ದಯಾನಂದಸ್ವಾಮಿ 
ರಾಜ್ಯ

ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ: ಸ್ವಾಮೀಜಿ ವಿರುದ್ಧ ದೂರು ದಾಖಲು

ಸಿನಿಮಾದಲ್ಲಿ ಅವಕಾಶ ನೀಡುವ ಆಮಿಷವೊಡ್ಡಿ ಕಿರುತೆರೆ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಬೆಂಗಳೂರು ಹೊರವಲಯ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಸ್ವಾಮೀಜಿ ದಯಾನಂದಸ್ವಾಮಿ....

ಮಂಗಳೂರು: ಸಿನಿಮಾದಲ್ಲಿ ಅವಕಾಶ ನೀಡುವ ಆಮಿಷವೊಡ್ಡಿ ಕಿರುತೆರೆ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದ ಬೆಂಗಳೂರು ಹೊರವಲಯ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಸ್ವಾಮೀಜಿ ದಯಾನಂದಸ್ವಾಮಿ ಅಲಿಯಾಸ್ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಮಂಗಳೂರಿನಲ್ಲಿ ಎಫ್‍ಐಆರ್ ದಾಖಲಾಗಿದೆ. 
ಮಂಗಳೂರು ಕದ್ರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ವಾಮೀಜಿ ಸೇರಿ ಐವರ ವಿರುದ್ಧ ತೀರ್ಥಹಳ್ಳಿ ಮೂಲದ ಕಿರುತೆರೆ ನಟಿ ದೂರು ಸಲ್ಲಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿದ್ದ ಸ್ವಾಮೀಜಿ ನಟಿಯ ಜತೆ ದೈಹಿಕ ಸಂಪರ್ಕವನ್ನು ಬೆಳೆಸಲು ಯತ್ನಿಸಿದ್ದ ಎನ್ನಲಾಗಿದೆ.
ತೀರ್ಥಹಳ್ಳಿಯ ನಟಿ ಕನ್ನಡ ಕಿರುತೆರೆ ಧಾರಾವಾಹಿ ಸೇರಿ ಕೆಲ ಬಿ ಗ್ರೇಡ್ ಸಿನಿಮಾಗಳಲ್ಲಿ ಸಹ ನಟಿಸಿದ್ದರು. ಆಕೆಗೆ ಚಲನಚಿತ್ರಗಳಲ್ಲಿ ಅವಕಾಶ ಕಲ್ಪಿಸಿಕೊಡುವುದಾಗಿ ನಂಬಿಸಿದ ಸ್ವಾಮೀಜಿ ಬೆಂಹಳೂರಿಗೆ ಕರೆದೊಯ್ಯುವ ಮುನ್ನ ಮಂಗಳೂರು ಹಂಪನಕಟ್ಟೆಯಲ್ಲಿರುವ ತಾಜ್ ಮಹಲ್ ಹೋಟೆಲ್ ಗೆ ಕರೆದಿದ್ದರು. ಬಳಿಕ ಆಕೆಯನ್ನು ಬೆಂಗಳೂರಿಗೆ ಕರೆತಂದಿದ್ದಾರೆ.
ಕಿರುತೆರೆ ನಟಿಯೊಡನೆ ಸ್ವಾಮೀಜಿ ರಾಸಲೀಲೆ ನಡೆಸಿದ್ದ ವೀಡಿಯ್ತೋ ದೃಶ್ಯ ಕಳೆದ ಅಕ್ಟೋಬರ್ ನಲ್ಲಿ ಮಾದ್ಯಮವೊಂದರಲ್ಲಿ ಪ್ರಸಾರವಾಗಿತ್ತು. 2014 ಜನವರಿ 4 ರಂದು ವೀಡಿಯೋ ಮಾಡಲಾದ ದೃಶ್ಯಗಳು ಮಾದ್ಯಮದಲ್ಲಿ ಹರಿದಾಡುತ್ತಿದ್ದಂತೆ ಸ್ವಾಮೀಜಿ ಕಣ್ಮರೆಯಾಗಿದ್ದರು. ಜನರು ಪ್ರತಿಭಟನೆಗಿಳಿದ ಬೆನ್ನಲ್ಲೇ ವೀಡಿಯೋದಲ್ಲಿದ್ದದ್ದು ನಾನಲ್ಲ ಎಂದು ನಟಿ ಸಹ ಸಮಜಾಯಿಷಿ ನೀಡಿದ್ದರು. ಆದರೆ ಮತ್ತೆ ಈಗ ಅದೇ ನಟಿ ಸ್ವಾಮೀಜಿ ವಿರುದ್ಧ ದೂರಿತ್ತಿದ್ದಾರೆ.
ಇದೀಗ ಕದ್ರಿ ಪೋಲೀಸರು ದೂರು ದಾಖಲಿಸಿಕೊಂಡಿದು ತನಿಖೆ ಕೈಗೊಂಡಿದ್ದಾರೆ.\

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT