ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದ 5 ವಿಮಾನ ನಿಲ್ದಾಣಗಳಿಗೆ ವಿದ್ಯುತ್ ಪೂರೈಸಲಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ

ಪ್ರಯಾಣಿಕರ ಜನದಟ್ಟಣೆ ಹೊಂದಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ರಾಜ್ಯದಲ್ಲಿಯೇ ಮೂರನೆಯದಾಗಿದ್ದು ...

ಹುಬ್ಬಳ್ಳಿ: ಪ್ರಯಾಣಿಕರ ಜನದಟ್ಟಣೆ ಹೊಂದಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ರಾಜ್ಯದಲ್ಲಿಯೇ ಮೂರನೆಯದಾಗಿದ್ದು ಇಲ್ಲಿ ವಿದ್ಯುತ್ ಗೆ ಸ್ವ ಅವಲಂಬಿತವಾಗಿರುವುದಲ್ಲದೆ ಮಂಗಳೂರು, ಮೈಸೂರು, ಬೆಳಗಾವಿ ಮತ್ತು ಬಳ್ಳಾರಿ ವಿಮಾನ ನಿಲ್ದಾಣಗಳ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಗೆ ಸಹ ವಿದ್ಯುತ್ ಒದಗಿಸುತ್ತದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಉದ್ದೇಶಿತ 8 ಮೆಗಾವ್ಯಾಟ್ ನೆಲದಲ್ಲಿ ಗ್ರಿಡ್ ಸಂಪರ್ಕಿತ ವಿದ್ಯುತ್ ಜನಕ ಸೌರ ಸ್ಥಾವರ ಸ್ಥಾಪನೆಯಿಂದ ಇದು ಸಾಧ್ಯವಾಗಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸುಮಾರು 45.54 ಕೋಟಿ ರೂಪಾಯಿ ವೆಚ್ಚದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ ಪ್ರಾಧಿಕಾರದ ಮೂಲಗಳು, ಯೋಜನೆ ಇನ್ನು 8 ತಿಂಗಳಲ್ಲಿ ಮುಗಿಯುವ ಸಾಧ್ಯತೆಯಿದ್ದು, ಯೋಜನೆಗೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗುವುದು ಎಂದು ತಿಳಿಸಿವೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ಜಂಟಿ ಪ್ರಧಾನ ವ್ಯವಸ್ಥಾಪಕ ಸಿ ಮಂಜುನಾಥ್, 34 ಎಕರೆ ವಿಸ್ತೀರ್ಣದಲ್ಲಿ ಘಟಕ ಸ್ಥಾಪಿಸಲಾಗುವುದು. ಅದು ಇನ್ಫೋಸಿಸ್ ಕಟ್ಟಡದ ಹಿಂಭಾಗದಲ್ಲಿ. ಘಟಕದಿಂದ ಉತ್ಪಾದಿಸಲ್ಪಟ್ಟ ಸೌರ ವಿದ್ಯುತ್ ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡದ ವಿದ್ಯುತ್ ಅವಶ್ಯಕತೆಯನ್ನು ಪೂರೈಸಲಿದೆ. ಈ ಘಟಕದಿಂದ ಹವಾ ನಿಯಂತ್ರಣ ವ್ಯವಸ್ಥೆ ಕೂಡ ನೀಡಲಾಗುವುದು ಎಂದರು.

ಹೆಚ್ ಎಎಲ್ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡವು ಕಾರ್ಯನಿರ್ವಹಿಸದಿರುವುದರಿಂದ ಸ್ಯಾಟಲೈಟ್ ಮತ್ತು ಅಧಿಕಾರಿಗಳ ಕಚೇರಿಗಳಿಗೆ ವಿದ್ಯುತ್ ಪೂರೈಸಲಾಗುವುದು. ಬಳ್ಳಾರಿ ವಿಮಾನ ನಿಲ್ದಾಣ ಕೂಡ ಕಾರ್ಯನಿರ್ವಹಿಸುತ್ತಿಲ್ಲ, ಆದರೆ ರಾಡಾರ್ ಸೌಲಭ್ಯ ಹೊಂದಿದೆ. ಈ ವಿಮಾನ ನಿಲ್ದಾಣಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ವಿದ್ಯುತ್ ಪೂರೈಸಲಾಗುವುದು ಎಂದರು.

ವಿದ್ಯುತ್ ಪೂರೈಸುವ ಪ್ರಕ್ರಿಯೆ ಸರಳವಾಗಿದೆ. ತರಿಹಾಳ್ ಪ್ರದೇಶದ ಮೂಲಕ ಕೆಪಿಟಿಸಿಎಲ್ ಗ್ರಿಡ್ ಗೆ ವಿದ್ಯುತ್ ಪೂರೈಸಲಾಗುತ್ತಿದೆ. ಅದಕ್ಕೆ ಪ್ರತಿಯಾಗಿ ಕೆಪಿಟಿಸಿಎಲ್ ಅಷ್ಟೇ ಪ್ರಮಾಣದ ವಿದ್ಯುತ್ ನ್ನು ವಿಮಾನ ನಿಲ್ದಾಣಕ್ಕೆ ಪೂರೈಸುತ್ತದೆ. ಅದರಂತೆ ಒಪ್ಪಂದವಾಗಿದೆ ಎಂದು ಮಂಜುನಾಥ್ ಹೇಳುತ್ತಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದ ಹೊಸ ಉಪಕ್ರಮಗಳು ಪರಿಸರ ಸ್ನೇಹಿಯಾಗಿದ್ದು ಇನ್ನಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಉನ್ನತೀಕರಿಸಿದ ಟರ್ಮಿನಲ್ ಕಟ್ಟಡ ಕಳೆದ ಡಿಸೆಂಬರ್ ನಲ್ಲಿ ಉದ್ಘಾಟನೆಗೊಂಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

SCROLL FOR NEXT