ರಾಜಕಾಲುವೆ 
ರಾಜ್ಯ

ಬೆಂಗಳೂರು: ಕುರುಬರಹಳ್ಳಿಯಲ್ಲಿ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ : ಮೃತ್ಯುಕೂಪ ರಾಜಕಾಲುವೆ !

ಕುರುಬರಹಳ್ಳಿಯಲ್ಲಿ ಮೃತ್ಯೂಕೂಪದಂತಿರುವ ಈ ರಾಜಕಾಲುವೆಯಲ್ಲಿ ಒಂದು ವರ್ಷದ ನಂತರವೂ ಮತ್ತೆ ದುರಂತ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ

ಬೆಂಗಳೂರು : ಪಶ್ಚಿಮ ಬೆಂಗಳೂರು ಭಾಗದಲ್ಲಿರುವ  ಕುರುಬರಹಳ್ಳಿಯಲ್ಲಿ ಕಳೆದ ವರ್ಷ ಅಕ್ಟೋಬರ್ 13 ರಂದು ಭಾರೀ ಮಳೆಯಿಂದಾಗಿ  5 ಮಂದಿ ಮೃತಪಟ್ಟಿದ್ದರು. ರಾಜಕಾಲುವೆ ಬಳಿ ವಾಸಿಸುತ್ತಿದ್ದ   ಕಮಲಮ್ಮ ಮತ್ತು ಶಂಕರಪ್ಪ ದಂಪತಿ  ಸೇರಿದಂತೆ  ಅವರ ತಾಯಿ ಮಗಳು, ಮೀನಾಕ್ಷಿ, ಪುಷ್ಪ ರಾಜಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಮೃತ್ಯೂಕೂಪದಂತಿರುವ ಈ  ರಾಜಕಾಲುವೆಯಲ್ಲಿ  ಒಂದು ವರ್ಷದ ನಂತರವೂ ಮತ್ತೆ ದುರಂತ ಮರುಕಳಿಸುವ ಸಾಧ್ಯತೆ ಹೆಚ್ಚಾಗಿದೆ. ಬೇರೆ ಬೇರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಿಗೆ ಬರುವ ಈ ಕಾಲುವೆಯ ಒಂದು ಭಾಗವನ್ನು  ಮಾತ್ರ ಸರಿಪಡಿಸಲಾಗಿದ್ದು, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕಾಲುವೆ ಸರಿಪಡಿಸದೆ ಇರುವುದರಿಂದ  ಜನರು ತೀವ್ರ ರೀತಿಯ  ತೊಂದರೆ ಎದುರಿಸುವಂತಾಗಿದೆ.

ಕಾಲುವೆ  ಬಳಿಯಿರುವ ಮನೆಗಳಿಗೆ ನೀರು  ಪ್ರವೇಶಿಸದಂತೆ ತಡೆಗಟ್ಟಲು ಒಂದು ಗೋಡೆ ಸ್ಥಾಪಿಸಲಾಗಿದ್ದು, ಗೋಡೆಯ ಮೇಲೆ ಬೇಲಿ ಹಾಕಲಾಗಿದೆ. ಆದರೆ ಬಲಭಾಗದ ಕಾಲುವೆ ನಿರ್ಲಕ್ಷ್ಯಕ್ಕೊಳಪಟ್ಟಿರುವುದರಿಂದ  ಮಳೆ ನೀರು ಮನೆಗೆ ನುಗ್ಗುವಂತಾಗಿದೆ ಎಂದು  ಟೈಲರ್  ಷಣ್ಮುಗ  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಆದರೆ, ನೀರು ಬಾರದಂತೆ ಹಾಕಿರುವ ತಡೆಗೋಡೆ ಸಹ ಎತ್ತರದಲ್ಲಿ ಇಲ್ಲ ಎಂದು ಕುರುಬರಹಳ್ಳಿ ನಿವಾಸಿ ರಾಧಾ ಆರೋಪಿಸಿದರು. ಬೆಂಗಳೂರಿನಲ್ಲಿ ಪ್ರತಿದಿನ ಮಳೆಯಾಗುತ್ತಿದ್ದು, ಕಳೆದ ವರ್ಷದಂತೆ  ಈ ವರ್ಷವೂ ದುರಂತ ಸಂಭವಿಸುವ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ ಎಂದು  ಕೆಂಪೇಗೌಡ ಲೇಔಟ್ ನಿವಾಸಿ  ಅಳಲು ತೋಡಿಕೊಂಡರು.

 ಯಶವಂತಪುರ ಕಡೆಯಿಂದ ಬರುವ ತ್ಯಾಜ್ಯ ನೀರು ಈ ಕಾಲುವೆ  ಕೆಂಗೇರಿ  ಬಳಿಯ ವೃಷಭಾವತಿ ಕಡೆಗೆ  ಹರಿದು ಹೋಗುತ್ತದೆ. ಮಳೆಗಾಲದಲ್ಲಿ ಈ ರಾಜಕಾಲುವೆ ಬಳಿ ವಾಸಿಸುವ ಜನರು ಆತಂಕದಲ್ಲಿಯೇ ಬದುಕು ಸಾಗಿಸುವಂತಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT