ಬೆಂಗಳುರು: ಕಲಬುರ್ಗಿಯಲ್ಲಿ ಉರ್ದು ವಿಶ್ವವಿದ್ಯಾನಿಲಯ ಸ್ಥಾಪನೆ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಉಪ ಕುಲಪತಿಗಳ ಅಭಿಪ್ರಾಯಗಳನ್ನು ಪರಿಗಣಿಸಿ ಈ ತೀರ್ಮಾನಕ್ಕೆ ಬರಲಾಗಿದೆ.
ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನ ಸಿದ್ದರಾಮಯ್ಯ ಸರ್ಕಾರಕ್ಕೆ ಹೈದರಾಬಾದ್ ಕರ್ನಾಟಕ ಭಾಗದ ಮುಸ್ಲಿಂ ಜಾಗೃತ ಸಮಿತಿ ಉರ್ದು ವಿಶ್ವವಿದ್ಯಾನಿಲಯ ಸ್ಥಾಪನೆಗೆ ಮನವಿ ಸಲ್ಲಿಸಿತ್ತು. ಈ ಮನವಿ ಪರಿಗಣಿಸಿದ್ದ ಸಿದ್ದರಾಮಯ್ಯ ವಿಶ್ವವಿದ್ಯಾನಿಲ್;ಅಯ ಸ್ಥಾಪನೆ ಪ್ರಸ್ತಾವವನ್ನು ಉನ್ನತ ಶಿಕ್ಷಣ ಇಲಖೆಗೆ ಸಲ್ಲಿಸಿದ್ದರು.
ಕರ್ನಾಟಕ ರಾಜ್ಯ ಕೌನ್ಸಿಲ್ ಫಾರ್ ಹೈಯರ್ ಎಜುಕೇಷನ್ (ಕೆಎಸ್ಎಸ್ಇಇ) ಹಾಗೂ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಸಭೆಯಲ್ಲಿ ನಿರ್ಣಯ ತೆಗೆದುಕೊಂಡ ಬಳಿಕ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಕೆಎಸ್ಎಸ್ಇಇ ಅಧಿಕಾರಿಗಳು ಹೇಳಿದಂತೆ ಇದಾಗಲೇ ಚಾಲನೆಯಲ್ಲಿರುವ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಸಹ ಉರ್ದು ಕೋರ್ಸ್ ಗಳಿಗೆ ಯಾವ ಹೆಚ್ಚಿನ ಬೇಡಿಕೆ ಇಲ್ಲ . ಹೀಗಾಗಿ ಪ್ರತ್ಯೇಕ ವಿಶ್ವವಿದ್ಯಾನಿಲಯ ಅಗತ್ಯವಿಲ್ಲ.
"ಈ ಹಿಂದಿನ ಸರ್ಕಾರ ಮಂಡಿಸಿದ್ದ ಪ್ರಸ್ತಾವನೆ ಮುಂದಿಟ್ಟು ನಾವು ಚರ್ಚಿಸಿದೆವು. ಆದರೆ ಉಪ ಕುಲಪತಿಗಳ ಸಹಮತದ ನಿರ್ಧಾರ ಪರಿಗಣಿಸಿ ಉದ್ದೇಶಿತ ವಿಶ್ವವಿದ್ಯಾನಿಲಯ ಸ್ಥಾಪನೆ ಪ್ರಸ್ತಾವವನ್ನು ಕೈಬಿಟ್ಟಿದ್ದೇವೆ"ಉನ್ನತ ಶಿಕ್ಷಣ ಮಂತ್ರಿ ಜಿ.ಟಿ. ದೇವೇಗೌಡ ಹೇಳಿದ್ದಾರೆ.
"ಸಧ್ಯ ಚಾಲನೆಯಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿನ ಉರ್ದು ವಿಭಾಗಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿದ್ದು ಇದನ್ನು ಬಲಗೊಳಿಸಲು ಉಪ ಕುಲಪತಿಗಳಿಗೆ ನಿರ್ದೇಶನ ನಿಡಲಾಗಿದೆ" ಸಚಿವರು ಹೇಳಿದ್ದಾರೆ.