ರಾಜ್ಯ

ಶಬರಿಮಲೆ ವಿವಾದ: ಸಮಿತಿಯಲ್ಲಿ ಕರ್ನಾಟಕದ ಸಂಸದರು

Manjula VN

ಬೆಂಗಳೂರು: ಶಬರಿಮಲೆ ವಿವಾದ ಸಂಬಂಧ ಸತ್ಯಾಗ್ರಹಮಾಡುತ್ತಿರುವವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪ್ರತಿಭಟನಾಕಾರರನ್ನುಬಂಧನಕ್ಕೊಳಪಡಿಸುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ಪರಿಶೀಲನೆ ನಡೆಸಲು ಬಿಜೆಪಿರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಾಲ್ಕು ಸದಸ್ಯರ ತಂಡವೊಂದನ್ನು ರಚನೆ ಮಾಡಿದ್ದು, ಸಮಿತಿಯಲ್ಲಿ ಕರ್ನಾಟಕದ ಸಂಸದರು ಇರುವುದಾಗಿ ತಿಳಿದುಬಂದಿದೆ.

ಕರ್ನಾಟಕ ಇಬ್ಬರು ಸಂಸದರು ಸಮಿತಿಯಲ್ಲಿದ್ದಾರೆಂದುತಿಳಿದುಬಂದಿದೆ. ನಳೀನ್ ಕುಮಾರ್ ಕಟೀಲ್ ಮತ್ತು ಪ್ರಹ್ಲಾದ್ ಜೋಷಿಯವರು ಸಮಿತಿಯಲ್ಲಿದ್ದಾರೆಂದುವರದಿಗಳು ತಿಳಿಸಿವೆ.

ಸಮಿತಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸರೋಜ್ ಪಾಂಡೆ ಮತ್ತು ವಿನೋದ್ ಸೊಂಕಾರ್ ಕೂಡ ಇದ್ದಾರೆಂದು ವರದಿಗಳು ತಿಳಿಸಿವೆ.

ದಕ್ಷಿಣ ರಾಜ್ಯಗಳಲ್ಲೂ ಶಬರಿಮಲೆ ಪ್ರತಿಭಟನೆಯನ್ನುಹೆಚ್ಚಿಸುವ ಸಲುವಾಗಿ ಕರ್ನಾಟಕದ  ಸಂಸದರನ್ನುಸಮಿತಿಯಲ್ಲಿ ಸೇರ್ಪಡೆಗೊಳಿಸಲಾಗಿದ ಎಂದು ವರದಿಗಳಿಂದ ತಿಳಿದುಬಂದಿದೆ.

ಕಾಸರಗೋಡಿನಲ್ಲಿ ಈಗಾಗಲೇ ಹಿಂದೂ ಸಮಾಜೋತ್ಸವವನ್ನುಆಯೋಜಿಸಲಾಗಿದ್ದು, ಡಿ.16 ರಂದು ಈಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರುಮಾತನಾಡಲಿದ್ದಾರೆ.

SCROLL FOR NEXT