ಅಂಬರೀಷ್ ಗೆ ಅಂತಿಮ ನಮನ ಸಲ್ಲಿಸಿದ ಶಿವರಾತ್ರೀ ದೇಶೀ ಕೇಂದ್ರ ಸ್ವಾಮೀಜಿ 
ರಾಜ್ಯ

ಮರೆಯಾದ 'ಮಂಡ್ಯದ ಗಂಡು': ಮತ್ತೊಮ್ಮೆ ಹುಟ್ಟಿ ಬಾ ಸಕ್ಕರೆ ಜಿಲ್ಲೆ ಅಭಿಮಾನಿಗಳ ಅಶ್ರುತರ್ಪಣ!

ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಮಂಡ್ಯಗೆ ಹೆಲಿಕಾಪ್ಟರ್ ನಲ್ಲಿ ತಂದಿಳಿಸುತ್ತಿದ್ದಂತೆ ಅಭಿಮಾನಿಗಳ ದುಃಖದ ಕಟ್ಟೆಯೊಡೆದಿತ್ತು, ...

ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಮಂಡ್ಯಗೆ ಹೆಲಿಕಾಪ್ಟರ್ ನಲ್ಲಿ ತಂದಿಳಿಸುತ್ತಿದ್ದಂತೆ ಅಭಿಮಾನಿಗಳ ದುಃಖದ ಕಟ್ಟೆಯೊಡೆದಿತ್ತು, ಮಂಡ್ಯದಲ್ಲಿ ಬಸ್  ನಾಲೆಗೆ ಬಿದ್ದು 30 ಮಂದಿ ಸಾವನ್ನಪ್ಪಿದ ನಂತರ ಅಂಬರೀಷ್ ಸಾವು ಜಿಲ್ಲೆಯ ಜನತೆಗೆ ಮತ್ತೊಂದು ಆಘಾತ ನೀಡಿತ್ತು.
ತನ್ನ ನೆಚ್ಚಿನ ನಟನಿಗೆ ಅಂತಿಮ ನಮನ ಸಲ್ಲಿಸಲು ಬೆಂಗಳೂರಿಗೆ ಬರುತ್ತಿದ್ದ ಸಾವಿರಾರು ಅಭಿಮಾನಿಗಳು ವಾಪಸ್ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂ ಗೆ ತೆರಳಿದರು. ಮಂಡ್ಯದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡುವಂತೆ ಅಂಬಿ ಕುಟುಂಬಸ್ಥರ ಹಾಗೂ ಅಭಿಮಾನಿಗಳ ಮನವಿಗೆ ಸ್ಪಂದಿಸಿದ ಸರ್ಕಾರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತು.
ಅಂಬರೀಷ್ ಅವರ ಅಭಿಮಾನಿಗಳು, ಹಿತೈಷಿಗಳು ಚಾಮರಾಜನಗರ, ಮಡಿಕೇರಿ, ಹಾಸನ ಮತ್ತು ತುಮಕೂರಿನಿಂದ ಮಂಡ್ಯಕ್ಕೆ ಮೋಟರ್ ಬೈಕ್, ಕಾರು ಮತ್ತು ಸರಕು ವಾಹನಗಳಲ್ಲಿ ಆಗಮಿಸಿದರು. ವಾಹನಗಳನ್ನು ಟ್ರಾಫಿಕ್ ನಿಯಂತ್ರಿಸುವುದೇ ಪೊಲೀಸರಿಗೆ ಸವಾಲಾಗಿತ್ತು.
ಮುಖ್ಯಮಂತ್ರಿ ಕುಮಾರ ಸ್ವಾಮಿ ಮತ್ತು ಅವರ ಕೆಲವು ಆಪ್ತರು ಹಾಗೂ ಜೆಡಿಎಸ್ ಶಾಸಕರು ವಿಶೇಷ ಹೆಲಿಕಾಪ್ಟರ್ ನಲ್ಲಿ ಪಾರ್ಥೀವ ಶರೀರದ ಜೊತೆ ಮಂಡ್ಯಕ್ಕೆ ಆಗಮಿಸಿದರು.
ಜೆಎಸ್ಎಸ್ ಮಠದ ಶಿವಾರಾತ್ರೀಕೇಶಿ ಕೇಂದ್ರ ಸ್ವಾಮೀಜಿ, ನಟ ಯಶ್, ನಿರ್ಮಾಪಕ, ರಾಕ್ ಲೈನ್ ವೆಂಕಟೇಶ್ ಮತ್ತು ಮಾಡಿ ಸಚಿವ ವಿ ಚಲುವರಾಯಸ್ವಾಮಿ ಸ್ಟೇಡಿಯಂ ಗೆ ಆಗಮಿಸಿ ಶ್ರದ್ದಾಂಜಲಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು, ಸಿನಿಮಾ ಮಂದಿರ, ಹೊಟೆಲ ಹಾಗೂ ಅಂಗಡಿಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದವು, 
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಂಬರೀಷ್ ಅವರ ಬೃಹತ್ ಗಾತ್ರದ ಕಟೌಟ್ ಗಳು ರಾರಾಜಿಸುತ್ತಿದ್ದವು. ಮತ್ತೊಮ್ಮೆ ಹುಟ್ಟಿ ಬಾ ಎಂಬ ಘೋಷ ವಾಕ್ಯಗಳು ಎಲ್ಲೆಡೆ ಕಾಣಿಸುತ್ತಿದ್ದವು. ಸೋಮವಾರದವರೆಗೂ ಮಂಡ್ಯದಲ್ಲಿ ಮಧ್ಯ ಮಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ,
ಹೆದ್ದಾರಿ, ಮಂಡ್ಯನಗರ ಸೇರಿದಂತೆ ಉಳಿದ ಹಲವೆಡೆ ಬಿಗಿ ಪೊಲೀಸ್ ಭದ್ರತೆ ಏರ್ಪಡಸಲಾಗಿತ್ತು, ಸಾವಿರಾರು ಮಂದಿ ಅಂಬರೀಷ್ ಅವರ ಭಾವಚಿತ್ರ ಖರೀದಸುತ್ತಿದ್ದ ಹಿನ್ನೆಲೆಯಲ್ಲಿ ಫ್ಲೆಕ್ಸ್ ಪ್ರಿಂಟಿಂಗ್ ಅಂಗಡಿಗಳಲ್ಲಿ ಬ್ಯುಸಿನೆಸ್ ಹೆಚ್ಚಿತ್ತು.,
ಎಲ್ಲಾ ಗ್ರಾಮಗಳ ಶಾಲೆ, ಶೈಕ್ಷಣಿಕ ಸಂಸ್ಥೆಗಳು, ಹೋಟೆಲ್ ಗಳ ಮೇಲೆ ಅಂಬರೀಷ್ ಭಾವ ಚಿತ್ರಗಳು ಕಾಣುತ್ತಿದ್ದವು, ಭತ್ತ ಕಟಾವು ಮಾಡುತ್ತಿದ್ದ ರೈತರು ಅರ್ಧ ದಿನ ರಜೆ ಪಡೆದು ವಿಶ್ವೇಶ್ವರಯ್ಯ ಸ್ಚೇಡಿಯಂ ಗೆ ಆಗಮಿಸಿದ್ದರು. ಹಲವು ಮಂದಿ ಅಂಗವಿಕಲರು ವ್ಹೀಲ್ ಚೇರ್ ನಲ್ಲಿ ಆಗಮಿಸುತ್ತಿದ್ದನ್ನು ಕಂಡ ಪೊಲೀಸರು ಅಚ್ಚರಿಗೊಂಡರು, 
ಅಂಬರೀಷ್ ಅವರಿಗೆ, ಮಹಿಳೆಯರು, ಯುವಕರು ಸೇರಿದಂತೆ ಅಪಾರ ಪ್ರಮಾಣದ ಅಭಿಮಾನಿಗಳಿದ್ದರು, ನಟ ಅಂಬರೀಷ್ ಅವರ ಪಾದ ಮುಟ್ಟಲು ಮುಗಿ ಬೀಳುತ್ತಿದ್ದ ಅಭಿಮಾನಿಗಳನ್ನು ಸುಧಾರಿಸಿ ಕಳುಹಿಸುವಷ್ಟರಲ್ಲಿ ಪೊಲೀಸರಿಗೆ ಸಾಕು ಸಾಗಿತ್ತು. 
ನಾಗಮಂಗಲದ ಜಯಮ್ಮ ಎಂಬುವರು ಅಂಬರೀಷ್ ಅವರ ಪಾದ ಮುಟ್ಟಲು ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಕುಸಿದು ಬಿತ್ತು ಅತ್ತರು. ಅಂಬರೀಷ್ ಅಣ್ಣ ನನ್ನ ಮಕ್ಕಳು ಸರ್ಕಾರಿ ಕೆಲಸ ಪಡೆಯಲು ಸಹಾಯ ಮಾಡಿ,ಇವತ್ತು ನಾವು ಎರಡು ಹೊತ್ತು ಊಟ ಮಾಡುತ್ತಿರುವುದು ನಿಮ್ಮ ಆಶೀರ್ವಾದದಿಂದ, ನಮ್ಮ ಕುಟುಂಬದ ಹಿತೈಷಿ ಹಾಗೂ ಮಾರ್ಗದರ್ಶಕನನ್ನು ನಾವುಕಳೆದುಕೊಂಡೆವು ಎಂದು ಗೋಳಾಡುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT