ರಾಜ್ಯ

ಧರ್ಮಸ್ಥಳದಲ್ಲಿ ಬೀಡು ಬಿಟ್ಟಿರುವ ಸಾಧುಗಳು; ಎರಡು ದಿನಗಳ ಧರ್ಮ ಸಂಸದ್

Sumana Upadhyaya

ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಕೇಸರೀಕರಣವಾಗಿದೆ. ದೇಶದ ನಾನಾ ಭಾಗಗಳಿಂದ ಬಂದ ಸುಮಾರು 2 ಸಾವಿರ ಸಾಧು ಸಂತರು ಸೇರಿದಂತೆ 3 ಸಾವಿರ ಜನರು ಧರ್ಮಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಮತ್ತು ನಾಳೆ ನಡೆಯಲಿರುವ ಧರ್ಮ ಸಂಸದ್ ನಲ್ಲಿ ಭಾಗವಹಿಸಲಿದ್ದಾರೆ. ಹಿಂದೂ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಹಲವು ನಿರ್ಣಯಗಳು ತೆಗೆದುಕೊಳ್ಳಲಾಗುತ್ತದೆ.

ಇಂದು ಅಪರಾಹ್ನ 4 ಗಂಟೆಗೆ ಪೂರ್ಣಕುಂಭ ಸ್ವಾಗತ ಮತ್ತು ಶೋಭಾ ಯಾತ್ರೆ ಉಜಿರೆಯ ಜನಾರ್ದನ ದೇವಸ್ಥಾನದಿಂದ ಶ್ರೀ ರಾಮ ಕ್ಷೇತ್ರದವರೆಗೆ ಸಾಗಲಿದೆ. ಐದು ಅಲಂಕಾರಿಕ ರಥಗಳಲ್ಲಿ ಸಾಧುಗಳನ್ನು ಕರೆದೊಯ್ಯಲಾಗುತ್ತದೆ.

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವರಾದ ಪ್ರಕಾಶ್ ಜಾವದೇಕರ್, ಡಿ ವಿ ಸದಾನಂದ ಗೌಡ, ಬಿ ಎಸ್ ಯಡಿಯೂರಪ್ಪ, ಬಿ ಕೆ ಹರಿಪ್ರಸಾದ್, ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟೀಲ್ ಕೂಡ ಭಾಗವಹಿಸಲಿದ್ದಾರೆ.

SCROLL FOR NEXT