ರಾಜ್ಯ

ಕೋಲಾರ: ಬ್ಲಾಕ್ ಆಗಿದ್ದ ಶೌಚಾಲಯ ಸ್ವಚ್ಛಗೊಳಿಸಿದ ಬಿಇಒ, ಶಿಕ್ಷಕರಿಗೆ ಪೇಚಾಟ

Lingaraj Badiger
ಕೋಲಾರ: ಶಾಲೆಯ ಪರಿಶೀಲನೆಗೆ ತೆರಳಿದ್ದ ಬಂಗಾರಪೇಟೆ ಕ್ಷೇತ್ರ ಶಿಕ್ಷಣ ಅಧಿಕಾರಿ(ಬಿಇಒ) ಬ್ಲಾಕ್ ಆಗಿದ್ದ ಶಾಲೆಯ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದು, ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಪೇಚಿಗೆ ಸಿಲುಕಿದ್ದಾರೆ.
ಬಂಗಾರಪೇಟೆ ತಾಲೂಕಿನ ಕರಮನಹಳ್ಳಿ ಶಾಲೆಯಲ್ಲಿ ಸ್ವಚ್ಛತೆ ಕಾಪಾಡುತ್ತಿಲ್ಲ ಮತ್ತು ಶಾಲಾ ಕೊಠಡಿಗಳು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಪೋಷಕರು ಮತ್ತು ಗ್ರಾಮಸ್ಥರು ಬಿಇಒಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆ ಆಗಮಿಸಿದ್ದ ಬಿಇಒ ಕೆಂಪಯ್ಯ ಅವರು, ಕಟ್ಟಿದ್ದ ಶೌಚಾಲಯ ಕಂಡು ಗರಂ ಆದರು. ಆದರೂ ಅದನ್ನು ಸ್ವಚ್ಛಗೊಳಿಸಲು ಯಾರೂ ಮುಂದಾಗದ ಹಿನ್ನೆಲೆಯಲ್ಲಿ ಸ್ವತಃ ತಾವೇ ಅದನ್ನು ಸ್ವಚ್ಛಗೊಳಿಸಿ ಇತರರು ನಿಬ್ಬೆರಗಾಗುವಂತೆ ಮಾಡಿದರು.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸದ ಕೆಂಪಯ್ಯ ಅವರು, ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದು ದುರುದೃಷ್ಟಕರ. ತರಗತಿ ವೇಳೆ ಶಾಲೆಯ ವಿದ್ಯಾರ್ಥಿನಿಯರು ಶೌಚಕ್ಕಾಗಿ ಮನೆಗೆ ಹೋಗುತ್ತಾರೆ ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ನಾನು ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದೆ ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟವರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ಬಿಇಒ ತಿಳಿಸಿದ್ದಾರೆ.
SCROLL FOR NEXT