ರಾಜ್ಯ

ನನ್ನೆಲ್ಲಾ ಯಶಸ್ಸು ತಾಯಿ, ಪತ್ನಿ ಚೆನ್ನಮ್ಮಗೆ ಸಲ್ಲಬೇಕು- ಹೆಚ್. ಡಿ. ದೇವೇಗೌಡ

Nagaraja AB

ಬೆಂಗಳೂರು: ತಮ್ಮ ರಾಜಕೀಯ ಯಶಸ್ಸು ತಾಯಿ ಹಾಗೂ ಪತ್ನಿಗೆ ಸಲ್ಲಬೇಕೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಹೇಳಿದ್ದಾರೆ. ಅವರಿಲ್ಲದೆ ಹೋಗಿದ್ದರೆ ತಮ್ಮ ಜೀವನ ಏಕ ಮಾರ್ಗದಲ್ಲಿ ಸಾಗುತ್ತಿರಲಿಲ್ಲ ಎಂದು ಗುಣಗಾನ ಮಾಡಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟಿ  ದೇವೇಗೌಡರು,  ತಮ್ಮ ಯಶಸ್ಸಿಗಾಗಿ  ಬಹು ತ್ಯಾಗ ಮಾಡಿರುವ ಪತ್ನಿ ಚೆನ್ನಮ್ಮನ ಪಾತ್ರ ಮಹತ್ವದಿಂದ ಕೂಡಿದೆ. ನೆನ್ನೆಲ್ಲಾ ಯಶಸ್ಸು ಅವರಿಗೆ ಸಲ್ಲಬೇಕು ಎಂದರು.

1952ರಲ್ಲಿ ಮೈಸೂರು ಚಲೋ ಚಳವಳಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾಗ ಪೊಲೀಸರಿಂದ ಬಂಧನಕ್ಕೊಳಗಾಗಿ ಥಳಿತಕ್ಕೊಳಗಾಗಿದ್ದನ್ನು ನೆನಪಿಸಿಕೊಂಡರು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಗಂಟೆಗಟ್ಟಲೇ ಕೋರ್ಟ್ ಹಾಲ್ ನಲ್ಲಿ ನಿಲ್ಲಿಸಿದ್ದರು. ಇಂತಹ ಚಟುವಟಿಕೆಗಳನ್ನು ನಿಲ್ಲಿಸಿ ವಿದ್ಯಾಭ್ಯಾಸದ ಕಡೆಗೆ ಗಮನ ಅರಿಸುವಂತೆ ಸೂಚನೆ ನೀಡಿದ್ದರು ಎಂದರು.

 50ರ ದಶಕದ ಅಂತ್ಯದಲ್ಲಿ 22 ಸಾವಿರ ರೂಪಾಯಿ ಮೌಲ್ಯದ  ಗುತ್ತಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದೆ. ಆದರೆ. ಆ ವೇಳೆ 1.200 ರೂ.  ಪಾವತಿಸಲು ಹಣ ಇರಲಿಲ್ಲ. ಆದ್ದರಿಂದ  ತಮ್ಮ ಪತ್ನಿಯ ಚಿನ್ನಾಭರಣ ಮಾರಿ ಹಣ ಹೊಂದಿಸಲಾಗಿತ್ತು.

ಪತ್ನಿ ಚೆನ್ನಮ್ಮ ಅವರ ಪೋಷಕರನ್ನು ಕೇಳದೆ ಮದುವೆಗಾಗಿ ಮಾಡಿಸಿದ ಎಲ್ಲಾ ಚಿನ್ನಾಭರಣಗಳನ್ನು ನೀಡಿದರು.  ಸಾಲ ತೀರುವವರೆಗೂ ಚಿನ್ನಾಭರಣ ತೊಡುವುದಿಲ್ಲ ಎಂದು ಹೇಳಿದ್ದರು. ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳಲೆಂದು 9 ವರ್ಷಗಳ ಹಿಂದೆ ಆ ಅಭರಣಗಳನ್ನು ಚೆನ್ನಮ್ಮಗೆ ಹಿಂದಿರುಗಿಸಿರುವುದಾಗಿ ದೇವೇಗೌಡರು ಹೇಳಿದರು.

ಪತ್ನಿಯ ಸಹಕಾರವಿಲ್ಲದೆ ಯಾವೊಬ್ಬ ವ್ಯಕ್ತಿಯೂ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ. ಅದಕ್ಕೆ ನಾನೇ ಸಾಕ್ಷಿ ಎಂದ ದೇವೇಗೌಡರು, ಯಾವುದೇ ಸಮಸ್ಯ ಎದುರಿಸುವ ಶಕ್ತಿ ತಮ್ಮ ಪತ್ನಿಗಿದೆ. ಯಾರನ್ನೂ ಇಲ್ಲಿಯವರೆಗೂ ನೋವಿಸಿಲ್ಲ , ನನ್ನ ಬೆಳವಣಿಗೆಯಲ್ಲಿ  ತಮ್ಮ ತಾಯಿ ಹಾಗೂ ಪತ್ನಿಗೆ  ತುಂಬಾ ಶ್ರಮಪಟ್ಟಿರುವುದಾಗಿ ಅವರು ಹೇಳಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವೇರಾಜ ಅರಸು ಅವರೊಂದಿಗಿನ ಒಡನಾಟವನ್ನು  ನೆನಪು ಮಾಡಿಕೊಂಡ ದೇವೇಗೌಡರು.  ಅನೇಕ ಸಂದರ್ಭಗಳಲ್ಲಿ ಅವರು ನೀಡಿದ ಸಹಕಾರವನ್ನು ಸ್ಮರಿಸಿಕೊಂಡರು.

SCROLL FOR NEXT