ಸಾಂದರ್ಭಿಕ ಚಿತ್ರ 
ರಾಜ್ಯ

ಮಕ್ಕಳ ಕಳ್ಳರ ಕುರಿತ ನಕಲಿ ವಿಡಿಯೋಗಳಿಂದ ರಾಜ್ಯದಲ್ಲಿ ಆತಂಕ ಸೃಷ್ಟಿ!

ಪುಟ್ಟಮಕ್ಕಳನ್ನು ಅಪಹರಿಸುವ ತಂಡವೊಂದು ಉತ್ತರ ಭಾರತದಿಂದ ಬಂದಿದ್ದು, ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ ಎಂದು ಕಳೆದೊಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ನಕಲಿ ವಿಡಿಯೋಗಳು ಹರಿದಾಡುತ್ತಿದ್ದು, ನಕಲಿ ವಿಡಿಯೋಗಳು ಇದೀಗ ರಾಜ್ಯದಲ್ಲಿ ಭೀತಿಯನ್ನು ಹುಟ್ಟಿಸಿದೆ...

ಬೆಂಗಳೂರು; ಪುಟ್ಟಮಕ್ಕಳನ್ನು ಅಪಹರಿಸುವ ತಂಡವೊಂದು ಉತ್ತರ ಭಾರತದಿಂದ ಬಂದಿದ್ದು, ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ ಎಂದು ಕಳೆದೊಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ನಕಲಿ ವಿಡಿಯೋಗಳು ಹರಿದಾಡುತ್ತಿದ್ದು, ನಕಲಿ ವಿಡಿಯೋಗಳು ಇದೀಗ ರಾಜ್ಯದಲ್ಲಿ ಭೀತಿಯನ್ನು ಹುಟ್ಟಿಸಿದೆ. 
ಮೊದಲು ತಮಿಳುನಾಡು ರಾಜ್ಯದಲ್ಲಿ ಕಾಣಿಸಿಕೊಂಡ ಈ ಮಕ್ಕಳ ಕಳ್ಳರ ವದಂತಿ ಕಳೆದೊಂದು ತಿಂಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯವನ್ನು ಆವರಿಸಿಕೊಂಡಿದೆ. 
ಇದರ ಪರಿಣಾಮ ವದಂತಿ ಹೆಚ್ಚಾಗಿ ಹಬ್ಬಿದ ಪ್ರದೇಶಗಳ ಜನ ರಾತ್ರಿಯಿಡೀ ದೊಡ್ಡ ದೊಡ್ಡ ಕೋಲು, ದೊಣ್ಣೆಗಳನ್ನು ಹಿಡಿದು ಗ್ರಾಮಗಳನ್ನು ಕಾಯುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದಂತೆ ಪೊಲೀಸರು ಮನವಿ ಮಾಡಿಕೊಂಡರೂ ಇದನ್ನು ಜನರು ನಂಬುತ್ತಿಲ್ಲ. ಕೆಜಿಎಫ್ ಬಳಿ ಬಿಹಾರ ಹಾಗೂ ಶಿವಮೊಗ್ಗದ ನಿವಾಸಿಗಳಾದ ಇಬ್ಬರು ವ್ಯಕ್ತಿಗಳನ್ನು ಹಿಡಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಬಳಿಕ ಪೊಲೀಸರು ಮಧ್ಯಪ್ರವೇಶ ಮಾಡಿ ಥಳಿತಕ್ಕೊಳಗಾಗಿದ್ದ ವ್ಯಕ್ತಿಗಳನ್ನು ರಕ್ಷಣೆ ಮಾಡಿದ್ದಾರೆ. 
ವಿಚಾರಣೆ ವೇಳೆ ಇಬ್ಬರೂ ಉದ್ಯೋಗವನ್ನು ಹುಡುಕುತ್ತಿದ್ದು, ಮಕ್ಕಳ ಕಳ್ಳರು ಎಂಬ ಶಂಕೆ ಮೇಲೆ ಸ್ಥಳೀಯರು ಥಳಿಸಿದ್ದಾರೆಂದು ತಿಳಿದುಬಂದಿದೆ. ಇಬ್ಬರ ಪೈಕಿ ಒಬ್ಬಾತನಿಗೆ ಕನ್ನಡ ಬರುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಇದೇ ರೀತಿಯ ಘಟನೆ ನಾಗಲಬಂಡೆ ವಿಜಯಪುರದದಲ್ಲೂ ನಡೆದಿದೆ. ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿರುವ ಸ್ಥಳೀಯರು ಮನಬಂದಂತೆ ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ವಿಚಾರಣೆ ವೇಳೆ ಥಳಿತಕ್ಕೊಳಗಾದ ವ್ಯಕ್ತಿಗಳು ಭಿಕ್ಷಕರು ಎಂಬುದಾಗಿ ತಿಳಿದುಬಂದಿದೆ. ವಾಟ್ಸ್ ಅಪ್ ಹಾಗೂ ಫೇಸ್ ಬುಕ್ ಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ನಕಲಿ ಎಂದು ಪೊಲೀಸರು ಹೇಳುತ್ತಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಸ್ತೆ ರಸ್ತೆಗಳಲ್ಲಿ ಮೈಕ್'ಗಳನ್ನು ಹಿಡಿದು ಜನರಿಗೆ ಮಾಹಿತಿ ನೀಡುತ್ತಿದ್ದಾರೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಜಿಎಫ್ ಎಸ್'ಎಫ್ ಬಿ.ಎಸ್. ಲೋಕೇಶ್ ಕುಮಾರ್ ಅವರು, ನೆರೆ ರಾಜ್ಯ ತಮಿಳುನಾಡಿನಲ್ಲಿ ಮಕ್ಕಳ ಕಳ್ಳತನ ಘಟನೆಗಳು ನಡೆಯುತ್ತಿವೆ. ಈ ಕುರಿತ ವಿಡಿಯೋಗಳು ಕೋಲಾರ ಜಿಲ್ಲೆಯಲ್ಲಿ ಹರಿದಾಡತೊಡಿದ್ದು, ಜನರದಲ್ಲಿ ಗೊಂದಲಗಳನ್ನು ಸೃಷ್ಟಿ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಶಾಲೆ ಹಾಗೂ ಸ್ಥಳೀಯ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದಾರೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT