ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಅರ್ಜಿದಾರರಿಗೆ 1 ಲಕ್ಷ ದಂಡ 
ರಾಜ್ಯ

ಬೆಂಗಳೂರು: ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ಅರ್ಜಿದಾರರಿಗೆ ರು.1 ಲಕ್ಷ ದಂಡ

ಬಿಜೆಪಿ ಶಾಸಕ ಪ್ರಭು ಚೌಹಾಣ್ ಜಾತಿ ಪ್ರಮಾಣಪತ್ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಹಿಂಪಡೆದ ಬೀರದ್ ನಿವಾಸಿಯೊಬ್ಬರಿಗೆ ನ್ಯಾಯಾಲಯದ ಸಮಯ ಹಾಳು ಮಾಡಿದ್ದ....

ಬೆಂಗಳೂರು: ಬಿಜೆಪಿ ಶಾಸಕ ಪ್ರಭು ಚೌಹಾಣ್ ಜಾತಿ ಪ್ರಮಾಣಪತ್ರ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ ಮೇಲ್ಮನವಿಯನ್ನು ಹಿಂಪಡೆದ ಬೀರದ್ ನಿವಾಸಿಯೊಬ್ಬರಿಗೆ ನ್ಯಾಯಾಲಯದ ಸಮಯ ಹಾಳು ಮಾಡಿದ್ದ ಕಾರಣ ಒಂದು ಲಕ್ಷ ರೂ. ದಂಡ ವಿಧಿಸಿದ ಅಪರೂಪದ ಘಟನೆ ನಡೆದಿದೆ. 
ಸಮಾಜ ಕಲ್ಯಾಣ ಇಲಾಖೆ ಕಮಿಷನರ್ ವಿಕಾಶ್ ಕುಮಾರ್ ವಿಕಾಶ್ ದಂಡ ವಿಧಿಸಿದ್ದು ಬೀದರ್ ನ ಔರಾದ್ ಶಾಸಕ ಪ್ರಭು ಚೌಹಾಣ್ ಜಾತಿ ಪ್ರಮಾಣಪತ್ರ ಸಂಬಂಧ ಬೀದರ್ ನಿವಾಸಿಯೊಬ್ಬರು ದಾವೆ ಹೂಡಿ ಕಲಾಪದ ಸಮಯ ವ್ಯರ್ಥ ಮಾಡಿದ್ದಾರೆಂದು ಆರೋಪಿಸಲಾಗಿದೆ. "ವಿಶೇಷ ಕೌನ್ಸಿಲ್ ಗಮನಿಸುವಂತೆ  2018 ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆ ಔರಾದ್ ನಿಂದ ಸ್ಪರ್ಧಿಸಿದ್ದ ಬಿಜೆಪೊಇ ಅಭ್ಯರ್ಥಿ ಪ್ರಭು ಅವರ ಜಾತಿಯ ಸಂಬಂಧ ಮನವಿ ಪತ್ರದಲ್ಲಿ ಗಂಭೀರ ವಿಚಾರಗಳಿದೆ.ಆದರೆ ಚುನಾವಣೆಗೆ ಮುನ್ನ ಅರ್ಜಿ ಸಲ್ಲಿಸಿದ್ದ ಬೀದರ್ ನಿವಾಸಿ ರಾವ್ ಇದೀಗ ಅರ್ಜಿ ಹಿಂಪಡೆಯಲು ಮುಂದಾಗಿದ್ದಾರೆ.
"ಈ ಮೂಲಕ ಅವರು ನ್ಯಾಯಾಲಯದ ಅಮೂಲ್ಯ ಸಮಯವನ್ನು ಮಾತ್ರವಲ್ಲ, ವಿಶೇಷ ಕೌನ್ಸಿಲ್, ಪ್ರಭು ಅವರ ಸಮಯವನ್ನೂ ವ್ಯರ್ಥಗೊಳಿಸಿದ್ದಾರೆ" ಮೇಲ್ಮನವಿ ಪ್ರಾಧಿಕಾರ ತನ್ನ ಆದೇಶದಲ್ಲಿ ತಿಳಿಸಿದೆ.ವಿಕಾಶ್  ಗಮನಿಸುವಂತೆ ಅರ್ಜಿದಾರ ರಾವ್ ನಡವಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.ಆದ ಕಾರಣ ನ್ಯಾಯಾಲಯದ ಸಮಯ ವ್ಯರ್ಥಗೊಳಿಸಿದ ಅರ್ಜಿದಾರರಿಗೆ ಒಂದು ಲಕ್ಷ ದಂಡ ವಿಧಿಸಲಾಗಿದೆ. 
ಪ್ರಕರಣವೇನು?
ಪ್ರಭು ಚೌಹಾಣ್ ಸಲ್ಲಿಸಿದ ಎಸ್ಸಿ' ಜಾತಿ ಪ್ರಮಾಣಪತ್ರದ ನ್ಯಾಯಬದ್ಧತೆ ಮತ್ತು ಸಿಂಧುತ್ವವನ್ನು ಪ್ರಶ್ನಿಸಿ ಬೀದರ್ ನಿವಾಸಿ ಶಂಕರ್ ರಾವ್  ಜಾತಿ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆಗಿದ್ದ ಬೀದರ್ ಉಪ ಕಮಿಷನರ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ವಾದ ಆಲಿಸಿದ ಬಳಿಕ  2017 ರ ನವೆಂಬರ್ 20 ರಂದು ಆ ಅರ್ಜಿಯನ್ನು ವಜಾಗೊಳಿಸಲಾಗಿತ್ತು.  ಇಷ್ಟಕ್ಕೆ ಸುಮ್ಮನಾಗದ ರಾವ್ ಕರ್ನಾಟಕ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಕಾಯ್ದೆಯಡಿಯಲ್ಲಿ ಕಮ್ಮಿಷನರ್ ಗೆ ಮತ್ತೆ ಮನವಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್