ಸಾಂದರ್ಭಿಕ ಚಿತ್ರ 
ರಾಜ್ಯ

ಧಾರವಾಡ: ಬರ್ಗರ್ ನಲ್ಲಿದ್ದ ಟೂತ್ ಪಿಕ್ ನುಂಗಿ ವ್ಯಕ್ತಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಧಾರವಾಡ ಮೂಲದ ಪರಿಸರವಾದಿಯೊಬ್ಬರು ಬರ್ಗರ್ ನಲ್ಲಿ ಸಿಕ್ಕ ಟೂತ್ ಪಿಕ್ ನುಂಗಿದ ಕಾರಣ ಕೆಲ ಕಾಲ ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ: ಧಾರವಾಡ ಮೂಲದ ಪರಿಸರವಾದಿಯೊಬ್ಬರು ಬರ್ಗರ್ ನಲ್ಲಿ ಸಿಕ್ಕ ಟೂತ್ ಪಿಕ್ (ಹಲ್ಲಿನನಡುವೆ ಸಿಕ್ಕಿದ ಆಹಾರದ ತುಣುಕನ್ನು ತೆಗೆಯಲು ಬಳಸುವ ಕಡ್ಡಿಯಂತಹಾ ಸಾಧನ) ನುಂಗಿದ ಕಾರಣ  ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ನಡೆದಿದ್ದ ಎನ್ ಜಿಒ ಒಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವಳಿ ನಗರದಲ್ಲಿ ಹೆಸರಾಗಿರುವ ಪರಿಸರವಾದಿ ಪ್ರಕಾಶ್ ಭಟಾಸ್ಪತ್ರೆಗೆ ದಾಖಲಾಗಿದ್ದರು. ಸಿಇಒ ಅವರ ವಿದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಅಲ್ಲಿ ನೀಡಲಾಗಿದ್ದ ಬರ್ಗರ್ ತಿಂದಿದ್ದರು. ಬರ್ಗರ್ ಜತೆ ನೀಡಿದ್ದ ಚೆರ್ರಿಯಲ್ಲಿದ್ದ ಟೂತ್ ಪಿಕ್ ನ್ನು ಸಹ ಅವರು ನುಂಗಿದ್ದರು. ಇದರಿಂದ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರ್ಯಕ್ರಮದ ನಡುವೆ ಅಸ್ವಸ್ಥರಾದ ಅವರನ್ನು ಎನ್ ಜಿಒ ಕಾರ್ಯಕರ್ತರು ಸಮೀಪದ ಶ್ರೇಯಾ ನಗರದಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರು ಭಟ್ ಅವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿದ್ದು ಅಂದು ಸಂಜೆ ಅವರು ಆಸ್ಪತ್ರೆಯಿಂದ ಮರಳೀದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!