ರಾಜ್ಯ

ಚಾಮರಾಜಪೇಟೆ ಯುವಕನ ಹತ್ಯೆ: ವದಂತಿ ಹಬ್ಬಿಸಬೇಡಿ ಎಂದು ಡಿಸಿಪಿ ರವಿ ಡಿ ಚೆನ್ನಣ್ಣವರ್ ಮನವಿ

Srinivasamurthy VN
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳತನ ಕುರಿತು ಸುಳ್ಳು ಸುದ್ದಿ ಅಥವಾ ವದಂತಿ ಹಬ್ಬಿಸಬೇಡಿ ಎಂದು ಡಿಸಿಪಿ ರವಿ ಡಿ ಚೆನ್ನಣ್ಣವರ್ ಹೇಳಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳ ಎಂದು ಜನಸಮೂಹ ಯುವಕನ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ದಯವಿಟ್ಟು ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ವದಂತಿ ಹಬ್ಬಿಸಬೇಡಿ. ಇವೆಲ್ಲಾ ಸಾಕಷ್ಟು ವರ್ಷಗಳ ಹಿಂದೆ ನಡೆದಿದೆ. ಸುಳ್ಳು ಸುದ್ದಿಯನ್ನ ಹಬ್ಬಿಸುವವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಚೆನ್ನಣ್ಣವರ್ ಹೇಳಿದರು.

ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆಯಲ್ಲಿ ಎರಡು ಹಾಗೂ ಉಪ್ಪಾರಪೇಟೆಯಲ್ಲಿ ಒಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಸುಳ್ಳು ಸುದ್ದಿಯನ್ನ ಹಬ್ಬಿಸೋರ ವಿರುದ್ಧ ಹಾಗೂ ವದಂತಿ ಹಬ್ಬಿಸೋರ ವರದಿ ವಿರುದ್ಧ ಕಾನುನೂ ಕ್ರಮ ಜರುಗಿಸಲಾಗುತ್ತದೆ, ದಯವಿಟ್ಟು ಈ ವದಂತಿ ನಂಬಬೇಡಿ, ಚಾಮರಾಜಪೇಟೆಯಲ್ಲಿ ನಡೆದದ್ದು ಸುಳ್ಳು. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ರವಿ ಡಿ ಚೆನ್ನಣ್ಣನವರ್ ಸ್ಪಷ್ಟನೆ ನೀಡಿದರು. 

ಚಾಮರಾಜಪೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 14 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯಲ್ಲಿ ನಿರಪರಾಧಿಗಳೆಂದು ಸಾಬೀತಾದರೆ ಖಂಡಿತ ಬಿಟ್ಟು ಬಿಡುತ್ತೇವೆ ಎಂದು ಹೇಳಿದರು.
SCROLL FOR NEXT