ಬೆಂಗಳೂರು: ಮಿ ಟೂ ಚಳವಳಿ ಹೆಚ್ಚು ಸದ್ದು ಮಾಡುತ್ತಿದೆ. ಸಿನಿಮಾ, ರಾಜಕೀಯ ಕ್ಷೇತ್ರದ ಕೆಲವು ಗಣ್ಯರ ವಿರುದ್ಧ ಕೇಳಿಬಂದಿದ್ದ ಆರೋಪ ಇದೀಗ ಉದ್ಯಮ ವಲಯಕ್ಕೆ ಕಾಲಿಟ್ಟಿದೆ.
ಲೈಂಗಿಕ ಕಿರುಕುಳ ಆರೋಪ ಹಿನ್ನಲೆಯಲ್ಲಿ ನಗರದ ಜಾಹೀರಾತು ಸಂಸ್ಥೆಯಾದ ಹ್ಯಾಪಿ ಮ್ಯಾಕ್ಗರ್ರಿ ಬೊವೆನ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ಅಯ್ಯರ್, ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ದಾಸ್, ಹಿರಿಯ ಕ್ರಿಯಾಶೀಲ ನಿರ್ದೇಶಕ ಬೋಧಿಸತ್ವ ದಾಸಗುಪ್ತ ಮತ್ತು ಐಪ್ರಾಸ್ಪೆಕ್ಟ್ ಇಂಡಿಯಾ ನ್ಯಾಶನಲ್ ಕ್ರಿಯೇಟಿವ್ ನಿರ್ದೇಶಕ ದಿನೇಶ್ ಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಳೆದ ಅಕ್ಟೋಬರ್ 10ರಂದು ಹ್ಯಾಪಿ ಕ್ರಿಯೇಟಿವ್ ನ ಸಂಗತಿಗಳನ್ನು ಪತ್ರಕರ್ತೆ ಸಂಧ್ಯಾ ಮೆನನ್ ಟ್ವೀಟ್ ಮಾಡಿದ ನಂತರ ಈ ಬೆಳವಣಿಗೆ ನಡೆದಿದೆ. ಕಚೇರಿಯ ಮಹಿಳಾ ಸಿಬ್ಬಂದಿ ಬಗ್ಗೆ ಮೇಲಾಧಿಕಾರಿಗಳು ಅನುಚಿತವಾಗಿ ನಡೆದುಕೊಳ್ಳುತ್ತಾರೆ, ಕೇವಲವಾಗಿ ಮಾತನಾಡುತ್ತಾರೆ ಮತ್ತು ಕಚೇರಿಯ ಪಾರ್ಟಿಗಳಲ್ಲಿ ಮಹಿಳೆಯರಿಗೆ ಅಸುರಕ್ಷಿತ ವಾತಾವರಣವಿದೆ ಎಂದು ಟ್ವೀಟ್ ಮಾಡಿದ್ದರು.
ಟೆಂಟ್ಸು ಕಂಪೆನಿಯ ಐಪ್ರೊಸ್ಪೆಕ್ಟ್ ನಿಂದ ಬಂದ ದಿನೇಶ್ ಸ್ವಾಮಿ ಮಹಿಳಾ ನೌಕರರ ಮೇಲೆ ಲೈಂಗಿಕತೆಗೆ ಸಂಬಂಧಪಟ್ಟ ಜೋಕ್ಸ್ ಗಳನ್ನು ಕೂಡ ಮಾಡುತ್ತಿದ್ದರು ಎಂದು ಸಂಧ್ಯಾ ಮೆನನ್ ಟ್ವೀಟ್ ನಲ್ಲಿ ಬಹಿರಂಗಪಡಿಸಿದ್ದರು,