ಚೆನ್ನಗಿರಿ: ಹಿರೇಹಳ್ಳದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋದ ರೈತ
ಚೆನ್ನಗಿರಿ: ದಾವಣಗೆರೆ ಜಿಲ್ಲೆ ಚೆನ್ನಗಿರಿಯ ಲಕ್ಷ್ಮಿ ಸಾಗರದ ಹಿರೇಹಳ್ಳ ತುಂಬಿ ಹರಿಯುತ್ತಿದ್ದು ಚೆಕ್ ಡ್ಯಾಂನಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಈ ವೇಳೆ ರಸ್ತೆ ದಾತಲು ಮುಂದಾದ ರೈತನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಶುಕ್ರವಾರ ಸಂಭವಿಸಿದೆ.
ಕೆ.ಲಕ್ಷ್ಮಿಸಾಗರ ಗ್ರಾಮದ ನಿವಾಸಿಯಾದ ಬಸಪ್ಪ(65) ನೀರಿನಲ್ಲಿ ಕೊಚ್ಚಿ ಹೋದ ರೈತನೆಂದು ಗುರುತಿಸಲಾಗಿದೆ.
ನೀರಿನ ರಭಸಕ್ಕೆ ಕೊಚ್ಚಿ ಹೋದ ಬಸವಪ್ಪನನ್ನು ಕಂಡ ಸ್ಥಳೀಯರೊಬ್ಬರು ಅವರನ್ನು ಪಾರು ಮಾಡಲು ತಾವು ನೀರಿಗೆ ಧುಮುಕಿದ್ದಾರೆ. ಆದರೆ ನೀರಿನ ವೇಗ ಅತಿಯಾಗಿದ್ದ ಕಾರಣ ಅವರನ್ನು ಬದುಕಿಸುವುದು ಸಾಧ್ಯವಾಗಿಲ್ಲ.
ಚಿತ್ರದುರ್ಗ, ಹೊಳಲ್ಕೆರೆಸುತ್ತಮುತ್ತ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ.ಇದರಿಂದಾಗಿ ಸುತ್ತಮುತ್ತಲ ಕೆರೆಗಳು ಕೋಡಿ ಬಿದ್ದಿವೆ.ಇದರಿಂದ ಹೊರಕ್ಕೆ ಧುಮುಕಿದ ನೀರು ಕಾಕನೂರು ಕಡೆಯಿಂದ ಹರಿಯುವ ಹಿರೇಹಳ್ಳಕ್ಕೆ ಹರಿದಿದೆ.ಇದೇ ಮುಂದೆ ಚೆಕ್‌ಡ್ಯಾಂ ತಲುಪಿ ಚೆಕ್‌ಡ್ಯಾಂ ಭರ್ತಿಯಾಗುತ್ತಾ ಮುಂದೆ ಹರಿಯುತ್ತದೆ.
ಈ ರೀತಿ ಹಿರೇಹಳ್ಳಕ್ಕೆ ಏಕಾ ಏಕಿ ನುಗ್ಗಿದ ನೀರಿಗೆ ಸಿಕ್ಕು ರೈತ ಸಾವನ್ನಪ್ಪಿದ್ದಾನೆ. ಇದೀಗ ರೈತನ ಶವ ಹುಡುಕಾಟಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.