ಬೆಂಗಳೂರು: ಕಾರ್ ಹಾಗೂ ಬೈಕಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯ ಅವಲಹಳ್ಳಿ ಫ್ಲೈ ಓವರ್ ಮೇಲೆ ಸಂಭವಿಸಿದ ದುರಂತದಲ್ಲಿ ಕೆ.ಆರ್.ಪುರ ದೇವಸಂದ್ರ ನಿವಾಸಿ ಬ್ರಹ್ಮಾನಂದ ರೆಡ್ಡಿ(42) ಹಾಗೂ ಅವರ ಪುತ್ರ ಮೃತಪಟ್ಟಿದ್ದಾರೆ.
ಮಗನಿಗೆ ಅನಾರೋಗ್ಯವಾಗಿದ್ದ ಕಾರಣ ವೈದ್ಯರ ಬಳಿ ಕರೆದೊಯ್ಯುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಅವಲಹಳ್ಳಿ ಫ್ಲೈ ಓವರ್ ಮೇಲೆ ಸಾಗುವಾಗ ಕಾರು ಗುದ್ದಿದ್ದು ಡಿಕ್ಕಿಯ ರಭಸಕ್ಕೆ ಬ್ರಹ್ಮಾನಂದ ಅವರ ಪುತ್ರನ ದೇಹ ಫ್ಲೈ ಓವರ್ ತಡೆಗೋಡೆಗೆ ಬಡಿದು ಎರಡು ತುಂಡಾಗಿದೆ. ತಂದೆ ಬ್ರಹ್ಮಾಂನಂದ ಸಹ ರಸ್ತೆ ಮೇಲೆ ಬಿದ್ದು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತಕ್ಕೆ ಕಾರಣನಾದ ಕಾರು ಚಾಲಕ ಪರಾರಿಯಾಗಿದ್ದಾನೆ.
ಘಟನೆ ಕುರಿತಂತೆ ಅವಲಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics