ನವರಾತ್ರಿ ಆಚರಣೆ ವೇಳೆ ಜೋರು ಶಬ್ದ: ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳ ಮೇಲೆ ಹಲ್ಲೆ! 
ರಾಜ್ಯ

ನವರಾತ್ರಿ ಆಚರಣೆ ವೇಳೆ ಜೋರು ಶಬ್ದ: ಬೆಂಗಳೂರು ಅಪಾರ್ಟ್ ಮೆಂಟ್ ನಿವಾಸಿಗಳ ಮೇಲೆ ಹಲ್ಲೆ!

ನವರಾತ್ರಿ ಆಚರಣೆ ವೇಳೆ ಜೋರು ಶಬ್ದ ಉಂಟಾದ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ನವರಾತ್ರಿ ಆಚರಣೆ ವೇಳೆ ಜೋರು ಶಬ್ದ ಉಂಟಾದ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ನಿವಾಸಿಗಳ ಮೇಲೆ ಹಲ್ಲೆ ನಡೆಸಿದ ಘಟನೆ  ಬೆಂಗಳೂರಿನಲ್ಲಿ ನಡೆದಿದೆ. 
ಚನ್ನಸಂದ್ರದ ಈಶ ಮಿಸ್ಟಿ ಗ್ರೀನ್ ಅಪಾರ್ಟ್ಮೆಂಟ್ ನ ನಿವಾಸಿಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ವೈಟ್ ಫೀಲ್ಡ್ ವಿಭಾಗದ ಪೊಲೀಸರು ಅ.19 ರಂದು ಇಬ್ಬರು ಮಹಿಳೆಯರೂ ಸೇರಿದಂತೆ  ಕಾಡುಗೋಡಿಯ 7 ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮುನಿಸ್ವಾಮಿ, ಶ್ರೀನಿವಾಸ ಗೌಡ, ಓಂ ಪ್ರಕಾಶ್ ಗೌಡ, ಅನಿಲ್, ವಿನೋದ್, ಶಶಿಕಲಾ ಹಾಗೂ ಹೇಮಾವತಿ ಎಂದು ಗುರುತಿಸಲಾಗಿದೆ. 
ಬಂಧಿತರೂ ಸಹ ಅಪಾರ್ಟ್ಮೆಂಟ್ ನಿವಾಸಿಗಳ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ. ಗುರುವಾರ ರಾತ್ರಿ 9 ಗಂಟೆ ವೇಳೆಗೆ ಜೋರಾದ ಶಬ್ದದಲ್ಲಿ ಹಾಡು ಹಾಕಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು,  ಅಪಾರ್ಟ್ ಮೆಂಟ್ ನ ಮುಖ್ಯ ದ್ವಾರವನ್ನು ಮುರಿದು ಅಪಾರ್ಟ್ಮೆಂಟ್ ಗೆ ಬಂದ  50 ಜನರ ಗುಂಪು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್ ಮಾಡಿಲ್ಲ; ವಿಶ್ವ ನಾಯಕರು ಯುದ್ಧ ನಿಲ್ಲಿಸಲು ಅಮೆರಿಕ ಮೇಲೆ ಒತ್ತಡ ಹೇರಬೇಕು: ಇರಾನ್

ಅನಿವಾರ್ಯ ಪರಿಸ್ಥಿತಿ, ವಾಣಿಜ್ಯ ಸಿಲಿಂಡರ್ ಸ್ಟಾಕ್ ಇಲ್ಲ, ಹೋಟೆಲ್‌ನವರು 1 ವಾರ ಸಹಿಸಿಕೊಳ್ಳಬೇಕು: ಸಚಿವ ಕೆ.ಎಚ್ ಮುನಿಯಪ್ಪ!

'Khamenei ಸತ್ತ... ಉತ್ತರಾಧಿಕಾರಿ ಮಗನ ಕಾಲು ಕಟ್.. ಹೊಸ ಸರ್ವಾಧಿಕಾರಿ ಯಾರು? ಎಂದು Iran ಗೇ ಗೊತ್ತಿಲ್ಲ..'

IPLಗೂ ತಟ್ಟಲಿದೆ ಯುದ್ಧದ ಬಿಸಿ: ಐಪಿಎಲ್ ಪಂದ್ಯ ಒಂದಕ್ಕೆ ಬೇಕು 3 ಸಾವಿರ ಲೀಟರ್ ಡೀಸೆಲ್; ಪಂದ್ಯಾವಳಿಗೆ ಬ್ರೇಕ್?

Video: ತನಗೆ ಬೈದಾಗ ಸುಮ್ಮನಿದ್ದ.. ಪತ್ನಿಗೆ ಚಪ್ಪಲಿ ತೋರಿಸುತ್ತಲೇ ಸಿಡಿದೆದ್ದು ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ!

SCROLL FOR NEXT