ಜಯಮಾಲ 
ರಾಜ್ಯ

ಪರಭಾಷಿಗರು ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಜಯಮಾಲ ಚಾಲನೆ

ಪರಭಾಷಿಗರು ಸುಲಭವಾಗಿ ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಸಚಿವೆ ಜಯಮಾಲ ಬುಧವಾರ ಚಾಲನೆ ನೀಡಿದ್ದಾರೆ.

ಬೆಂಗಳೂರು: ಪರಭಾಷಿಗರು ಸುಲಭವಾಗಿ ಕನ್ನಡ ಕಲಿಯಲು ನೆರವಾಗಬಲ್ಲ ನೂತನ ಜಾಲತಾಣಕ್ಕೆ ಸಚಿವೆ ಜಯಮಾಲ ಬುಧವಾರ ಚಾಲನೆ ನೀಡಿದ್ದಾರೆ.
ದೆಹಲಿಯ ಜವಹರಲಾಲ್ ನೆಹರು ವಿವಿ ಕನ್ನಡ ಅಧ್ಯಯನ ಪೀಠ ರೂಪಿಸಿದ ಈ ಜಾಲತಾಣದಲ್ಲಿ ಪರಭಾಷಿಕರಿಗೆ ಸರಳವಾಗಿ ಕನ್ನಡ ಕಲಿಯುವುದಕ್ಕೆ ಸಹಾಯಕ ಪಠ್ಯಗಳಿದೆ. 
ಹಾಡು, ಮಾತುಗಳ ಅನುಕರಣೆ ಸೇರಿ ಅನೇಕ ವಿಷಯಗಳ ಬಗೆಗೆ ಇದರಲ್ಲಿ 30 ವೀಡಿಯೋಗಳನ್ನು ಹಾಕಲಾಗಿದೆ.
ಜಾಲತಾಣಕ್ಕೆ ಚಾಲನೆ ನಿಡಿದ ಸಚಿವರು ಸುದ್ದಿಗಾರರೊಡನೆ ಮಾತನಾಡಿ "ಈ ಯೋಜನೆಗೆ ಕನ್ನಡ ಸಂಸ್ಕೃತಿ ಇಲಾಖೆ 30 ಲಕ್ಷ ಅನುದಾನವನ್ನು ನಿಡಿದೆ. ಇದಕ್ಕೆ ಹೆಚ್ಚಿನ ಅನುದಾನ ಬೇಕಿದ್ದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ" ಎಂದರು.
ಆನ್ ಲೈನ್ ಮೂಲಕ 'ಸಕಾಲ' ಸೇವೆ ಪ್ರಾರಂಭವಾಗಿದ್ದು ಆಡಳಿತ ಪಾರದರ್ಶಕತೆ ಜತೆಗೆ ಸುಲಭ ಸೇವೆಗೆ ಇದು ನೆರವಾಗಲಿದೆ" ಸಚಿವೆ ಜಯಮಾಲ ಹೇಳಿದ್ದಾರೆ.
ಜಾಲತಾಣದಲ್ಲಿ ಕರ್ನಾಟಕದ ಇತಿಹಾಸ, ಜನಪದ ಸಾಹಿತ್ಯ, ರಂಗಭೂಮಿ, ವರ್ತಮಾನ ವಿಚಾರ, ಸೇರಿ ಅನೇಕ ವಿಷಯಗಳನ್ನು ಸೇರಿಸಲಾಗಿದೆ.ಹಿಂದಿ ಹಾಗೂ ಉರ್ದು ಹೊರತಾಗಿ ಇದುವರೆಗೆ ಬೇರಾವ ಭಾಷೆಯಲ್ಲಿಯೂ ಇಂತಹಾ ಪ್ರಯೋಗ ನಡೆದಿಲ್ಲ ಎಂದು ದೆಹಲಿಯ ಜೆ ಎನ್ ಯು ನ ಕನ್ನಡ ವಿಭಾಗ ಮುಖ್ಯಸ್ಥ ಪುರ್ಷೋತ್ತಮ ಬಿಳಿಮಲೆ  ಹೇಳಿದ್ದಾರೆ.
ಜಾಲತಾಣದ ವಿಲಾಸ ಈ ರೀತಿ ಇದೆ- www.kannadakalike.org

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT