ಜಿ.ಎಸ್ ಮೌನಿಷಾ ಹಾಗೂ ಹಿಮಚಂದ್ರ 
ರಾಜ್ಯ

ಕೋಲಾರ: ಮನೆಯವ್ರು ನಮ್ಮ ಪ್ರೀತಿನ ಒಪ್ಪಿಕೊಳ್ಳಲಿಲ್ಲ ಎಂದು ರೈಲಿಗೆ ತಲೆಕೊಟ್ಟ ಪ್ರೇಮಿಗಳು!

ಮನೆಯವರು ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಬಂಗಾರಪೇಟೆ ಗಡಿ ಭಾಗದಲ್ಲಿ ನಡೆದಿದೆ.

ಕೋಲಾರ: ಮನೆಯವರು ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂದು ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ಬಂಗಾರಪೇಟೆ ಗಡಿ ಭಾಗದಲ್ಲಿ ನಡೆದಿದೆ.
ಬಂಗಾರಪೇಟೆ ಕರ್ನಾಟಕ-ಆಂಧ್ರ ಗಡಿ ಭಾಗದ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಶರಣಾದವರನ್ನು ಜಿ.ಎಸ್ ಮೌನಿಷಾ ಹಾಗೂ ಹಿಮಚಂದ್ರ ಎಂದು ಗುರುತಿಸಲಾಗಿದ್ದು ಇಬ್ಬರೂ ಮಿಳುನಾಡಿನ ತಿರುವೆಲ್ಲೂರು ನಿವಾಸಿಗಳು ಎನ್ನಲಾಗಿದೆ. ಈ ಇಬ್ಬರೂ ಕುಪ್ಪಂನ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿಎಸ್‍ಸಿ ಓದುತ್ತಿದ್ದರು.
ಕೆಲ ವರ್ಷಗಳಿಂದಲೂ ಮೌನಿಷಾ ಹಾಗೂ ಹಿಮಚಂದ್ರ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಮನೆಯಲ್ಲಿಯೂ ಈ ಪ್ರೀತಿಗೆ ವಿರೋಧವಿತ್ತು.ಇದರಿಂದ ಬೇಸತ್ತ ಪ್ರೇಮಿಗಳು ಇಂದು ಬೆಳಿಗ್ಗೆ ಕುಪ್ಪಂ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಘಟನೆ ಸಂಬಂಧ ಕುಪ್ಪಂ ರೈಲ್ವೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!