ರಾಜ್ಯ

ಚಾಮರಾಜನಗರ ಅರಣ್ಯ ಪ್ರದೇಶದಲ್ಲಿ ವಾಹನಗಳ ಸಂಚಾರ ವೇಗ ಮಿತಿ ಗಂಟೆಗೆ 30 ಕಿ.ಮೀ: ಸಾರಿಗೆ ಇಲಾಖೆ ಆದೇಶ

Sumana Upadhyaya

ಬೆಂಗಳೂರು: ಚಾಮರಾಜನಗರ ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಮೃಗಗಳ ರಕ್ಷಣೆಯ ದೃಷ್ಟಿಯಿಂದ ವಾಹನ ಸಂಚಾರ ವೇಗ ಪ್ರತಿ ಗಂಟೆಗೆ 30 ಕಿಲೋ ಮೀಟರ್ ವೇಗದಲ್ಲಿರಬೇಕೆಂದು ಆದೇಶ ನೀಡಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಾಲ್ಕು ರಕ್ಷಿತಾರಣ್ಯವಿದ್ದು ಇಲ್ಲಿ ವೇಗವಾಗಿ ಬಸ್ಸುಗಳು ಮತ್ತು ಇತರ ವಾಹನಗಳ ಸಂಚಾರದಿಂದ ರಸ್ತೆ ಅಪಘಾತಗಳು ಸಂಭವಿಸಿವೆ.

ಇದನ್ನು ತಡೆಯಲು ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕರು ನಂಜನಗೂಡು, ಗುಂಡ್ಲುಪೇಟೆ, ಕೊಳ್ಳೆಗಾಲ ಮತ್ತು ಚಾಮರಾಜನಗರ ವಿಭಾಗದ ಬಸ್ಸು ಚಾಲಕರಿಗೆ ಅರಣ್ಯ ಪ್ರದೇಶದಲ್ಲಿ ವಾಹನಗಳ ಸಂಚಾರ ವೇಗವನ್ನು ಪ್ರತಿ ಗಂಟೆಗೆ 30 ಕಿಲೋ ಮೀಟರ್ ಗೆ ವೇಗಮಿತಿಯನ್ನು ತರಲಾಗಿದೆ.

ವನ್ಯಮೃಗ ಕಾರ್ಯಕರ್ತರು ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.  ಇದನ್ನು ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

SCROLL FOR NEXT