ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಕೊಲೆ, ಇಬ್ಬರು ಕ್ಯಾಬ್ ಚಾಲಕರ ಬಂಧನ

ಪತ್ನಿಯೊಡನೆ ಅನೈತಿಕ ಸಂಬಂಧ ಹೊಂದಿದ್ದನೆನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ ಇಬ್ಬರು ಕ್ಯಾಬ್ ಚಾಲಕರನ್ನು ಬೆಂಗಳೂರು ಎಲೆಕ್ಟ್ರಾನಿಕ್ಸ್ ಸಿಟಿ ಪೋಲಿಸರು ಬಂಧಿಸಿದ್ದಾರೆ.

ಬೆಂಗಳೂರು: ಪತ್ನಿಯೊಡನೆ ಅನೈತಿಕ ಸಂಬಂಧ ಹೊಂದಿದ್ದನೆನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದ ಇಬ್ಬರು ಕ್ಯಾಬ್ ಚಾಲಕರನ್ನು ಬೆಂಗಳೂರು ಎಲೆಕ್ಟ್ರಾನಿಕ್ಸ್ ಸಿಟಿ ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ದೊಡ್ಡತೂಗೂರು ನಿವಾಸಿ  ಗಂಗರಾಜು (27) ಮತ್ತು ಆತನ ಸೋದರ ಸಂಬಂಧಿ ಪ್ರಗತಿನಗರ ನಿವಾಸಿಯಾದ  ಕೃಷ್ಣ (30) ಎಂದು ಗುರುತಿಸಲಾಗಿದೆ.ಇವರು ಅಕ್ಟೋಬರ್ 23ರಂದು ದೊಡ್ಡತೂಗೂರು ನವರೇ ಆಗಿದ್ದ  ಚಕ್ರಧರ್ (28) ಎನ್ನುವವನನ್ನು ಹತ್ಯೆ ಮಾಡಿದ್ದರು.
ಹತ್ಯೆಯಾಗಿದ್ದ ಚಕ್ರಧರ್ ಮೃತದೇಹವು ನಿರ್ಜನ ಪ್ರದೇಶದಲ್ಲಿ ಅರೆನಗ್ನ ಸ್ಥಿತಿಒಯಲ್ಲಿ ಅಕ್ಟೋಬರ್ 24ರಂದು ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೋಲೀಸರು ಹತ್ಯೆಯಾಗಿದ್ದ ವ್ಯಕ್ತಿಯ ಪಾಕೆಟ್ ನಲ್ಲಿದ್ದ ಮಹಿಳೆಯ ಫೋಟೋ ಹಾಗೂ ಆತನ ಫೋನ್ ಕರೆಗಳನ್ನು ಆಧರಿಸಿ ತನಿಖೆ ಕೈಗೊಂಡಾಗ ಆತ ಅದೇ ಪ್ರದೇಶದ ವಾಸಿಯಾಗಿದ್ದ ಮಹಿಳೆಯೊಡನೆ ಅನೈತಿಕ ಸಂಬಂಧ ಹೊಂದಿದ್ದದ್ದು ತಿಳಿದಿದೆ. 
ಮಹಿಳೆಯ ಪತಿ ಗಂಗರಾಜುವಿಗೆ ಪತ್ನಿಯ ಅನೈತಿಕ ಸಂಬಂಧ ತಿಳಿದಿದ್ದು ಈತನೇ ಚಕ್ರಧರನನ್ನು ಹತ್ಯೆ ಮಾಡಿದ್ದಾನೆ.ಹತ್ಯೆ ಬಳಿಕ ಪತಿ-ಪತ್ನಿಯರಿಬ್ಬರೂ ದೊಡ್ಡಬಳ್ಳಾಪುರಕ್ಕೆ ಪರಾರಿಯಾಗಿದ್ದರು. ಅಲ್ಲಿಯೇ ಅವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.ತನ್ನ ಹೆಂಡತಿ ಮತ್ತು ಮೃತ ಚಕ್ರಧರ್ ಸಂಸ್ಥೆಯೊಂದರಲ್ಲಿ ಹೌಸ್ ಕೀಪಿಂಗ್ ವೃತ್ತಿಯಲ್ಲಿದ್ದರು.ಅವ್ರು ಒಟ್ಟಾಗಿ ಕೆಲಸಕ್ಕೆ ತೆರಳುವುದು, ಒಟ್ಟಿಗೆ ಮನೆಗೆ ಆಗಮಿಸುವುದು ನಡೆಇದ್ದು ಕೆಲ ತಿಂಗಳ ಹಿಂದೆ ಗಂಗರಾಜುವಿನ ಪತ್ನಿಗೆ ಚಕ್ರಧರ್ "ಐ ಲವ್ ಯು" ಎಂದ್ಬ ಸಂದೇಶ ಕಳಿಸಿದ್ದಾನೆ.ಇದರಿಂದ ಕೋಪಗೊಂಡಿದ್ದ ಗಂಗರಾಜು ಚಕ್ರಧರ್ ನನ್ನು ಕೊಲ್ಲುವ ತೀರ್ಮಾನಕ್ಕೆ ಬಂದಿದ್ದನೆಂದು ಪೋಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT