ರಾಜ್ಯ

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಟಿವಿ ಸಂದರ್ಶನ: 7 ಪೊಲೀಸರ ಅಮಾನತು

Shilpa D
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮರೆ ಮತ್ತು ಮನೋಹರ್ ಇಡಾವೆ ಅವರ ಟಿವಿ ಸಂದರ್ಶನ ಸಂಬಂಧ 7 ಪೊಲೀಸರನ್ನು ಆಮಾನತುಗೊಳಿಸಲಾಗಿದೆ.
ಸೆಪ್ಟಂಬರ್ ತಿಂಗಳಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಆರೋಪಿಗಳು ಟಿವಿ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದರು, ಈ ಸಂಬಂಧ ನಗರ ಸಶಸ್ತ್ರ ಮೀಸಲು ಪಡೆಯ 4 ಮುಖ್ಯ ಪೇದೆಗಳು ಹಾಗೂ 3 ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಶಿಸ್ತು ಕ್ರಮಗಳ ನಿಯಮದ ಅನ್ವಯ ಕರ್ತವ್ಯ ಲೋಪದ ಆಧಾರದ ಮೇಲೆ ಅಮಾನತುಗೊಳಿಸಿದೆ, ನವೆಂಬರ್ 23 ರಂದು ದಕ್ಷಿಣ ವಿಭಾಗ ಪೊಲೀಸ್ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪೊಲೀಸರ ಅಮಾನತು ಆದೇಶದ ಪ್ರತಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿದೆ, ಸೆಪ್ಚಂಬರ್ 29 ರಂದು  ಸಿಟಿ ಸಿವಿಲ್ ಅಡಿಷನಲ್ ಕೋರ್ಟ್ ನಲ್ಲಿ ವಾಗ್ಮರೆ ಮತ್ತು ಆತನ 9 ಸಹಚರರನ್ನು ಹಾಜರು ಪಡಿಸಲಾಗಿತ್ತು,
ಕೋರ್ಟ್ ವಿಚಾರಣೆ ನಂತರ  ಪೊಲೀಸರ ಕಾರಿನಲ್ಲಿ ಕುಳಿತು ಟಿವಿ ಚಾನೆಲ್ ಗಳಿಗೆ ಮಾತನಾಡಿದ್ದರು, ಈ ವೇಳೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿದ್ದ. ಜೊತೆಗೆ ತಮ್ಮ ಸೋಹದರರನ್ನು ಪ್ರಕರಣದಲ್ಲಿ ಸೇರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದ, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು, ವಿಚಾರಣಾಧೀನ ಕೈದಿಗಳು  ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂಬುದು  ಪೊಲೀಸ್ ಇಲಾಖೆಯ ನಿಯಮವಾಗಿದೆ,
SCROLL FOR NEXT