ರಾಜ್ಯ

ತುಮಕೂರು ಸ್ಥಳೀಯ ಸಂಸ್ಥೆ ಚುನಾವಣೆ: ವಿಜಯೋತ್ಸವ ಸಂಭ್ರಮದ ವೇಳೆ ಆ್ಯಸಿಡ್ ದಾಳಿ

Raghavendra Adiga
ತುಮಕೂರು/ಕೊಪ್ಪಳ: ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು (ಸೋಮವಾರ) ಪ್ರಕಟವಾಗಿದ್ದು ವಿಜಯೀ ಅಭ್ಯರ್ಥಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಆ್ಯಸಿಡ್ ದಾಳಿ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಆ್ಯಸಿಡ್ ದಾಳಿಗೊಳಗಾಗಿ ಕನಿಷ್ಠ 25ಮಂದಿ ಗಾಯಗೊಂಡಿದ್ದಾರೆ. 
ತುಮಕೂರು ನಗರದ .16ನೆ ವಾರ್ಡ್‍ನ ಕಾಂಗ್ರೆಸ್ ಅಭ್ಯರ್ಥಿ ಆರಿಫ್ ಹುಸೇನ್ ಚುನಾವಣೆಯಲ್ಲಿ ಜಯ ಗಳಿಸಿದ್ದರು.ಈ ವೇಳೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಎನ್‍ಆರ್ ಕಾಲೋನಿ ಬಳಿಯ ಕೋತಿತೋಪು ರಸ್ತೆಯಲ್ಲಿ ಸಂಭ್ರಮಾಚರಣೆಯಲ್ಲಿದ್ದಾಗ ಈ ದಾಳಿ ನಡೆದಿದೆ.
ಇನ್ನು ಮಾಜಿ ಶಾಸಕರಾದ ಶಫಿ ಅಹಮ್ಮದ್ ಅವರ ಮನೆ ಸಮೀಪ ನಡೆದ ಈ ದಾಳಿಯಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಆ್ಯಸಿಡ್ ದಾಳಿಯಿಂದ ಗಾಯಗೊಡವರನ್ನು ಜಿಲ್ಲಾಸ್ಪತ್ರೆ ಸೇರಿ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಸಧ್ಯ ಘಟನಾ ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಕೊಪ್ಪಳದಲ್ಲಿ ಚೂರಿ ಇರಿತ
ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಘೋಷಣೆಯಾಗಿ ಸಂಭ್ರಮಾಚರಣೆ ನಡೆಯುತ್ತಿದ್ದಾಗ ಕೊಪ್ಪಳ: ನಗರಸಭೆಯ 19 ನೇ ವಾರ್ಡ್‌ನಲ್ಲಿ  ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿಯ ಸಂಬಂಧಿಯು ಜೆಡಿಎಸ್‌ ಅಭ್ಯರ್ಥಿಯ ತಾಯಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.
ಸಯ್ಯದ್‌ ನಿಜಾಮುದ್ದೀನ್‌ ಹುಸೇನಿ ಎನ್ನುವಾತ ಈ ಕೃತ್ಯ ಎಸಗಿದ್ದಾನೆ. ಚೂರಿ ಇರಿತಕ್ಕೊಳಗಾದವರನ್ನು ರೆಹಮತ್‌ ಎಂದು ಗುರುತಿಸಲಾಗುಇದೆ.
ಈ ದುಷ್ಕೃತ್ಯಕ್ಕೆ ಸಹಕರಿಸಿದ್ದ ಹಾಜಿ ಹುಸೇನಿ  ಎನ್ನುವಾತನನ್ನು ಪೋಲೀಸರು ಬಂಧಿಸಿದ್ದು ಸಯ್ಯದ್‌ ನಿಜಾಮುದ್ದೀನ್‌ ಪತ್ತೆಗಾಗಿ ಬಲೆ ಬೀಸಲಾಗಿದೆ,
ಉಳ್ಳಾಲದಲ್ಲಿ ಕಲ್ಲು ತೂರಾಟ
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ವಿಜೇತ ಪಕ್ಷೇತರ ಅಭ್ಯರ್ಥಿ ಸೇರಿ ಹಲವರ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ,.ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.
SCROLL FOR NEXT