ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ ದೀಪಾವಳಿ ಕೊಡುಗೆಯಾಗಿ ರೈತರ ಸಾಲ ಮನ್ನಾ ಯೋಜನೆಯ ಜಾರಿಗೆ ಮುಂದಾಗಿದೆ. ಸೋಮವಾರದಿಂದ ಕಲಬುರ್ಗಿಯ ಸೇಡಂ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಲ್ಪುರ ತಾಲೂಕುಗಳಲ್ಲಿ ಸಾಲ ಮನ್ನಾ ಯೋಜನೆಗೆ ಚಾಲನೆ ನೀಡಲಾಗಿದೆ.
ಮುಖ್ಯಮಂತ್ರಿ ಕಛೇರಿಯ ಹೇಳಿಕೆಯಂತೆ ಸ್ವತಃ ಮುಖ್ಯಮಂತ್ರಿಗಳೇ ಯೋಜನೆ ಅನುಷ್ಠಾನವನ್ನು ಪರಿಶೀಲಿಸುವವರಿದ್ದು ರೈತರು ಯಾವ ಕಾರಣಕ್ಕೆ ಗೊಂದಲಕ್ಕೀಡಾಗಬಾರದು ಎನ್ನಲಾಗಿದೆ.
ಭೂ ದಾಖಲೆ ಹಾಗೂ ಸರ್ವೆ ಸೆಟ್ಲ್ಮೆಂಟ್ಸ್ ಕಮಿಷನರ್ ನೇತೃತ್ವದ ತಂಡ ಸಾಲ ಮನ್ನಾ ಯೋಜನೆಗಾಗಿ ವಿಶೇಷವಾಗಿ ಸಾಫ್ಟ್ ವೇರ್ ಒಂದನ್ನು ತಯಾರಿಸಿದೆ. ಯೋಜನೆಯನ್ನು ಪಾರದರ್ಶಕವಾಗಿ ಕಾರ್ಯಗತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. "ರೈತರು ಭಯಪಡಬೇಕಾಗಿಲ್ಲ." ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.ರಾಷ್ಟ್ರೀಯ ಬ್ಯಾಂಕ್ ಗಳು ಲದ ಖಾತೆಗಳ ವಿವರಗಳನ್ನು ಒದಗಿಸಿವೆ ಆ ಮಾಹಿತಿಯನ್ನು ಸಾಫ್ಟ್ ವೇರ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು ಇದರ ಪರಿಶೀಲನೆ ನಡೆದಿದೆ.
ಮೊದಲ ಹಂತದಲ್ಲಿ ಸೋಮವಾರದಿಂದ ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಯೋಜನೆ ಕಾರ್ಯಾರಂಭಗೊಂಡಿದೆ."ಬ್ಯಾಂಕ್ ಗಳ ಮಾಹಿತಿ ಪರಿಶೀಲನೆ ಕಾರ್ಯ ಪೂರ್ಣಗೊಂಡ ಬಳಿಕ ರೈತರು ಸಾಲವನ್ನು ತೆಗೆದುಕೊಂಡ ದಾಖಲೆಗಳನ್ನು ಮತ್ತು ಆಧಾರ್ ಕಾರ್ಡ್ , ರೇಷನ್ ಕಾರ್ಡ್ ಸೇರಿ ರೈತರು ಹೊಂದಿರುವ ಭೂಮಿಯ ದಾಖಲೆ ಪರಿಶೀಲನೆ ನಡೆಯಲಿದೆ.ನವೆಂಬರ್ 12ರಿಂದ ಇತರೆ ತಾಲೂಕುಗಳಲ್ಲಿ ಸಹ ಈ ಯೋಜನೆ ಕಾರ್ಯಾಚರಣೆ ನಡೆಸಲಿದೆ.
ಸಹಕಾರ ವಲಯದ 20 ಲಕ್ಷ ಸಾಲದ ಖಾತೆಗಳ ಪರಿಶೀಲನೆ ಪ್ರಗತಿಯಲ್ಲಿದೆ. 6000 ಶಾಖೆಗಳಲ್ಲಿ ಈ ಕಾರ್ಯ ನಡೆದಿದೆ.ಪರಿಶೀಲನಾ ಕಾರ್ಯ ಈ ತಿಉಂಗಲಾಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಯೋಜನೆಯ ಅನುಷ್ಠಾನಕ್ಕಾಗಿ ಉಪ ಆಯುಕ್ತರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಶೀಘ್ರದಲ್ಲೇ ರೈತರಿಗೆ ಮಾರ್ಗದರ್ಶನ ನೀಡಲು ಸಹಾಯವಾಣಿ ಪ್ರಾರಂಭಿಸಲಾಗುವುದು ಎಂದು ಸಿಎಂ ಹೇಳಿದರು. ಯೋಜನೆಯ ಅನುಷ್ಠಾನದ ಬಗ್ಗೆ ರೈತರ ಕಾಳಜಿ ಅಥವಾ ಅನುಮಾನಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಒಂದು ಸಹಾಯವಾಣಿ ಪ್ರಾರಂಭಿಸುತ್ತದೆ.
ಹಾಸನದಲ್ಲಿ ಬ್ಯಾಂಕ್ ಗೆ ರೈತರಿಂದ ಮುತ್ತಿಗೆ ಯತ್ನ
ಹಾಸನದ ರಾಜ್ಯ ರೈತ ಸಂಘದ ಸದಸ್ಯರು ಹಾಗೂ ಇತರೆ ರೈತರು ನಗರದ ಆಕ್ಸಿಸ್ ಬ್ಯಾಂಕ್ ಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಘಟನೆ ನಡೆದಿದೆ. ರೈತರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದ್ದ ಬ್ಯಾಂಕ್ ಕ್ರಮದಿಂದ ಸಿಟ್ಟಾದ ರೈತರು ಬ್ಯಾಂಕ್ ಗೆ ಮುತ್ತಿಗೆ ಹಾಕುವುದಕ್ಕೆ ಪ್ರಯತ್ನಿಸಿದ್ದರು. ಬ್ಯಾಂಕ್ ನೋಟೀಸ್ ನೋಡಿದ್ದ ಅರಸಿಕೆರೆಯ ದೊಡ್ಡಮೇಟಿಕುರ್ಕೆ ಗ್ರಾಮದ ಶಶಿಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು.
ಮೈಸೂರಿನಲ್ಲಿ ಬ್ಯಾಂಕಿನ ಮುಂಭಾಗದಲ್ಲಿ ಪ್ರತಿಭಟನೆ
ಸಾಲ ಪಡೆದಿದ್ದ ರೈತರಿಗೆ ನೋಟೀಸ್ ನೀಡಿದ್ದ ಆಕ್ಸಿಸ್ ಬ್ಯಾಂಕ್ ಕ್ರ್ಮ ಖಂಡಿಸಿ ಮೈಸೂರಿನ ಫೆಡರೇಶನ್ ಆಫ್ ಸ್ಟೇಟ್ ಫಾರ್ಮರ್ಸ್ ಅಸೋಸಿಯೇಷನ್ಸ್ ಸದಸ್ಯರು ನಗರದಲ್ಲಿ ಬ್ಯಾಂಕಿನ ಹೊರಗೆ ಪ್ರತಿಭಟನೆ ನಡೆಸಿದರು. ವಿ ವಿ ಮೊಹಲ್ಲಾದಲ್ಲಿ ಪೋಸ್ಟ್ ಆಫೀಸ್ ಬಳಿ ಬ್ಯಾಂಕಿನ ಶಾಖೆಗೆ ನುಗ್ಗಲು ಯತ್ನಿಸಿದ ಅವರ ಪ್ರಯತ್ನ ವ್ಯರ್ಥವಾಘಿತ್ತು.
ಕೆಲ ಕಾಲ ಪ್ರತಿಭಟನೆ ನಡೆಸಿದ್ದ ರೈತರು ಘೋಷಣೆಗಳನ್ನು ಕೂಗಿದ್ದರು.ಚಾಮರಾಜನಗರ ಹಾಗೂ ಬೆಳಗಾವಿಯ 150 ಕ್ಕೂ ಹೆಚ್ಚಿನ ರೈತರಿಗೆ ಬಂಧನ ವಾರಂಟ್ ನೀಡಿದ್ದಕ್ಕಾಗಿ ಬ್ಯಾಂಕ್ ವಿರುದ್ಧ ಘೋಷಣೆ ಮೊಳಗಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos