ಹುಬ್ಬಳ್ಳಿ: ಕೇವಲ 800 ಗ್ರಾಮ್ ತೂಕದ ಅವಧಿಗೆ ಮುನ್ನ ಜನಿಸಿದ ಹೆಣ್ಣು ಮಗುವನ್ನು ಹುಬ್ಬಳ್ಳಿ ವೈದ್ಯರ ತಂಡ ಬದುಕಿಸಿದ ಅಪರೂಪದ ಘಟನೆ ನಡೆದಿದೆ.
ಮಗು ಜನಿಸಿ 70 ದಿನಗಳವರೆಗೆ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ನಂತರ ಮಗುವಿನ ತಾಯಿಗೆ ನೀಡಲಾಯಿತು. ಮಗುವನ್ನು ಬದುಕುಳಿಸುವಲ್ಲಿ ಶ್ರಮಿಸಿದ ಸ್ಪರ್ಶಂ ಮಕ್ಕಳ ಆಸ್ಪತ್ರೆಯ ಡಾ ಮಹೇಶ್ ಹೊಳೆಯಣ್ಣವರ್ ಮತ್ತು ಅವರ ಪತ್ನಿ ವಿಂದ್ಯಾ, ಇದೊಂದು ಅಪರೂಪದ ವಿಶೇಷ ಮತ್ತು ಸವಾಲಿನ ಪ್ರಕರಣ ಎಂದು ಹೇಳಿದರು.
ಸಾಮಾನ್ಯವಾಗಿ ಶಿಶು 36 ವಾರಗಳಲ್ಲಿ ಜನಿಸುತ್ತದೆ. ಆದರೆ ಇಲ್ಲಿ ಹೆಣ್ಣು ಮಗು ಕೇವಲ 26 ವಾರಗಳಲ್ಲಿ ಜನಿಸಿದೆ. ಹೀಗೆ ಜನಿಸಿದ ಮಗು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ. ಮದುವಿನ ಉಸಿರಾಟ ವ್ಯವಸ್ಥೆ, ಕಿಡ್ನಿ, ಜೀರ್ಣಾಂಗ ವ್ಯವಸ್ಥೆ ಮತ್ತು ಹೃದಯ ವ್ಯವಸ್ಥೆ ಬೆಳೆದಿರಲಿಲ್ಲ, ಕೇವಲ 800 ಗ್ರಾಂ ತೂಕವನ್ನು ಹೊಂದಿತ್ತು. ಆಸ್ಪತ್ರೆಯ ಈ ವೈದ್ಯ ದಂಪತಿ ಇದನ್ನು ಸವಾಲಾಗಿ ತೆಗೆದುಕೊಂಡು ಚಿಕಿತ್ಸೆ ನೀಡಲು ಆರಂಭಿಸಿದರು.