ಸಂಗ್ರಹ ಚಿತ್ರ 
ರಾಜ್ಯ

ರಾಜ್ಯದಲ್ಲಿ ಬರದ ಛಾಯೆ: ಉತ್ತರ ಸೀಮೆಯ ಜನರ ಹಾಹಾಕಾರಕ್ಕೆ ಕೊನೆ ಎಂದು?

ದಕ್ಷಿಣ ಪ್ರಸ್ಥಭೂಮಿಯಲ್ಲಿರುವ ರಾಜ್ಯದ ಅನೇಕ ತಾಲೂಕುಗಳಲ್ಲಿ ಬರ / ಜಲಕ್ಷಾಮವು ತುಂಬಾ ಸಾಮಾನ್ಯ ಲಕ್ಷಣವಾಗಿದೆ. ತೀರಾ ಇತ್ತೀಚಿನ ವರ್ಷಗಳಲ್ಲಿ. ಎಂದರೆ 2010 ರಿಂದ ರಾಜ್ಯದ 176....

ಬೆಂಗಳೂರು: ದಕ್ಷಿಣ ಪ್ರಸ್ಥಭೂಮಿಯಲ್ಲಿರುವ ರಾಜ್ಯದ ಅನೇಕ ತಾಲ್ಲೂಕುಗಳಲ್ಲಿ ಬರ / ಜಲಕ್ಷಾಮವು ತುಂಬಾ ಸಾಮಾನ್ಯ ಲಕ್ಷಣವಾಗಿದೆ. ತೀರಾ ಇತ್ತೀಚಿನ ವರ್ಷಗಳಲ್ಲಿ. ಎಂದರೆ 2010 ರಿಂದ ರಾಜ್ಯದ 176  ತಾಲೂಕಿನ ಅರ್ಧದಷ್ಟು ತಾಲೂಕುಗಳಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಬಿದ್ದಿಲ್ಲ. . 2001 ರಿಂದ ಕರ್ನಾಟಕವು ಬರಗಾಲವನ್ನು ಅನುಭವಿಸುತ್ತಿದೆ. 14 ವರ್ಷಗಳಲ್ಲಿ 13 ವರ್ಷಗಳ ಕಾಲ 37 ತಾಲ್ಲೂಕುಗಳು ಬರಗಾಲವನ್ನು ಅನುಭವಿಸಿದೆ.ಚಿಕ್ಕಬಳ್ಳಾಪುರ, ರಾಯಚೂರು, ಅಳಂದ, ಜೇವರ್ಗಿ ತಲೂಕುಗಳಲ್ಲಿ ಕಳೆದ 14 ವರ್ಷ ಸಹ ಬರಗಾಲವೇ ತಾಂಡವವಾಡುತ್ತಿದೆ.
ಪ್ರಸ್ತುತ ಮಾನ್ಸೂನ್ ಮಳೆಯು ಜಾಗತಿಕ ತಾಪಮಾನ ಏರಿಕೆಯೊಡನೆ ಏರುಪೇರಾಗುತ್ತಲಿದ್ದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು  ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಇಂತಹಾ ಬರಪೀಡಿತ ಪ್ರದೇಶದ ಜನರಿಗೆ ನೆರವಾಗುವುಉದ್ ಅತ್ಯಗತ್ಯವಾಗಿ ಪರಿಣಮಿಸಲಿದೆ.
ತೆಲಂಗಾಣ ಹಾಗೂ ಆಂಧ್ರ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕದ ತಾಲ್ಲೂಕುಗಳಲ್ಲಿ ಬರಗಾಲದ ಸನ್ನಿವೇಶ ಬಹಳವಿದ್ದು ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ವಿಬಾಗದ ಮಾಹಿತಿ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಆದ ಮಳೆ ಪ್ರಮಾಣವನ್ನು ವಿಶ್ಲೇಷಿಸಿದ್ದಾದರೆ ಪ್ರತಿ ಎರಡರಿಂದ ಮೂರು ವರ್ಷಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ಆಗಿದೆ.ಅದಾಗ್ಯೂ ಇತ್ತೀಚಿನ ಅವ್ಯವಸ್ಥಿತ ಮಳೆ ಹಂಚಿಕೆಯಿಂದ ಪರಿಸ್ಥಿತಿ ಪ್ರತಿಕೂಲವಾಗಿ ಪರಿಣಮಿಸಿದೆ ಎಂದು ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿ ವಿಶ್ವನಾಥ್ ಬಿರಾದರ್ ಹೇಳಿದರು.
ಅಲ್ಲಿನ ಜನರು ಜೂನ್ ಮಧ್ಯಭಾಗದಿಂದ ಮಳೆಗಾಲಾ ನಿರೀಕ್ಷೆಯಲ್ಲಿರುತ್ತಾರೆ ಆದಎ ಜೂನ್ ವೇಳೆಗ ಲ್ಲಿ ಚೆದುರಿದಂತೆ ಮೋಡ ಕವಿದ ವಾತಾವರಣವಷ್ಟೇ ಇರುತ್ತದೆ ಹೊರತು ಮಳೆ ಆಗಲಾರದು. ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಅಲ್ಲಿ ಮಳೆ ಪ್ರಾರಂಭವಾಗುತ್ತದೆ.ಅನೇಕ ಮಳೆನೀರು ಕೊಯ್ಲು ಕಾರ್ಯಕ್ರಮಗಳನ್ನು ಈ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಕೋಲಾರದಲ್ಲಿ ಬರಗಾಲದಿಂದ ಅಪಾಯ ಮಟ್ಟವನ್ನು ಕಡಿಮೆಗೊಳಿಸಲು ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ, ಇಂತಹಾ ಕಾರ್ಯಕ್ರಮಗಳಿಂದ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಜನರು ಮಳೆಯನ್ನೇ ಅವಲಂಬಿಸುವ ಪದ್ದತಿ ತಪ್ಪಲಿದೆ ಎಂದು ಅವರು ಹೇಳಿದ್ದಾರೆ.
45 ತಾಲ್ಲೂಕುಗಳಲ್ಲಿ ಪ್ರವಾಹ
ಒಂದೆಡೆ ಬರ. ಜಲಕ್ಷಾಮವಾದರೆ ಇನ್ನೊಂದೆಡೆ ಪ್ರವಾಹ ಪೀಡಿತವಾಗಿರುವ ತಾಲ್ಲೂಕುಗಳನ್ನು ಸಹ ನಾವು ಆಣುತ್ತೇವೆ. ರಾಜ್ಯದ ಒಳನಾಡಿನಲ್ಲಿರುವ ಸುಮಾರು , 45 ತಾಲ್ಲೂಕುಗಳಲ್ಲಿ  ಪ್ರವಾಹ ಪರಿಸ್ಥಿತಿ ಉಂತಾಗಿ ಅಪಾರ ಹಾನಿಯಾಗಿದೆ. ಕೊಡಗು, ದಕ್ಷಿಣ ಕನ್ನಡ, , ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ, ಹಾಸನ, ಚಿಕ್ಕಮಗಳೂರು ಮತ್ತು ಮೈಸೂರುಗಳಲ್ಲಿ ಪ್ರವಾಹ ಸನ್ನಿವೇಶ ಉಂತಾಗಿದೆ.ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಮಳೆಯಿಂದಾಗಿ ಭೂಕುಸಿತಗಳು  ಸಂಭವಿಸಿದ್ದವು. ಶಿರಾಡಿ ಮತ್ತು ಸಂಪಾಜೆ ಘಾಟ್ ರಸ್ತೆಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕರಾವಳಿ ಪ್ರದೇಶಗಳನ್ನು ರಾಜ್ಯದ ಮುಖ್ಯ ವಾಹಿನಿಗೆ ಸಂಪರ್ಕಿಸುವ ಎರಡು ಪ್ರಮುಖ ಮಾರ್ಗಗಳು ಬಂದ್ ಆಗಿದ್ದವು. ರಾಜ್ಯದಲ್ಲಿ ಪ್ರವಾಹ ಪೀಡಿತ ತಾಲ್ಲೂಕುಗಳ ಪಟ್ಟಿಯನ್ನು ಇತ್ತೀಚೆಗೆ ಘೋಷಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT