ಪುಗಳನ್ನ ಉಲ್ಲೇಖಿಸಿ ವಾದ ಮಂಡಿಸಿದರು. ಆದರೆ ಅಂತಿಮವಾಗಿ ಸುಪ್ರೀಂಕೋರ್ಟ್‌ ಸಿಂಘ್ವಿ ಅವರ ವಾದವನ್ನ ತಿರಸ್ಕರಿಸಿ, ರಾಜ್ಯಪಾಲರ ಪರಮಾಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.
ವಿರುದ್ಧದ ತೀರ್ಪಿನಲ್ಲೂ ಕಾಂಗ್ರೆಸ್ ಗೆ ಸುಪ್ರೀಂ ನೀಡಿದ ಸಮಾಧಾನ
ಇದೇ ವೇಳೆ ಯಡಿಯೂರಪ್ಪ ಅವರ ಪ್ರಮಾಣ ವಚನ ಸ್ವೀಕಾರಕ್ಕೆ ತಡೆ ನೀಡುವುದಿಲ್ಲ ಎಂದು ಸುಪೀಂ ಕೋರ್ಟ್ ಹೇಳಿದ್ದರೂ, ಯಡಿಯೂರಪ್ಪ ಅವರಿಗೆ ಈ ಬಗ್ಗೆ ನೋಟಿಸ್‌ ನೀಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯಪಾಲರಿಗೆ ಸಲ್ಲಿಕೆ ಮಾಡಿರುವ ಶಾಸಕರ ಬೆಂಬಲ ಪತ್ರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಬಿಎಸ್‌ವೈಗೆ ಸೂಚನೆ ನೀಡಿದೆ.  ಅಂತೆಯೇ ಎರಡು ಪಕ್ಷಗಳಿಗೂ ಬೆಂಬಲ ಪತ್ರ ಸಲ್ಲಿಕೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು,  ನಾಳೆ ಬೆಳಗ್ಗೆ 10:30ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

'ದೇಶಕ್ಕೆ ಬೇಕಿರುವುದು ಸಾಕ್ಷ್ಯವೇ ಹೊರತು ಆರೋಪಗಳಲ್ಲ; ರಾಹುಲ್ ಗಾಂಧಿಯದ್ದು 'ಪೊಳ್ಳು' ಪ್ರತಿಭಟನೆ, ಆರೋಪ: ಬಿಜೆಪಿ ವಾಗ್ದಾಳಿ

ಗುಟ್ಟಾಗಿ ಮದುವೆಯಾಗಿದ್ದಾರಾ ನಟಿ ತ್ರಿಶಾ?: ಲಂಡನ್ ಸೆಲ್ಫಿಯಲ್ಲಿನ ಲಾಕೆಟ್ ನ ಗುಟ್ಟೇನು!

'ಬೆಂಗಳೂರಿನಲ್ಲಿ ಬ್ಲಿಂಕಿಟ್ ರೀತಿ ಕೆಲವೇ ನಿಮಿಷದಲ್ಲಿ ಗುಂಡಿ ಮುಚ್ಚುತ್ತೇವೆ': GBA ಮುಖ್ಯ ಆಯುಕ್ತ ಮಹೇಶ್ವರ ರಾವ್

ಟಿವಿ, ಒಟಿಟಿಗೆ ಬರುತ್ತಾ 'ಪ್ರೇಮದ ಊರಲಿ'? ಚಿತ್ರತಂಡ ಹೇಳಿದ್ದೇನು?