ವಿದ್ಯಾರ್ಥಿಗಳೆದುರೇ ಪ್ರೌಢಶಾಲೆ ಪ್ರಾಂಶುಪಾಲನ ಭೀಕರ ಕೊಲೆ 
ರಾಜ್ಯ

ವಿದ್ಯಾರ್ಥಿಗಳೆದುರೇ ಪ್ರೌಢಶಾಲೆ ಪ್ರಾಂಶುಪಾಲನ ಭೀಕರ ಕೊಲೆ! ಆರೋಪಿ ಬಂಧನ

ಹಾಡ ಹಗಲು ಶಾಲೆಗೆ ನುಗ್ಗಿದ್ದ ದುಷ್ಕರ್ಮಿಗಳು ವಿದ್ಯಾರ್ಥಿಗಳ ಎದುರೇ ಶಾಲಾ ಪ್ರಾಂಶುಪಾಲರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದ ಘಟನೆ....

ಬೆಂಗಳೂರು: ಹಾಡ ಹಗಲು ಶಾಲೆಗೆ ನುಗ್ಗಿದ್ದ ದುಷ್ಕರ್ಮಿಗಳು ವಿದ್ಯಾರ್ಥಿಗಳ ಎದುರೇ ಶಾಲಾ ಪ್ರಾಂಶುಪಾಲರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ  ಹತ್ಯೆಗೈದ ಘಟನೆ ಬೆಂಗಳೂರಿನ  ಅಗ್ರಹಾರ ದಾಸರಹಳ್ಳಿಯ ಹಾವನೂರು ಪಬ್ಲಿಕ್ ಸ್ಕೂಲ್ ನಲ್ಲಿ ನಡೆದಿದೆ.
ಹತ್ಯೆಯಾದ ಪ್ರಾಂಶುಪಾಲರನ್ನು ರಂಗನಾಥ್ ಎಂದು ಗುರುತಿಸ;ಲಾಗಿದ್ದು ರಜಾ ದಿನವಾದ ಇಂದು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಆಯೋಜನೆ ಮಾಡಿದ್ದ ವೇಳೆ ಏಕಾಏಕಿ ತರಗತಿಗೆ ನುಗ್ಗಿದ ಏಳು ದುಷ್ಕರ್ಮಿಗಳು ಪ್ರಾಂಶುಪಾಲ ರಂಗನಾಥ್ ಅವರ ಮೇಲೆ ಚಾಕು ಇನ್ನಿತರೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೀಡಾದ ರಂಗನಾಥ್ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳ ಕಣ್ಣೆದುರೇ ಈ ಘಟನೆ ನಡೆದಿದ್ದು ವಿದ್ಯಾರ್ಥಿಗಳು ಭಯಭೀತರಾಗಿದ್ದರು.
ಸುದ್ದಿ ತಿಳಿದ ಉತ್ತರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರಸ್ತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ ಶಾಲೆ ಹಿಂಭಾಗದಲ್ಲಿದ್ದ ಮನೆಯವರಿಗೆ, ಶಾಲೆ ಆಡಳಿತಕ್ಕೂ ಜಾಗದ ವಿಚಾರವಾಗಿ ವಿವಾದವಿತ್ತು. ಇತ್ತೀಚೆಗೆ ಕಂಪೌಂಡ್ ಗೋಡೆಯೊಂದನ್ನು ಕೆದವಲಾಗಿತ್ತು. ಇದೇ ಜಾಗದ ವಿವಾದವೇ ಕೊಲೆಗೆ ಕಾರಣವಿರಬಹುದು ಎಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 
ಆರೋಪಿ ಕಾಲಿಗೆ ಗುಂಡು 
ಪ್ರೌಢ ಶಾಲೆ ಪ್ರಾಂಶುಪಾಲ ರಂಗನಾಥ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೋಲೀಸರು ಯಶಸ್ವಿಯಾಗಿದ್ದು ಘಟನೆ ನಡೆದ ಇಪ್ಪತ್ತನಾಲ್ಲ್ಕು ಗಂಟೆಗಳಲ್ಲಿ ಆರೋಪಿ ಬಂಧನವಾಗಿದೆ.
ಮಹಾಲಕ್ಷ್ಮೀ ಲೇಔಟ್‌ನ ಕಿರ್‌ಲೋಸ್‌ಕರ್‌ ಪೌಂಡ್ರಿ ಸಮೀಪ ಇದ್ದ ಆರೋಪಿ ಬಬ್ಲಿ ಅಲಿಯಾಸ್‌ ಮುನಿರಾಜು  ಎಂಬಾತನ ಬಂಧನವಾಗಿದ್ದು ಬಂಧನದ ವೇಳೆ ಪೋಲೀಸರ ಮೇಲೆ ಹಲೆಗೆ ಯತ್ನಿಸಿದ ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
ಸಧ್ಯ ಆರೋಪಿ ಬಬ್ಲಿ ಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT