ಸಂಗ್ರಹ ಚಿತ್ರ 
ರಾಜ್ಯ

ವಿಲಕ್ಷಣ ಘಟನೆ: ಮಗಳ ಗೆಳೆಯನಿಂದಲೇ ಪತ್ನಿಯ ಅಪಹರಣ! ವ್ಯಕ್ತಿಯಿಂದ ಪೋಲೀಸರಿಗೆ ದೂರು

ಒಂದು ವಿಲಕ್ಷಣ ಘಟನೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿ ಹಾಗೂ ಮಗಳನ್ನು ಮಗಳ ಸ್ನೇಹಿತನೇ ಅಪಹರಿಸಿದ್ದಾನೆ ಎಂದು ವ್ಯಕ್ತಿಯೊಬ್ಬ ಪೋಲೀಸ್ ಆಯುಕ್ತರಿಗೆ ದೂರಿತ್ತಿದ್ದಾನೆ

ಬೆಂಗಳೂರು: ಒಂದು ವಿಲಕ್ಷಣ ಘಟನೆಯಲ್ಲಿ ಗಂಡನೊಬ್ಬ ತನ್ನ ಹೆಂಡತಿ ಹಾಗೂ ಮಗಳನ್ನು ಮಗಳ ಸ್ನೇಹಿತನೇ ಅಪಹರಿಸಿದ್ದಾನೆ ಎಂದು ವ್ಯಕ್ತಿಯೊಬ್ಬ  ಪೋಲೀಸ್ ಆಯುಕ್ತರಿಗೆ ದೂರಿತ್ತಿದ್ದಾನೆ. ಇದಕ್ಕೆ ಮುನ್ನ ಅಶೋಕ ನಗರ ಪೋಲೀಸರು ದೂರು ಸ್ವೀಕರಿಸಲು ನಿರಾಕರಿಸಿದ ಕಾರಣ ದೂರುದಾರನಾದ ಗೌರಕ್ ಕಶ್ಯಪ್ ಕಮಿಷನರ್ ಕಛೇರಿಗೆ ಆಗಮಿಸಿ ದೂರಿತ್ತಿದ್ದಾರೆ. ಆಯುಕ್ತರ ಹಸ್ತಕ್ಷೇಪದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಶಾಂತಿನಗರ ನಿವಾಸಿ ಕಶ್ಯಪ್, ತಮ್ಮ 16 ವರ್ಷ ವಯಸ್ಸಿನ ಮಗಳು ಮತ್ತು ಅವರ ಪತ್ನಿ ಕುಶಾಲ್ ದೇವಿ (30) ತಮ್ಮ ತವರಾದ ಉತರ ಪ್ರದೇಶಕ್ಕೆ ತೆರಳುವಾಗ ರೈಲಿನಿಂದ ಕಾಣೆಯಾಗಿದ್ದಾರೆ ಎಂದುತಿಳಿಸಿದ್ದಾರೆ. ಅಪ್ರಾಪ್ತ ಮಗಳನ್ನು ಆಕೆಯ ಗೆಳೆಯ ರಾಹುಲ್ ಅಪಹರಣ ಮಾಡಿದ್ದಾನೆ ಎಂದು ಕಶ್ಯಪ್ ಆರೋಪಿಸಿದ್ದಾರೆ.
ಕಶ್ಯಪ್ ಹೇಳುವಂತೆ ಸೋಮವಾರ ಆತ್ನ ಪತ್ನಿಯಿಂದ ಕಡೆಯದಾಗಿ ಕರೆ ಬಂದ ವೇಳೆ ಆಕೆ ಹಾಗೂ ಮಗಳು ತೆಲಂಗಾಣದ ಮೂಲಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.ಅವರಿಂದ ಹಣವನ್ನೆಲ್ಲಾ ದೋಚಲಾಗಿದೆ. ಬಳಿಕ ಅದೇ ದರೋಡೆಕೋರನು ಅವರುಗಳನ್ನು ಅಪಹರಣ ಮಾಡಿರುವ ಸಾಧ್ಯತೆಯೂ ಇದೆ ಎಂದು ಕಶ್ಯಪ್ ಹೇಳುತ್ತಾರೆ.
ಇಷ್ಟಾದ ಬಳಿಕ ಪತ್ನಿಯ ಮೊಬೈಲ್ ನಾಟ್ ರೀಚಬಲ್ ಆಗಿದೆ. ಕಶ್ಯಪ್ ತನ್ನ ಕೆಲ ಸಂಬಂಧಿಕರ ಮೂಲಕ ತೆಲಂಗಾಣದಲ್ಲಿ ಪತ್ನಿ ಹಾಗೂ ಪುತ್ರಿಯರಿಗೆ ಹುಡುಕಾಟ ನಡೆಸಿದರೂ ಯಾವ ಫಲ ದೊರೆಯಲಿಲ್ಲ ಅಂತಿಮವಾಗಿ ಅವರು ಪೋಲೀಸರ ಮೊರೆ ಹೋಗಿದ್ದಾರೆ.
ಇದಾಗಿ ತನ್ನ ಅಂಗಡಿ ಸಮೀಪದಲಿದ್ದ ರಾಹುಲ್ ತನ್ನ ಮಗಳ ಸ್ನೇಹಿತನಾಗಿದ್ದ. ಅವನೇ ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಕಶ್ಯಪ್ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಏಕೆಂದರೆ ಘಟನೆ ನಂತರ ಕಶ್ಯಪ್ ರಾಹುಲ್ ಗಾಗಿ ಹುಡುಕಿದಾಗ ಆತನೂ ನಗರದಿಂದ ದೂರ ಹೋಗಿರುವುದು ತಿಳಿದಿದೆ. ಇದಾಗಿ ಅವರು ಅಶೋಕ ನಗರ ಪೋಲೀಸರ ಬಳಿ ಧಾವಿಸ್ದಾಗ ಪೋಲೀಸರು ತಾವು ದೂರು ತೆಗೆದುಕೊಳ್ಳಲು ನಿರಾಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel