ಸಂಗ್ರಹ ಚಿತ್ರ 
ರಾಜ್ಯ

ಎಲ್ಲೆಂದರಲ್ಲಿ ಕಸ, ಮೂತ್ರ ವಿಸರ್ಜನೆ ಮಾಡುವವರ ವಿರುದ್ಧ ಬಿಬಿಎಂಪಿ ಕಾರ್ಯಾಚರಣೆ: ರೂ.4.8 ಲಕ್ಷ ದಂಡ ಸಂಗ್ರಹ

ಎಲ್ಲೆಂದರಲ್ಲಿ ಕಸ ಹಾಗೂ ಮೂತ್ರ ವಿರ್ಜನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಮಾರ್ಷಲ್ ಗಳು ಈ ವರೆಗೂ ರೂ.4.8 ಲಕ್ಷ ದಂಡವನ್ನು ಸಂಗ್ರಹಿಸಿದ್ದಾರೆಂದು ತಿಳಿದುಬಂದಿದೆ...

ಬೆಂಗಳೂರು: ಎಲ್ಲೆಂದರಲ್ಲಿ ಕಸ ಹಾಗೂ ಮೂತ್ರ ವಿರ್ಜನೆ ಮಾಡುವವರ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವ ಬಿಬಿಎಂಪಿ ಮಾರ್ಷಲ್ ಗಳು ಈ ವರೆಗೂ ರೂ.4.8 ಲಕ್ಷ ದಂಡವನ್ನು ಸಂಗ್ರಹಿಸಿದ್ದಾರೆಂದು ತಿಳಿದುಬಂದಿದೆ. 
ಎಲ್ಲೆಂದರಲ್ಲಿ ಕಸ ಹಾಗೂ ಮೂತ್ರ ವಿಸರ್ಜನೆ ಮಾಡುವವರಿಗೆ ದಂಡ ವಿಧಿಸುವ ನಿಯಮವನ್ನು ಅ.24 ರಂದೇ ಜಾರಿ ಮಾಡಲಾಗಿತ್ತು. ಇದರಂತೆ ನವೆಂಬರ್ 20 ರವರೆಗೂ 4,925 ಜನರಿಗೆ ದಂಡವನ್ನು ವಿಧಿಸಲಾಗಿದೆ. ರಾತ್ರಿ ವೇಳೆ ಗಸ್ತು ತಿರುಗುವ ಮಾರ್ಷಲ್ ಗಳು ರೂ.2.3 ಲಕ್ಷ ಸಂಗ್ರಹಿಸಿದ್ದಾರೆಂದು ಅಧಿಕಾರಿಗಳು ಹೇಳಿದ್ದಾರೆ. 
ಬಿಬಿಎಂಪಿ ಜೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಹಾಗೂ ಅಸಿಸ್ಟೆಂಟ್ ಎಕ್ಸಿಕ್ಯುಟಿನ್ ಇಂಜಿನಿಯರ್ಸ್ ಗಳು ಪ್ರತೀನಿತ್ಯ ರಸ್ತೆಗಳಲ್ಲಿ ತಪಾಸಣೆ ನಡೆಸುತ್ತಿದ್ದು, ಈವರೆಗೂ ರೂ.2.5 ಲಕ್ಷ ಸಂಗ್ರಹಿಸಿದ್ದಾರೆ. 8 ವ್ಯಾಪ್ತಿಯಲ್ಲಿ ಪ್ರತೀಯೊಂದು ಪ್ರದೇಶದಲ್ಲಿಯೂ 3-4 ಮಾರ್ಷಲ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿಸಿದ್ದಾರೆ. 
ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಮಾತನಾಡಿ, 198 ವಾರ್ಡ್ ಗಳಲ್ಲಿ ಮಾರ್ಷಲ್ ಗಳನ್ನು ನಿಯೋಜನೆ ಮಾಡಿದ ಬಳಿಕ ಕಾರ್ಯಾಚರಣೆ ಉತ್ತಮವಾಗಿ ನಡೆಯುತ್ತಿದೆ. ಸಾಕಷ್ಟು ಸಮಸ್ಯೆಗಳು ನಿಯಂತ್ರಣಗೊಂಡಿವೆ. ಎಲ್ಲೆಂದರಲ್ಲಿ ಕಸ ಹಾಕುವ ಸಂಖ್ಯೆ ಕೂಡ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. 
ಹಗಲು ಹಾಗೂ ರಾತ್ರಿ ಎರಡೂ ಸಂದರ್ಭದಲ್ಲಿಯೂ ಮಾರ್ಷಲ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಶೀಲನೆಗೆ ಮೀಸಲಿಟ್ಟ ಮಾರ್ಷಲ್ ಗಳನ್ನು ನಿಯೋಜಿಸುವ ಅಗತ್ಯವಿದೆ. ಒಮ್ಮೆ ಮಾರ್ಷಲ್ ಗಳನ್ನು ನಿಯೋಜಿಸಿದ ಬಳಿಕ ಎಲ್ಲಾ ಜವಾಬ್ದಾರಿಯನ್ನು ಅವರಿಗೆ ನೀಡಲಾಗುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ. 
ನಿಯಮಗಳನ್ನು ಉಲ್ಲಂಘಿಸುವ ಕೆಲ ಜನರು ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮಾರ್ಷಲ್ ಗಳ ಬಳಿ ಗುರುತಿನ ಚೀಟಿ ಇಲ್ಲದ ಕಾರಣ ಅವರೊಂದಿಗೆ ಮಾತಿನ ಚಕಮಕಿ ನಡೆಸುತ್ತಿದ್ದಾರೆ. ಮಾರ್ಷಲ್ ಗಳಿಗೆ ಶೀಘ್ರದಲ್ಲಿಯೇ ಐಡಿ ಕಾರ್ಡ್ ಗಳನ್ನು ನೀಡಲಾಗುತ್ತದೆ. ಇದರಿಂದ ಸಮಸ್ಯೆಗಳು ದೂರಾಗುತ್ತದೆ. ಜನರಿಂದ ಸಮಸ್ಯೆಗಳು ಎದುರಾದಾಗ ಮಾರ್ಷಲ್ ಗಳು ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಬಹುದು. ಮಾರ್ಷಲ್ ಗಳ ಕಾರ್ಯಗಳ ಕುರಿತಂತೆ ಪೊಲೀಸರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್