ಸಂಗ್ರಹ ಚಿತ್ರ 
ರಾಜ್ಯ

ಕಿಡಿಗೇಡಿಗಳ ಬೆದರಿಕೆಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳು: ಪ್ರೇಮಿ ಸಾವು, ಪ್ರೇಯಸಿ ಸ್ಥಿತಿ ಗಂಭೀರ

ಕಿಡಿಗೇಡಿಗಳ ನ್ಬೆದರಿಕೆಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳ ಪೈಕಿ ಪ್ರಿಯತಮ ಸಾವನ್ನಪ್ಪಿದ್ದು ಪ್ರೇಯಸಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ: ಕಿಡಿಗೇಡಿಗಳ ನ್ಬೆದರಿಕೆಗೆ ಹೆದರಿ ವಿಷ ಸೇವಿಸಿದ ಪ್ರೇಮಿಗಳ ಪೈಕಿ ಪ್ರಿಯತಮ ಸಾವನ್ನಪ್ಪಿದ್ದು ಪ್ರೇಯಸಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಸಂಜಯ್ (22) ಮೃತ ಪ್ರೇಮಿ ಎನ್ನಲಾಗಿದ್ದು ಪ್ರೇಯಸಿಗೆ ಶಿವಮೊಗ್ಗದ ಮೆಗ್ಗಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗುತ್ತಿದ್ದು ಚೇತರಿಕೆ ಕಾಣುತ್ತಿದ್ದಾಳೆ.
ಘಟನೆ ವಿವರ
ಹೊಸೂರು ಮಟ್ಟಿಯ ನಿವಾಸಿ ಸಂಜಯ್ ಕಳೆದ ಒಂದು ವರ್ಷದಿಂದ ರಾಗಿಹೊಸಹಳ್ಳಿಯ ಯುವತಿಯನ್ನು ಪ್ರೀತಿಸುತ್ತಿದ್ದ.ಪ್ರೇಮಿಗಳು ಏಕಾಂತದಲ್ಲಿದ್ದ ವೇಳೆ ಆಯನೂರು ಗ್ರಾಮದ ಕೆಲ ಯುವಕರು ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದಾರೆ. 
ಸಂಜಯ್ ಗೆ ಪದೇ ಪದೇ ಕರೆ ಮಾಡಿದ ಯುವಕರು ತಮಗೆ ಹಣ ನೀಡುವಂತೆ ಕೇಳಿದ್ದಲ್ಲದೆ ಹಾಗೊಂದು ವೇಳೆ ಹಣ ನಿಡದೆ ಹೋದಲ್ಲಿ ವೀಡಿಯೋವನ್ನು ಫೇಸ್ ಬುಕ್, ವಾಟ್ಸ್ ಅಪ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಕಿಡಿಗೇಡಿ ಯುವಕರು ಸಂಜಯ್ ಗೆ 5 ಲಕ್ಷ ನೀಡುವಂತೆ ಪೀಡಿಸಿದ್ದರೆಂದು ಪೋಲೀಸರು ವಿವರಿಸಿದ್ದಾರೆ. ಬೆದರಿಕೆಯಿಂದ ಬೇಸತ್ತ ಪ್ರೇಮಿಗಳು ಸೋಮವಾರದಂದು ಕುಂಸಿ ಸಮೀಪದ ಮಂಡಘಟ್ಟದಜಮೀನಿನಲ್ಲಿ  ಒಟ್ಟಿಗೇ ವಿಷ ಸೇವಿಸಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನೂ ಶಿವಮೊಗ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಂಜಯ್ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ. ಮೃತನ ತಾಯಿ ಸಂಜಯ್ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕೆಂದ್ಯು ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.
ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!