ರಾಯಚೂರು: ಹೈದರಬಾದ್-ಕರ್ನಾಟಕ ಪ್ರದೇಶ 70ನೇ ವಿಮೋಚನಾ ದಿನಾಚರಣೆ ಆಚರಿಸುತ್ತಿದೆ. ಈ ಭಾಗದ ಹಲವು ಮಂದಿ ಸ್ವಾನತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಚಿರಪರಿಚಿತರಾದವರು, ಆದರೆ ಸ್ವಾತಂತ್ರ್ಯ ಹೋರಾಟಗಾರ ಮತ್ತು ಆತನ ಶಿಕ್ಷಕನ ಕಥೆ ಮಾತ್ರ ಇನ್ನೂ ಚರಿತ್ರೆಯಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.
ನಿಜಾಮರ ಆಳ್ವಿಕೆಯಲ್ಲಿ ರಾಯಚೂರಿನ ಸರ್ಕಾರಿ ಶಾಲೆಯಲ್ಲಿ ನಜೀರ್ ಸಾಬ್ ಮುಖ್ಯೋಪಾದ್ಯಾಯರಾಗಿ ಕೆಲಸ ಮಾಡುತ್ತಿದ್ದರು, ಸ್ವಾತಂತ್ರ್ಯ ಹೋರಾಟಗಾರನ ಜೀವವನ್ನು ರಕ್ಷಿಸಿದ ನಂತರ ಪಾಕಿಸ್ತಾನಕ್ಕೆ ತೆರಳಿದರು. ನಿಜಾಮರ ಹೆಸರಿನಲ್ಲಿ ರಝಕರ್ ಸೈನ್ಯ ಸ್ವಾತಂತ್ರ್ಯ ಹೋರಾಟಗಾರನನ್ನು ಕೊಲ್ಲುವಂತೆ ಫತ್ವಾ ಹೊರಡಿಸಿತ್ತು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ಗ ಕಾಶೀ ರಾವ್ ಪಟೇಲ್ ವಟ್ಗಾಲ್ 1947 ರಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದರು. ಎಲ್ಲಾ ಹೋರಾಟಗಳಲ್ಲೂ ಪಟೇಲ್ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದರು ಎಂದು ಕಾಶೀ ರಾವ್ ಪುತ್ರ ವೆಂಕಟೇಶ್ ಪಟೇಲ್ ನೆನಪಿಸಿಕೊಳ್ಳುತ್ತಾರೆ. ರಝಕರ್ ಚಳುವಳಿ ವೇಳೆ ಸ್ವಾತಂತ್ರ್ಯ ಹೋರಾಟಗರರು ಮತ್ತು ಸೈನ್ಯದ ಘರ್ಷಣೆ ಉತ್ತುಂಗಕ್ಕೇರಿತ್ತು, ಕಾಶೀರಾವ್ ಸೇನೇಯಿಂದಾಗಿ ಕಾಶೀರಾವ್ ಎಲ್ಲರ ಗಮನದ ಕೇಂದ್ರ ಬಿಂದುವಾಗಿದ್ದರು.
ಹೀಗಾಗಿ ಕಾಶೀರಾವ್ ವಿರುದ್ಧ ಕೊಲ್ಲುವಂತೆ ಫತ್ವಾ ಹೊರಡಿಸಿದ್ದರು, ಆದರೆ ಇದು ಕಾಶೀರಾವ್ ಗೆ ತಿಳಿದಿರಲಿಲ್ಲ, 1947ರ ಒಂದು ದಿನ ಮುಖ್ಯೋಪಾಧ್ಯಯರಾಗಿದ್ದ ನಜೀರ್ ಸಾಬ್ ಕಾಶೀ ರಾವ್ ಮನೆಗೆ ಭೇಟಿ ನೀಡಿ ಕೂಡಲೇ ತಮ್ಮ ಮನೆಗೆ ಬರುವಂತೆ ಹೇಳಿದ್ದಾರೆ. ಯಾವುದೇ ಪ್ರಶ್ನೆ ಕೇಳದೆ ನನ್ನ ತಂದೆ ಅವರ ಮನೆಗೆ ತೆರಳಿದರು ಎಂದು ವೆಂಕಟೇಶ್ ಸ್ಮರಿಸಿದ್ದಾರೆ,
ಭಾರತ ಇಬ್ಬಾಗವಾದ ನಂತರ ನಜೀರ್ ಸಾಬ್ ಪಾಕಿಸ್ತಾನಕ್ಕೆ ತೆರಳಿದರು, ತಮ್ಮ ಮನೆಯಲ್ಲಿ ದೇಶ ವಿರೋಧಿ ಕೆಲಸ ಮಾಡುತ್ತಿದ್ದಾರೆ ಎಂದು ನಜೀರ್ ಸಾಬ್ ವಿರುದ್ಧ ಆರೋಪ ಮಾಡಲಾಯಿತು. ತಮ್ಮ ಮನೆಯಲ್ಲಿರಿಸಿಕೊಂಡಿದ್ದ ಕಾಶೀರಾವ್ ಮೇಲೆ ನಜೀರ್ ಸಾಬ್ ಗೆ ಅಪಾರ ಪ್ರೀತಿಯಿತ್ತು, ತಮ್ಮ ಜೀವವನ್ನೆ ಪಣಕ್ಕಿಟ್ಟು, ನಜೀರ್ ಸಾಬ್ ಕಾಶೀರಾವ್ ಅವರನ್ನು ರಕ್ಷಿಸಿದ್ದರು, ಘರ್ಷಣೆ ತಣ್ಣಗಾದ 10 ದಿನಗಳ ನಂತರ ನನ್ನ ತಂದೆ ಅವರ ಮನೆಯಿಂದ ಹೊರ ಬಂದರು ಎಂದು ವೆಂಕಟೇಶ್ ತಿಳಿಸಿದ್ದಾರೆ.