ಕೆನೋಪಿ ವಾಕ್ 
ರಾಜ್ಯ

ದಾಂಡೇಲಿ: ನವೆಂಬರ್ ನಲ್ಲಿ ದೇಶದ ಮೊದಲ ಕೆನೋಪಿ ವಾಕ್ ಪ್ರವಾಸಿಗರಿಗೆ ಮುಕ್ತ

ಭಾರತದ ಮೊದಲ ಕೆನೋಪಿ ವಾಕ್ ಇದೇ ನವೆಂಬರ್ ಮಧ್ಯಭಾಗದ ವೇಳೆಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ.

ಕಾರವಾರ: ಭಾರತದ ಮೊದಲ ಕೆನೋಪಿ ವಾಕ್ ಇದೇ ನವೆಂಬರ್ ಮಧ್ಯಭಾಗದ ವೇಳೆಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ.ಈ ಫೆಬ್ರವರಿಯಲ್ಲಿ ಉದ್ಘಟನೆಯಾಗಿದ್ದ ಕೆನೋಪಿ ವಾಕ್ ಸೌಲಭ್ಯವನ್ನು ಮಳೆಗಾಲದ ಕಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು.
ಕರ್ನಾಟಕ ಅರಣ್ಯ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಪಶ್ಚಿಮ ಘಟ್ಟಗಳ ದಟ್ಟ ಕಾಡುಗಳಲ್ಲಿ 30 ಮೀಟರ್ ಎತ್ತರದ 240 ಮೀಟರ್ ಕೆನೋಪಿ ವಾಕ್ (ಮೇಲಾವರಣ ರಸ್ತೆ)ಯನ್ನು ನಿರ್ಮಾಣ ಮಾಡಿದೆ.84 ಲಕ್ಷ ರು. ವೆಚ್ಚದಲ್ಲಿ ತಯಾರಾಗಿರುವ ಈ ಕೆನೋಪಿ ವಾಕ್ ಉತ್ತರ ಕನ್ನಡ ಜಿಲ್ಲೆ ಕ್ಯಾಸೆಲ್ ರಾಕ್ ವನ್ಯಜೀವಿ ಸಂರಕ್ಷಿತ ಪ್ರದೇಸದಲ್ಲಿದೆ.
ಮೂರು ವರ್ಷಗಳ ಹಿಂದೆ ಸಿದ್ದವಾದ ಈ ಯೋಜನೆ ಪರಿಸರ ಸಂರಕ್ಷಕರ ಆರೋಪಗಳಿಂದಾಗಿ ವಿಳಂಬವಾಗಿತ್ತು.ಬಳಿಕ ಕೇಂದ್ರ ಸರ್ಕಾರ ಈ ಅಕ್ಷೇಪಣೆಗಳನ್ನು ತೆರವು ಮಾಡಿದ್ದು 2018 ರ ಫೆಬ್ರುವರಿ 18 ರಂದು ಅಂದಿನ ಕೈಗಾರಿಕೆ ಮಂತ್ರಿ ಆರ್. ವಿ. ದೇಶಪಾಂಡೆ ಈ ಕೆನೋಪಿ ವಾಕ್ ಅನ್ನು ಔಪಚಾರಿಕವಾಗಿ ಉದ್ಘಾಟಿಸಿದ್ದರು. ಸಧ್ಯ ಇದು ವಿಶ್ವದ ಕೆಲವೇ ದೇಶಗಳಲ್ಲಿದೆ.
ಏಪ್ರಿಲ್ ನಲ್ಲಿ ಅರಣ್ಯ ಇಲಾಖೆ ಹಾಗೂ ಜಂಗಲ್ ಲಾಡ್ಜ್ ಗಳು ಮತ್ತು ರೆಸಾರ್ಟ್ಸ್ (ಜೆಎಲ್ಆರ್) ಗಳ ನಡುವಿನ ಒಪ್ಪಂದಕ್ಕೆ ಸಹಿ ಹಾಕಿದ್ದಾದರೂ ಮಳೆಗಾಲದ ಕಾರಣ ಕ್ಯಾಸಲ್ ರಾಕ್ ಸೇರಿದಂತೆ ಎಲ್ಲಾ ಸಂರಕ್ಷಿತ ಪ್ರದೇಶಗಳಲ್ಲಿ ಪ್ರವಾಸಿಗರ ಆಗಮನವನ್ನು ನಿಷೇಧಿಸಲಾಯಿತು.
ಟಿಕೆಟ್ ದರ
ಕೆನೋಪಿ ವಾಕ್ ಆನಂದ ಅನುಭವಿಸಲಿಕ್ಕಾಗಿ ಏಜನ್ಸಿಗಳು ಟಿಕೆಟ್ ಶುಲ್ಕವನ್ನು ನಿಗದಿ ಮಾಡಿದೆ. ಅದರಂತೆ ವಯಸ್ಕರಿಗೆ 500 ರು. ಹಾಗೂ  12 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 300 ರೂ ನಿಗದಿಯಾಗಿದೆ.ಸಧ್ಯ ಮಾನ್ಸೂನ್ ಮಳೆಗಾಲ ಮುಗಿದಿದ್ದು ಇಲಾಖೆ ಮತ್ತು ಆಪರೇಟಿಂಗ್ ಏಜೆನ್ಸಿಗಳು ಪ್ರವಾಸಿಗರಿಗೆ ಕೆನೋಪಿ ವಾಕ್ ಸೌಲಭ್ಯ ತೆರೆಯಲು ಸಜ್ಜಾಗುತ್ತಿವೆ. ರಸ್ತೆ ಮತ್ತು ಕುಡಿಯುವ ನೀರಿನ ಮೂಲಭೂತ ವ್ಯವಸ್ಥೆಗಳನ್ನು ಇಲಾಖೆ ನಿರ್ವಹಿಸಲಿದೆ.15 ದಿನಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಸಲ್ ರಾಕ್ ಅತಿಥಿ ಗೃಹದಿಂದ ಕೆನೋಪಿ ವಾಕ್ ಹೋಗಲು ಇಲಾಖೆ ರೋಪ್ ವ್ಯವಸ್ಥೆ ಕಲ್ಪಿಸಿದೆ."ಸಾರ್ವಜನಿಕರಿಗೆ ಕೆನೋಪಿ ವಾಕ್ ತೆರೆದಾಗ , ಸ್ಥಳೀಯ ಜನರು ಆಹಾರ ಮತ್ತು ಸಾರಿಗೆ ಸೇರಿದಂತೆ ವ್ಯಾಪಾರ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಇಲಾಖೆಯು ಯೋಜನೆ ಇದನ್ನು ಒಳಗೊಂಡಿದೆ.ಇದರಿಂದಾಗಿ ಸ್ಥಳೀಯರು ಜೀವನೋಪಾಯ ಅಂಡುಕೊಳ್ಳಲು ಸಹಾಯವಾಗಲಿದೆ." ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT