ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಕೆರೆಯಲ್ಲಿ ಈಜಲು ಹೋದ ಯುವಕ ನಿರುಪಾಲು!

ಮೋಜಿಗಾಗಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರು ನೆಲಮಂಗಲ ಬಳಿ ನಡೆದಿದೆ.

ಬೆಂಗಳೂರು: ಮೋಜಿಗಾಗಿ ಕೆರೆಯಲ್ಲಿ ಈಜಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ಬೆಂಗಳೂರು ನೆಲಮಂಗಲ ಬಳಿ ನಡೆದಿದೆ.
ನೆಲಮಂಗಲ ಹಳೆ ನಿಜಗಲ್ ಕೆರೆಗೆ ಈಜಲು ತೆರಳಿದ್ದ ಶ್ರೀನಿವಾಸ್ ಮೃತ ದುರ್ದೈವಿ. ಈತ ತುಮಕೂರಿನ ಶೆಟ್ಟಿಹಳ್ಳಿ ಗ್ರಾಮದವನಾಗಿದ್ದು ಈತ ನಂದಿಹಳ್ಳಿ ಸಮೀಪ ರಿಲಯನ್ಸ್ ವೇರ್ ಹೌಸ್ ನಲ್ಲಿ ಉದ್ಯೋಗಿಯಾಗಿದ್ದ.
ಬುಧವಾರ ರಾತ್ರಿ ಪಾಳಿ ಕೆಲಸ ಮುಗಿಸಿಕೊಂಡು ತನ್ನ ಆರು ಮಂದಿ ಸ್ನೇಹಿತರೊಡನೆ ಈಜಲು ತೆರಳಿದ್ದ ಯುವಕ ಶ್ರೀನಿವಾಸ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಸ್ನೇಹಿತರಾದ ರಾಘವೇಂದ್ರ, ಮೋಹನ್ ಕುಮಾರ್, ವಿನಯ್ ಸಿಂಗ್, ಸಂತೋಷ್, ಸುರೇಶ್ ಬಾಬು ಮತ್ತು ತೇಜಸ್ ಜತೆಗೆ ಶ್ರೀನಿವಾಸ್ ಈಜಿ ಈಜಿ ಆಯಾಸಗೊಂಡಿದ್ದರು ಎನ್ನಲಾಗಿದ್ದು ಇದ್ದಕ್ಕಿದ್ದಂತೆ ಕಣ್ಮರೆ ಆಗಿದ್ದಾನೆ.
ಶ್ರೀನಿವಾಸ್ ನೀರಲ್ಲಿ ಮುಳುಗುವ ವೀಡಿಯೋ ಇನ್ನೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ. ಶ್ರೀನಿವಾಸ್ ಜತೆ ಈಜುತ್ತಿದ್ದ ಯಾರೊಬ್ಬರಿಗೂ ಅವನನ್ನು ಉಳಿಸಲಾಗಲಿಲ್ಲ.ನಿವಾಸ್ ಮುಳುಗುತ್ತಿರುವಾಗ ದಡದಲ್ಲಿರುವ ಮತ್ತೊಬ್ಬ ಸ್ನೇಹಿತ, ಅವನು ಮುಳುಗುತ್ತಿದ್ದಾನೆ ಜುಟ್ಟು ಹಿಡಿದು ಮೇಲೆತ್ತಿ ಅನ್ನುತ್ತಿದ್ದರೂ ಮೇಲೆತ್ತಲು ಸಾಧ್ಯವಾಗಿಲ್ಲ ಎಂದಿರುವುದು ಸಹ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಇನ್ನೊಂದೆಡೆ ಮೃತ ಶ್ರೀನಿವಾಸ್ ಚಿಕ್ಕಮ್ಮ ಮಾತನಾಡಿ ಶ್ರೀನಿವಾಸ್ ಗೆ ಈಜು ಬರುತ್ತಿರಲಿಲ್ಲ, ಅವನಿಗೆ ನೀರು ಎಂದರೆ ಭಯವಿತ್ತು ಎಂದಿದ್ದಾರೆ. ನೀರಿಗೆ ಇಳಿಯಬೇಡ ಎನ್ನುವ ಸ್ನೇಹಿತನ ಮಾತಿಗೆ ಬೆಲೆ ನೀಡದೆ ಶ್ರೀನಿವಾಸ್ ಕೆರೆಯಲ್ಲಿ ಈಜಲು ಮುಂದಾದ ಎನ್ನಲಾಗಿದೆ.
ಶ್ರೀನಿವಾಸ್ ನಾಪತ್ತೆ ಸುದ್ದಿ ತಿಳಿದ ಪೋಲೀಸರು ಕೆರೆಯಲ್ಲಿ ಶೋಧಕಾರ್ಯ ನಡೆಸಿ ಯುವಕನ ಮೃತದೇಹವನ್ನು ಮೇಲೆತ್ತಿದ್ದಾರೆ.ಪ್ರಕರಣ ಸಾಂಬಂಧ ಯುವಕನ ಆರು ಸ್ನೇಹಿತರನು ದಾಬಸ್ ಪೇಟೆ ಪೋಲೀಸರು ವಿಚಾರಣೆ ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT