ಸಾಂದರ್ಭಿಕ ಚಿತ್ರ 
ರಾಜ್ಯ

ಧಾರವಾಡ: ಪತ್ನಿ ಜೊತೆಗಿನ ಪ್ರಣಯದ ವಿಡಿಯೋ ಆಕಸ್ಮಿಕವಾಗಿ ಅಪ್‏‏ಲೋಡ್ ಮಾಡಿದ ಪತಿ, ಪ್ರಕರಣ ದಾಖಲು

ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಗೂ ಪತ್ನಿಯ ಪ್ರಣಯದ ಕ್ಷಣದ ವಿಡಿಯೊ ಕ್ಲಿಪ್ ವೊಂದನ್ನು...

ಧಾರವಾಡ: ವ್ಯಕ್ತಿಯೊಬ್ಬ  ಸೋಷಿಯಲ್ ಮೀಡಿಯಾದಲ್ಲಿ ತನ್ನ ಹಾಗೂ ಪತ್ನಿಯ ಪ್ರಣಯದ ಕ್ಷಣದ ವಿಡಿಯೊ ಕ್ಲಿಪ್ ವೊಂದನ್ ಅಪ್ ಲೋಡ್ ಮಾಡಿ ಸಮಸ್ಯೆಗೆ ಸಿಲುಕಿ ಹಾಕಿಕೊಂಡಿರುವ ಘಟನೆ ಧಾರವಾಡದ ಗ್ರಾಮವೊಂದರಲ್ಲಿ ನಡೆದಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರಿಗೆ ಗೊತ್ತಾಗಿ ವ್ಯಕ್ತಿ ವಿರುದ್ಧ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಇದೀಗ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.

ಧಾರವಾಡದ ಉಪ್ಪಿನಬೆಟಗೆರಿ ಗ್ರಾಮದಲ್ಲಿ ನೆಲೆಸಿರುವ ದಂಪತಿ ತಮ್ಮ ಪ್ರಣಯದ 7 ನಿಮಿಷಗಳ ವಿಡಿಯೊವನ್ನು ಪತಿ ಸೋಷಿಯಲ್ ಮೀಡಿಯಾ ಗ್ರೂಪ್ ನಲ್ಲಿ ಅಪ್ ಲೋಡ್ ಮಾಡಿದ್ದ. ಈ ವಿಡಿಯೊ ಸೆಪ್ಟೆಂಬರ್ 5ರಂದು ವೈರಲ್ ಆಗಿತ್ತು. ಈ ಸಂಬಂಧ ಗರಗ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿಯ ಪತ್ನಿಯನ್ನು ಪೊಲೀಸರು ತನಿಖೆ ನಡೆಸಿದ್ದಾರೆ. ಮಹಿಳೆಗೆ ಈ ಘಟನೆ ನಡೆದ ನಂತರ ಆಘಾತವಾಗಿದ್ದು ಅವರ ಕುಟುಂಬದವರ ಯಾರ ಸಂಪರ್ಕಕ್ಕೂ ಆರೋಪಿ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.
''ಆರೋಪಿಯ ಪತ್ನಿ ಆಘಾತಕ್ಕೊಳಗಾಗಿದ್ದಾಳೆ, ವಿಡಿಯೊ ವೈರಲ್ ಆದರೆ ಜೀವನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತೇನೆ ಎಂದು ಮಹಿಳೆ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಈಗಾಗಲೇ ಹಲವು ಸೋಶಿಯಲ್ ಮೀಡಿಯಾ ಗ್ರೂಪ್ ಗಳಲ್ಲಿ ವಿಡಿಯೊ ಶೇರ್ ಆಗಿದೆ'' ಎಂದು ಪೊಲೀಸರು ಹೇಳುತ್ತಾರೆ.

ವಿಡಿಯೊ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿರುವ ಗ್ರೂಪ್ ನಲ್ಲಿ ಶೇರ್ ಆಗಿತ್ತು. ಆಗ ಈ ಬಗ್ಗೆ ಆರೋಪಿಯನ್ನು ಕೇಳಿದಾಗ ಆಕಸ್ಮಿಕವಾಗಿ ವಿಡಿಯೊ ಶೇರ್ ಆಗಿ ಹೋಗಿದೆ ಎಂದು ಹೇಳಿ ಗ್ರೂಪ್ ನಿಂದ ಕೂಡಲೇ ತೆಗೆದನು ಎನ್ನುತ್ತಾರೆ ಪೊಲೀಸ್ ಅಧಿಕಾರಿಯೊಬ್ಬರು.

ಆತ ವಿಡಿಯೊವನ್ನು ಸೋಷಿಯಲ್ ಮೀಡಿಯಾದಲ್ಲಿ ಏಕೆ ಅಪ್ ಲೋಡ್ ಮಾಡಿದ ಎಂದು ಗೊತ್ತಾಗುತ್ತಿಲ್ಲ, ಆತನ ಮೊಬೈಲ್ ಫೂಟ್ ಪ್ರಿಂಟ್ಸ್ ನ್ನು ಪತ್ತೆಹಚ್ಚಿ ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ವಿಚಾರಿಸುತ್ತಿದ್ದೇವೆ. ಸೈಬರ್ ಕಾನೂನಿನಡಿಯಲ್ಲಿ ಕೇಸು ದಾಖಲಾಗಿದ್ದು ಗರಗ್ ಪೊಲೀಸರು ಸೆಕ್ಷನ್ 292ರಡಿಯಲ್ಲಿ ಕೇಸು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.






Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

IPL 2026: MI vs RCB; ವಾಂಖೆಡೆ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಬೆಂಗಳೂರು, ಅತ್ಯಧಿಕ ಮೊತ್ತ!

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

SCROLL FOR NEXT