ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ರೈತರು 
ರಾಜ್ಯ

ದಶಕದ ಹಿಂದೆ ತೆಗೆದುಕೊಂಡ ಸಾಲ ಇನ್ನೂ ಹಿಂತಿರುಗಿಸದ ರೈತರು!

ರಾಜ್ಯದ ಶಕ್ತಿ ಕೇಂದ್ರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ...

ಬೆಂಗಳೂರು:  ರಾಜ್ಯದ ಶಕ್ತಿ ಕೇಂದ್ರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಗ್ಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ ಮಾಡುತ್ತಿದ್ದರೆ, ರೈತರು ದಶಕಗಳ ಹಿಂದೆ ತಾವು ತೆಗೆದುಕೊಂಡ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗುತ್ತಿಲ್ಲ ಎಂಬ ತಮ್ಮ ಸಂಕಷ್ಟದ ಬಗ್ಗೆ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೆಲವರು ದಶಕಗಳ ಹಿಂದೆಯೇ ಸಾಲ ತೆಗೆದುಕೊಂಡಿದ್ದರು. ಕೆಲವು ಸರ್ಕಾರಗಳು ರೈತರ ಸಾಲ ಮನ್ನಾ ಘೋಷಿಸಿದ್ದರೂ ಕೂಡ ಕೆಲವು ರೈತರಿಗೆ ಅದರ ಫಲ ಸಿಕ್ಕಿಲ್ಲ ಎಂಬುದು ಇಲ್ಲಿ ಮುಖ್ಯ ವಿಷಯ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ 8 ಎಕರೆಗೂ ಅಧಿಕ ಜಮೀನು ಹೊಂದಿರುವ ನಾಗಪ್ಪ ಮೆಡ್ಲೆರಿ 16 ವರ್ಷಗಳ ಹಿಂದೆ ಪಡೆದುಕೊಂಡ ಸಾಲವನ್ನು ಇನ್ನೂ ಹಿಂತಿರುಗಿಸಿಲ್ಲ. ಅವರು ಟ್ರಾಕ್ಟರ್ ಖರೀದಿಸಲೆಂದು 1.5 ಲಕ್ಷ ಸಾಲವನ್ನು ಪಡೆದುಕೊಂಡಿದ್ದರು. ಸಾಲಕ್ಕೆ ಬಡ್ಡಿ ಸೇರಿಸಿ 2.2 ಲಕ್ಷ ರೂಪಾಯಿಯನ್ನು ಇದುವರೆಗೆ ನೀಡಿದ್ದರೆ ಇನ್ನೂ 80 ಸಾವಿರ ರೂಪಾಯಿ ಸಾಲ ಉಳಿಸಿಕೊಂಡಿದ್ದಾರೆ. ಅದಲ್ಲದೆ ಮೂರು ವರ್ಷಗಳ ಹಿಂದೆ 2.10 ಲಕ್ಷ ರೂಪಾಯಿಗಳನ್ನು ಸಾಲ ಪಡೆದುಕೊಂಡಿದ್ದನ್ನು ಸಹ ಹಿಂತಿರುಗಿಸಿಲ್ಲ.

ಇಷ್ಟು ಸುದೀರ್ಘ ವರ್ಷದಿಂದ ಸಾಲವನ್ನು ಹಿಂತಿರುಗಿಸಲು ಸಾಧ್ಯವಾಗಲಿಲ್ಲವೇಕೆ ಎಂದು ಕೇಳಿದರೆ ಸಾಲಮನ್ನಾ ಘೋಷಣೆಯಾಗುವ ಮುನ್ನ ಕೂಡ ನಾನು ಯಾವುದೇ ಸೌಲಭ್ಯ ಪಡೆದುಕೊಂಡಿಲ್ಲ. ಅದಕ್ಕೆ ಹೊರತುಪಡಿಸಿ ನೆರೆ, ಬರಗಾಲ, ಮಳೆಗಾಲದಲ್ಲಿ ಸಕಾಲಕ್ಕೆ ಮಳೆಯಾಗದೆ ಕೊರತೆಯಾಗಿದ್ದರಿಂದ ಬೆಳೆ ಬಾರದೆ ಹಣಕಾಸಿನ ಕೊರತೆ ಎದುರಿಸುತ್ತಿದ್ದೆ ಎಂದರು.

ಮತ್ತೊಬ್ಬ ರೈತ ಲಿಂಗಪ್ಪ ಅನವೇರಿ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಮೂರು ಎಕರೆ ಜಮೀನನ್ನು ಹೊಂದಿದ್ದು, 2006ರಲ್ಲಿ ತೆಗೆದುಕೊಂಡ ಒಂದೂವರೆ ಲಕ್ಷ ಸಾಲವನ್ನು ಹಿಂತಿರುಗಿಸಲಿಲ್ಲ. 1998ರಲ್ಲಿ ಅಂದಿನ ಸರ್ಕಾರ ಸಾಲಮನ್ನಾ ಘೋಷಿಸಿದ್ದರೂ ಕೂಡ ಬ್ಯಾಂಕಿನ ಅಧಿಕಾರಿಗಳ ಒತ್ತಡದಿಂದಾಗಿ ಸಾಲ ಹಿಂತಿರುಗಿಸಬೇಕಾಗಿತ್ತು. 8 ದಿನಗಳ ನಂತರ ಸರ್ಕಾರ ಸಾಲಮನ್ನಾ ಘೋಷಿಸಿತ್ತು.

ಈ ಬಗ್ಗೆ ಬ್ಯಾಂಕಿನಲ್ಲಿ ಕೇಳಿದರೆ ಸರ್ಕಾರದಿಂದ ಸರಿಯಾಗಿ ಜಾರಿಯಾಗಬೇಕು, ನಂತರವಷ್ಟೇ ಬ್ಯಾಂಕು ಸಾಲ ಮನ್ನಾವಾಗಲು ಸಾಧ್ಯ ಎನ್ನುತ್ತಾರೆ. ಹಾವೇರಿ ತಾಲ್ಲೂಕಿನ ಮತ್ತೊಬ್ಬ ರೈತ ಎಂ ಎಂ ಪಾಟೀಲ್, ಅಧಿಕಾರದಲ್ಲಿದ್ದ ಎಲ್ಲಾ ಮೂರು ಪಕ್ಷಗಳು ತನ್ನ ಸಾಲಮನ್ನಾ ಭರವಸೆಯನ್ನು ಈಡೇರಿಸಿಲ್ಲ. 2009ರಲ್ಲಿ ತೆಗೆದುಕೊಂಡ 65 ಸಾವಿರ ರೂಪಾಯಿ ಸಾಲವನ್ನು ಮನ್ನಾ ಮಾಡಬೇಕಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ