ಸಂಗ್ರಹ ಚಿತ್ರ 
ರಾಜ್ಯ

ವಿಜಯಪುರ: ಪತ್ನಿ ಅಂತ್ಯ ಸಂಸ್ಕಾರಕ್ಕೆ ಬಂದ ಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ್ರು!

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯ ಅಂತ್ಯ ಸಂಸ್ಕಾರಕ್ಕೆಂದು ಆಗಮಿಸಿದ್ದ ಪತಿಯನ್ನು ಸಂಬಂಧಿಕರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪತ್ನಿಯ ಅಂತ್ಯ ಸಂಸ್ಕಾರಕ್ಕೆಂದು ಆಗಮಿಸಿದ್ದ ಪತಿಯನ್ನು ಸಂಬಂಧಿಕರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ತಾಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ನಡೆದ ಪ್ರಕರಣದಲ್ಲಿ ರಾಜು ತಾಂಬೆ(23) ಹತ್ಯೆಗೀಡಾಗಿದ್ದಾನೆ. ಈತ ತನ್ನ ಪತ್ನಿ ಕಾಜಲ್ ತಾಂಬೆ(20)  ಅಂತ್ಯ ಸಂಸ್ಕಾರಕ್ಕೆ ಬಂದಿದ್ದ ವೇಳೆ ಕಾಜಲ್ ಪೋಷಕರು ಹಾಗೂ ಸಂಬಂಧಿಕರಿಂದ ಕೊಲೆಯಾಗಿದ್ದಾನೆ.
ಘಟನೆ ವಿವರ
ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ ರಾಜು ಹಾಗೂ ಕಾಜಲ್ ನಡುವೆ ವರ್ಷದ ಕೆಳಗೆ ಸಣ್ಣದಾಗಿ ಪ್ರಾರಂಭವಾಗಿದ್ದ ಜಗಳ ಇತ್ತೀಚೆಗೆ ದೊಡ್ಡ ಕಲಹದ ಸ್ವರೂಪ ತಳೆದಿತ್ತು. ಇಬ್ಬರ ಜಗಳ ಬಿಡಿಸಲು ಹಿರಿಯರು ರಾಜಿ ಸಂಧಾನವನ್ನೂ ನಡೆಸಿದ್ದರು. ಆದರೆ ಸಮಸ್ಯೆ ಬಗೆಹರಿದಿರಲಿಲ್ಲ.
ಭಾನುವಾರ ಸಂಜೆ ಕಾಜಲ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಶವ ಸಂಸ್ಕಾರಕ್ಕಾಗಿ ಅದೇ ದಿನ ಖಿಲಾರಹಟ್ಟಿ ಸ್ಮಶಾನಕ್ಕೆ ತರಲಾಗಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಪತಿಯನ್ನು ಕಂಡು ಕ್ರೋಧಗೊಂಡ ಆಕೆಯ ಪೋಷಕರು ಗಂಡನೇ ಈಕೆಯನ್ನು ಕೊಂದಿದ್ದಾನೆ ಎಂದು ಆಕ್ರೋಶಗೊಂಡು ಆತನನ್ನು ಕೊಲೆ ಮಾಡಿದ್ದಾರೆ.
ಅಂತ್ಯ ಸಂಸ್ಕಾರಕ್ಕೆ ತಂದಿದ್ದ ಕಟ್ಟಿಗೆ, ಕಲ್ಲುಗಳಿಂದಲೇ ರಾಜುವನ್ನು ಜಜ್ಜಿ ಕೊಲ್ಲಲಾಗಿದೆ.ಈ ವೇಳೆ ರಾಜುವನ್ನು ರಕ್ಷಿಸಲು ಮುಂದಾದ ಆತನ ಸೋದರ ಸಂಜಯ್  ಮೇಲೆ ಸಹ ಹಲ್ಲೆಯಾಗಿದೆ.ಹಲ್ಲೆಗೊಳಗಾದ ಸಂಜಯ್ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೀಗೆ ಸೇರಿದ್ದಾರೆ.
ರಾಜು ಕೊಲೆಯ ನಡುವೇಯೇ ಭಾನುವಾರ ತಡರಾತ್ರಿ ಕಾಜಲ್ ಅಂತ್ಯಸಂಸ್ಕಾರ ತರಾತುರ್ತಿಯಲ್ಲಿ ನಡೆದಿದೆ. ಘಟನೆ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದು ಬಬಲೇಶ್ವರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೆದುಳು ತಿನ್ನುವ ಅಮೀಬಾ: ಶಬರಿಮಲೆ ಭಕ್ತರಿಗೆ ರಾಜ್ಯ ಆರೋಗ್ಯ ಇಲಾಖೆಯ ಮಾರ್ಗಸೂಚಿ, ಮುನ್ನೆಚ್ಚರಿಕೆ ಕ್ರಮಗಳೇನು?

ಬೆಳಗಾವಿ: ಮಲಗಿದ್ದಲ್ಲೇ ಜೀವಬಿಟ್ಟ ಮೂವರು ಯುವಕರು; ನಿಗೂಢ ಸಾವಿನಿಂದ ಪೋಷಕರ ಆಕ್ರಂದನ!

POCSO case: ಯಡಿಯೂರಪ್ಪಗೆ ಸಂಕಷ್ಟ, ಡಿ. 2 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್!

'ಆಪರೇಷನ್ ಕಾಡಾನೆ' ಸಕ್ಸಸ್: ನಾಲೆಗೆ ಬಿದ್ದು ಒದ್ದಾಡುತ್ತಿದ್ದ ಗಜರಾಜನ ರಕ್ಷಣೆ, ಅರಣ್ಯ ಇಲಾಖೆ ಸಾಹಸಕ್ಕೆ ಶ್ಲಾಘನೆ! Video

ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಜಾಲ: 14 ವಿದೇಶಿಯರು ಸೇರಿ 19 ಜನರ ಬಂಧನ, ರೂ. 7.7 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ!

SCROLL FOR NEXT