ರಾಜ್ಯ

ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ!

Nagaraja AB

ಬೆಂಗಳೂರು: ಹೈಕೋರ್ಟ್ ಆದೇಶದಂತೆ ಬೆಂಗಳೂರು ನಗರದಲ್ಲಿ  ಫ್ಲೆಕ್ಸ್ , ಬ್ಯಾನರ್ ನಿಷೇಧದಿಂದ ಜನತೆಗೆ ಸ್ವಲ್ಪ ನೆಮ್ಮದಿ ಸಿಕ್ಕಿದ್ದರೆ,  ಬೆಂಗಳೂರು ಗ್ರಾಮೀಣ  ವಲಯ ಪ್ರದೇಶದಲ್ಲಿ ವಿಶೇಷವಾಗಿ ಹೊಸಕೋಟೆ ಮತ್ತಿತರ ಕಡೆಗಳಲ್ಲಿ  ಕಾರ್ಪೋರೇಟರ್, ಮತ್ತು ರಾಜಕಾರಣಿಗಳ ಜಾಹಿರಾತು ವಿರುದ್ದ ಈಗಲೂ ಹೋರಾಡುವಂತಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಏಕೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ರಾಜ್ಯಾದಾದ್ಯಂತ ಪ್ಲಾಸ್ಟಿಕ್  ಬಳಕೆಯನ್ನು ನಿಷೇಧಿಸಬೇಕು ಎಂದು ಸ್ಥಳೀಯ ಜನತೆ  ಒತ್ತಾಯಿಸಿದ್ದಾರೆ.

ಎಲ್ಲಾ ರೀತಿಯ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುವುದು ಆದರೆ, ರಾಜಕಾರಣಿಗಳಿಂದ ವಿರೋಧ ಎದುರಿಸಬೇಕಾಗುತ್ತದೆ ಎಂದು ನಗರಸಭೆಯ ಅಧಿಕಾರಿಗಳು ಹೇಳುತ್ತಾರೆ.

ಬಿಬಿಎಂಪಿ ಹೊರ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಫ್ಲೆಕ್ಸ್ ಗಳ ಅಬ್ಬರ ಮುಂದುವರೆದಿದ್ದು, ಯಾರೊಬ್ಬರು ಸಂಬಂಧಿತ ಸಂಸ್ಥೆಗಳಿಂದ ಅನುಮತಿ ಪಡೆಯುತ್ತಿಲ್ಲ ಎಂದು ಸಾಪ್ಟ್ ವೇರ್ ಇಂಜಿನಿಯರ್ ರಾಕೇಶ್ ಜಾ ಆರೋಪಿಸುತ್ತಾರೆ.

ಪ್ಲಾಸ್ಟಿಕ್ ಬಳಕೆ  ವಿಶ್ವದಾದ್ಯಂತ ಸಮಸ್ಯೆಯಾಗಿದ್ದು, ಇದನ್ನು ರಾಜ್ಯಾದಾದ್ಯಂತ ನಿಷೇಧಿಸಿ ಹೈಕೋರ್ಟ್ ಆದೇಶ ನೀಡಬೇಕೆಂದು  ಗೃಹಿಣಿ ಶೀಲಾ ವಿಗ್ನೇಶ್ ಮನವಿ ಮಾಡಿಕೊಂಡಿದ್ದಾರೆ.
ಎಲ್ಲಾ ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗುತ್ತದೆ. ಆದರೆ ಸ್ಥಳೀಯ  ನಾಯಕರು ಹಾಗೂ ಮಾಜಿ ರಾಜಕಾರಣಿಗಳಿಂದ ವಿರೋಧ ಎದುರಾಗಿದೆ ಎಂದು  ಹೊಸಕೋಟೆ  ನಗರಸಭೆ ಆಯುಕ್ತ ಹೆಚ್ ಗಂಗಾಧರ್ ಅಸಹಾಯತೆ ವ್ಯಕ್ತಪಡಿಸುತ್ತಾರೆ.ಆದರೆ , ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರೀಗೌಡ  ಸಿಗುತ್ತಿಲ್ಲ.
SCROLL FOR NEXT