ರಾಜ್ಯ

ಕಡ್ಡಾಯ ವರ್ಗಾವಣೆ; ಕಾಲೇಜು ಶಿಕ್ಷಣ ಇಲಾಖೆಗೆ ಬಂದ 500ಕ್ಕೂ ಹೆಚ್ಚು ಆಕ್ಷೇಪ ಅರ್ಜಿಗಳು

Sumana Upadhyaya

ಬೆಂಗಳೂರು: ಒಂದೇ ವಲಯದಲ್ಲಿ 15 ವರ್ಷಗಳಿಗೂ ಅಧಿಕ ಕಾಲ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕರಿಗೆ ಕಡ್ಡಾಯ ವರ್ಗಾವಣೆ ಅಧಿಸೂಚನೆಯನ್ನು ವಿರೋಧಿಸಿ 500ಕ್ಕೂ ಹೆಚ್ಚು ಆಕ್ಷೇಪಗಳು ಇತ್ತೀಚೆಗೆ ಕಾಲೇಜು ಶಿಕ್ಷಣ ಇಲಾಖೆಗೆ ಬಂದಿವೆ.

ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, ಸುಮಾರು 300 ವರ್ಗಾವಣೆಗೆ ಅರ್ಹವಾಗುವ ಉಪನ್ಯಾಸಕರು ಇದ್ದರೂ ಕೂಡ ಎಲ್ಲಾ 500 ಆಕ್ಷೇಪ ಅರ್ಜಿಗಳು 50ರಿಂದ 60 ಸಿಬ್ಬಂದಿ ಸದಸ್ಯರು ಬರೆದಿದ್ದಾರೆ. ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಇವರು ಅರ್ಜಿ ಸಲ್ಲಿಸಿದ್ದಾರೆ.

ಇದು ವರ್ಗಾವಣೆ ಪ್ರಕ್ರಿಯೆಯನ್ನು ತಡೆಯಲು ಉಪನ್ಯಾಸಕರು ನಡೆಸುವ ಲಾಬಿ ಎಂದು ಗೊತ್ತಾಗುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಯೊಬ್ಬರು, ವರ್ಗಾವಣೆ ಪ್ರಕ್ರಿಯೆಗೆ ಮುಂದಿನ ಚಾಲನೆ ನೀಡಬೇಕಾದರೆ ಸರ್ಕಾರ ಒಪ್ಪಿಗೆ ನೀಡಬೇಕೆಂದು ಇಲಾಖೆ ಸರ್ಕಾರಕ್ಕೆ ಆಕ್ಷೇಪ ಅರ್ಜಿಯನ್ನು ಕಳುಹಿಸಿದೆ.

SCROLL FOR NEXT