ಪರೇಶ್ ಮೇಸ್ತಾ 
ರಾಜ್ಯ

ಪರೇಶ್ ಮೇಸ್ತ ಹತ್ಯೆ ಪ್ರಕರಣ: ಸಿಬಿಐನಿಂದ ಹೊನ್ನಾವರ, ಕುಮಟಾದಲ್ಲಿ ಕೆಲವರ ವಿಚಾರಣೆ!

ಕುಮಟಾದಲ್ಲಿ ಕಳೆದೊಂದು ವಾರದಿಂದ ಬೀಡು ಬಿಟ್ಟಿರುವ ಸಿಬಿಐ ಅಧಿಕಾರಿಗಳ ತಂಡ ಪರೇಶ್ ಮೇಸ್ತ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಕಾರವಾರ: ಕುಮಟಾದಲ್ಲಿ ಕಳೆದೊಂದು ವಾರದಿಂದ ಬೀಡು ಬಿಟ್ಟಿರುವ ಸಿಬಿಐ ಅಧಿಕಾರಿಗಳ ತಂಡ ಪರೇಶ್ ಮೇಸ್ತ ಹತ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಸಿಬಿಐ ಇನ್ಸ್ ಪೆಕ್ಟರನ್ನೊಳಗೊಂಡ ತಂಡ ಹೊನ್ನಾವರದಲ್ಲಿನ ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಹಲವು ಜನರನ್ನು ವಿಚಾರಣೆ ಮಾಡುತ್ತಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಹೊನ್ನಾವರ ಪಟ್ಟಣದ ಕೆರೆಯೊಂದರಲ್ಲಿ ಪರೇಶ್ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಇದೊಂದು ಕೊಲೆ ಎಂದು ಆತನ ಪೋಷಕರು ಆರೋಪಿಸಿದ್ದರು. ಪರೇಶ್ ಮೇಸ್ತಾನ ಹತ್ಯೆ ಬಳಿ ಬಳಿಕ ವಿವಿಧ ಸಂಘಟನೆಗಳು, ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು  ಕುಮಟಾ, ಶಿರಸಿ ಮತ್ತಿತರ ಕಡೆಗಳಲ್ಲಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದರು.

ಕುಮಟಾ ಹಾಗೂ ಶಿರಸಿಯಲ್ಲಿನ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಕಾರಣ ರಾಜ್ಯಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.

ಕಳೆದೊಂದು ವಾರದಿಂದ ಕುಮಟಾದಲ್ಲಿನ ಲೋಕೋಪಯೋಗಿ ಪರಿವೀಕ್ಷಣಾ ಕಟ್ಟಡದಲ್ಲಿರುವ ಸಿಬಿಐ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯ ಅವರನ್ನೊಳಗೊಂಡ ಮೂರು ತಂಡ ಪ್ರಕರಣ ಸಂಬಂಧ ವಿವಿಧ ಸಂಘಟನೆಗಳನ್ನು ಜನರನ್ನು ಪ್ರಶ್ನಿಸುತ್ತಿವೆ.

ನಿನ್ನೆ ದಿನ ವಿವಿಧ ಪಕ್ಷಗಳ ರಾಜಕೀಯ ಮುಖಂಡರು, ಸಂಘಟನೆಗಳ ಮುಖಂಡರು ಹಾಗೂ ಪತ್ರಕರ್ತರನ್ನು ಕರೆದು ವಿಚಾರಣೆ ನಡೆಸಲಾಗಿದೆ. ಪರೇಶ್ ಮೇಸ್ತಾ ಮೃತದೇಹ ಪತ್ತೆಯಾಗಿದ್ದ ಕೆರೆಗೂ ಭೇಟಿ ನೀಡಿದ್ದ ತಂಡ ಪರಿಶೀಲನ ನಡೆಸಿದೆ. ವಿಚಾರಣೆಗೆ ಸಹಕಾರ ನೀಡುವುದಾಗಿ ಹೊನ್ನಾವರ ಪೊಲೀಸರು ಹೇಳಿದ್ದಾರೆ.

ಇದಕ್ಕೂ ಮುಂಚಿತವಾಗಿ ಸಿಬಿಐ ಅಧಿಕಾರಿಗಳ ತಂಡ ಹೊನ್ನಾವರದಲ್ಲಿನ ಪರೇಶ್ ಮೇಸ್ತಾ ಕುಟುಂಬ ಸದಸ್ಯರು ಭೇಟ ಮಾಡಿದೆ. ಕಳೆದ 11 ತಿಂಗಳಲ್ಲಿ ಮೂರು ಬಾರಿ ಪರೇಶ್ ಮೇಸ್ತಾನ ಕುಟುಂಬ ಸದಸ್ಯರನ್ನು ಪ್ರಶ್ನಿಸಲಾಗಿದೆ.  ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ  ಕುಮಟಾಕ್ಕೆ ಮೇಸ್ತ ತಂದೆಯನ್ನು ಕರೆಯಲಾಗಿತ್ತು. ನಂತರ ಇದೇ ತಿಂಗಳ ಆರಂಭದಲ್ಲಿ ಚೆನ್ನೈಗೆ ಬರುವಂತೆ ಹೇಳಲಾಗಿತ್ತು.   ಆದರೆ, ಚೆನ್ನೈಗೆ ಹೋಗುವುದಕ್ಕೆ ಕುಟುಂಬ ಸದಸ್ಯರು ಆತಂಕ ವ್ಯಕ್ತಪಡಿಸಿದ್ದರು.

ವಿಚಾರಣೆಗಾಗಿ ಒಂದು ಬಾರಿ ಚೆನ್ನೈಗೆ ಬರುವಂತೆ ಹೊನ್ನಾವರದಲ್ಲಿನ ಅನೇಕ ಜನರಿಗೆ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. ಹತ್ತಿರದಲ್ಲಿಯೇ ಇರುವ ಸ್ಥಳಗಳಲ್ಲಿ ಸಿಬಿಐ ಏಕೆ ಪ್ರಶ್ನೆ  ವಿಚಾರಣೆ ಮಾಡುತ್ತಿಲ್ಲ ಎಂದು ಪರೇಶ್ ಮೇಸ್ತಾ ಕುಟುಂಬ ಸದಸ್ಯರು  ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

70ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: ಎಲ್ಲೆಡೆ ಹರಡಿದ ಕನ್ನಡದ ಕಂಪು, ಕಂಠೀರವ ಸ್ಟೇಡಿಯಂನಲ್ಲಿ ಸಕಲ ಸಿದ್ಧತೆ

ನಾಡಿನಾದ್ಯಂತ 70ನೇ ಕನ್ನಡ ರಾಜ್ಯೋತ್ಸವ ಆಚರಣೆ: ಜನತೆಗೆ CM-DCM ಸೇರಿ ಗಣ್ಯರಿಂದ ಶುಭಾಶಯ

70ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಜಾತಿ ಗಣತಿ: ಮನೆ ಮನೆ ಸಮೀಕ್ಷೆ ಮುಕ್ತಾಯ; ರಾಜ್ಯದ ಒಟ್ಟು ಜನಸಂಖ್ಯೆ ಎಷ್ಟು ಗೊತ್ತಾ?

ದೇಶದ ಮೊದಲ 'ಕಡುಬಡತನ ಮುಕ್ತ' ರಾಜ್ಯ: ಘೋಷಣೆಗೆ ಕೇರಳ ಸಜ್ಜು, ಆರ್ಥಿಕ ತಜ್ಞರ ಆಕ್ಷೇಪವೇನು?

SCROLL FOR NEXT