ಕೇಂದ್ರ ಸಚಿವ ಹೆಚ್ ಎನ್ ಅನಂತ್ ಕುಮಾರ್ ರಾಜಕಾರಣದಲ್ಲಿ ನಾವು ಕಂಡಂತಹ ಅಪರೂಪದ ವ್ಯಕ್ತಿ, ಅವರ ನಿಧನ ದೇಶ, ರಾಜ್ಯಕ್ಕೆ ಅಷ್ಟೇ ಅಲ್ಲ, ನನಗೂ ವೈಯಕ್ತಿಕವಾಗಿ ನಷ್ಟ ಉಂಟುಮಾಡಿದೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬಸವನಗುಡಿಯಲ್ಲಿರುವ ಅನಂತ್ ಕುಮಾರ್ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ಅನಂತ್ ಕುಮಾರ್ ನಿಧನ ಕರ್ನಾಟಕಕ್ಕೆ ತುಂಬಲಾರದ ನಷ್ಟ. ಅವರೊಂದಿಗೆ ಆತ್ಮೀಯ ಸ್ನೇಹವಿತ್ತು. ಅವರ ಅಗಲಿಕೆಯನ್ನು ಊಹೆ ಮಾಡುವುದಕ್ಕೂ ಆಗುವುದಿಲ್ಲ, ಅನಂತ್ ಕುಮಾರ್ ನಿಧನ ದೇಶಕ್ಕಷ್ಟೇ ಅಲ್ಲ, ವೈಯಕ್ತಿಕವಾಗಿಯೂ ನಷ್ಟ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.