ರಾಜ್ಯ

ಚಾರ್ಮಾಡಿ ಘಾಟ್ ನಲ್ಲಿ ಮಗುಚಿ ಬಿದ್ದ ಲಾರಿ; ಗಂಟೆಗಟ್ಟಲೆ ವಾಹನಗಳ ನಿಲುಗಡೆ

Sumana Upadhyaya

ಮಂಗಳೂರು: ಟ್ರಕ್ ಮಗುಚಿಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ಹೆದ್ದಾರಿಯ ಚಾರ್ಮಾಡಿ ಘಾಟ್ ಯಲ್ಲಿ ವಾಹನಗಳು ಸುಮಾರು 3 ಗಂಟೆ ಸಿಕ್ಕಿಹಾಕಿಕೊಂಡ ಘಟನೆ ನಡೆದಿದೆ. ಅಪಘಾತ ನಿನ್ನೆ ಬೆಳಗ್ಗೆ ಸುಮಾರು 7.30ರ ಸುಮಾರಿಗೆ ನಡೆದಿದ್ದು ಬೆಳಗ್ಗೆ 10.30ರವರೆಗೆ ವಾಹನಗಳು ಸಂಚರಿಸದೆ ರಸ್ತೆಯಲ್ಲಿಯೇ ನಿಲ್ಲಬೇಕಾಯಿತು.

ಸಣ್ಣ ವಾಹನಗಳು ನಿಧಾನವಾಗಿ ಹೋಗಲು ಸಾಧ್ಯವಾಗಬಹುದಿತ್ತಾದರೂ ಹಲವು ಬಸ್ಸುಗಳು ನುಸುಳಿಕೊಂಡು ಹೋಗಲು ಪ್ರಯತ್ನಿಸಿದ ಕಾರಣ ಅಡ್ಡ ನಿಂತು ಸಣ್ಣ ಹಗುರ ವಾಹನಗಳಿಗೆ ಹೋಗಲು ಸಾಧ್ಯವಾಗದೆ ಗಂಟೆಗಟ್ಟಲೆ ನಿಲ್ಲಬೇಕಾಯಿತು ಎನ್ನುತ್ತಾರೆ ಸ್ಥಳೀಯ ರಿಯಾನ್.
ಕಳೆದೆರಡು ದಿನಗಳಲ್ಲಿ ಟ್ರಕ್ ಮಗುಚಿ ಬೀಳುವುದು ಇದು ಎರಡನೇ ಘಟನೆಯಾಗಿದ್ದು ಸ್ಥಳೀಯರು ಕಳೆದ ಬಾರಿ ಕೂಡಲೇ ಕ್ರೇನ್ ತರಿಸಿ ಟ್ರಕ್ ನ್ನು ಮೇಲೆತ್ತಿ ಬೇರೆ ವಾಹನಗಳಿಗೆ ಹೋಗಲು ಅನುವು ಮಾಡಿಕೊಟ್ಟಿದ್ದರು. ಕಳೆದ ಶುಕ್ರವಾರದಿಂದ ಇಂತಹ ಘಟನೆಯಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಕೊನೆಗೆ ಪೊಲೀಸರು ಸ್ಥಳೀಯರ ನೆರವಿನಿಂದ ಬೆಳಗ್ಗೆ 11.30ಕ್ಕೆ ಚಾರ್ಮಾಡಿ ಘಾಟಿಯಲ್ಲಿ ಟ್ರಕ್ಕನ್ನು ಮೇಲೆತ್ತಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

SCROLL FOR NEXT