ಗದಗ: ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಜೀವನಕ್ಕೆ ಬಹುಮುಖ್ಯ ಘಟ್ಟವಾಗಿದ್ದು, ಹೀಗಾಗಿ ಗದಗದಲ್ಲಿಸುವ ಗ್ರಾಮೀಣ ಶಾಲಾ ಶಿಕ್ಷಕರು ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ.
ಗದಗ ಅಸುತಿ ಗ್ರಾಮದ ಫಲಹರೇಶ್ವರ್ ಹೈ ಸ್ಕೂಲ್'ನ ಶಿಕ್ಷಕರು ಎಸ್ಎಸ್ಎಲ್'ಸಿ ವಿದ್ಯಾರ್ಥಿಗಳ ಕುರಿತು ವಿಶೇಷ ಗಮನ ಹರಿಸಿದ್ದು, ಮನೆಗಳಿಗೆ ತೆರಳಿ ಮಕ್ಕಳಿಗೆ ಹೆಚ್ಚುವರಿಯಾಗಿ ತರಬೇತಿ ನೀಡುತ್ತಿದ್ದಾರೆ.
ಶಿಕ್ಷಕರು ಗುರುಗಳು ಬಂದರು ಗುರುವಾರ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಇದರಂತೆೆ ಶಿಕ್ಷಕರು ಪ್ರತಿ ಗುರುವಾರ ಶಾಲಾ ಅವಧಿ ಮುಗಿದ ಬಳಿಕ ವಿದ್ಯಾರ್ಥಿಗಳ ಮನೆಗಳಿಗೆತೆರಳಿ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮನೆಗಳಲ್ಲಿಯೇ 2 ಗಂಟೆಗಳ ಕಾಲ ಉಳಿಯುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಾರೆ.
ಶೈಕ್ಷಣಿಕ ವರ್ಷದಲ್ಲಿ ಕಡಿಮೆ ಆಸಕ್ತಿ ತೋರಿದ ವಿದ್ಯಾರ್ಥಿಗಳ ಪಟ್ಟಿಯನ್ನು ಮಾಡಲಾಗಿದೆ. 20 ವಿದ್ಯಾರ್ಥಿಗಳನ್ನು ಸಣ್ಣ ಗುಂಪುಗಳನ್ನಾಗಿ ಮಾಡಿಕೊಂಡು ಪ್ರತೀ ಗುರುವಾರ ಈ ವಿದ್ಯಾರ್ಥಿಗಳ ಮನೆಗಳಿಗೆ ಸ್ವತಃ ಶಿಕ್ಷಕರೇ ತೆರಳಿ ಪಾಠ ಹೇಳಿಕೊಡುತ್ತಾರೆ. ಕೆಲವೊಮ್ಮ ಹೇಳಿಕೊಡುವ ವೇಳೆ ಶಿಕ್ಷಕರು ವಿದ್ಯಾರ್ಥಿಗಳ ಮನೆಗಳಲ್ಲಿ 3 ತಾಸಿಗೂ ಹೆಚ್ಚು ಕಾಲ ಉಳಿಯಬೇಕಾಗುತ್ತದೆ ಎಂದು ಶಾಲಾ ಪ್ರಾಂಶುಪಾಲ ಎಸ್.ಜಿ.ಸವಡಿಯವರು ಹೇಳಿದ್ದಾರೆ.