ಹೋರಾಟದ ಬಳಿಕ ಶಾಲೆ ತೆರೆದ ಸರ್ಕಾರ: ಓರ್ವ ಬಾಲಕಿಗಾಗಿ ಮತ್ತೆ ಆರಂಭವಾಯ್ತು ಸರ್ಕಾರಿ ಶಾಲೆ 
ರಾಜ್ಯ

ಓರ್ವ ಬಾಲಕಿಗಾಗಿ ಮತ್ತೆ ಆರಂಭವಾಯ್ತು ಸರ್ಕಾರಿ ಶಾಲೆ: ನಿರಂತರ ಹೋರಾಟದ ಬಳಿಕ ಶಾಲೆ ತೆರೆದ ಸರ್ಕಾರ!

ಮಕ್ಕಳ ಕೊರತೆಯಿಂದಾಗಿ ಮುಚ್ಚಿ ಹೋಗಿದ್ದ ಶಾಲೆಯೊಂದನ್ನು ಪಟ್ಟುಬಿಡದೆ ಹೋರಾಟ ಮಾಡಿ ಸರ್ಕಾರದ ಕಣ್ಣು ತೆರೆಸಿದ ಪೋಷಕರು, ಮತ್ತೆ ಶಾಲೆ ಆರಂಭವಾಗುವಂತೆ ಮಾಡಿದ್ದಾರೆ...

ಬೆಂಗಳೂರು: ಮಕ್ಕಳ ಕೊರತೆಯಿಂದಾಗಿ ಮುಚ್ಚಿ ಹೋಗಿದ್ದ ಶಾಲೆಯೊಂದನ್ನು ಪಟ್ಟುಬಿಡದೆ ಹೋರಾಟ ಮಾಡಿ ಸರ್ಕಾರದ ಕಣ್ಣು ತೆರೆಸಿದ ಪೋಷಕರು, ಮತ್ತೆ ಶಾಲೆ ಆರಂಭವಾಗುವಂತೆ ಮಾಡಿದ್ದಾರೆ. 
ಹಾಜರಾತಿ ಇಲ್ಲದಿದ್ದ ಕಾರಣ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಒಬೆನಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯನ್ನು 2016-17ನೇ ಶೈಕ್ಷಣಿಕ ವರ್ಷದಲ್ಲಿ ಮುಚ್ಚಲಾಗಿತ್ತು. ಇದರಿಂದಾಗಿ 11 ವರ್ಷದ ನಂದಿತಾ ಎಂಬ ಬಾಲಕಿಯ ಪೋಷಕರು ತೀವ್ರ ಆಘಾತಕ್ಕೊಳಗಾಗಿದ್ದರು. 
ನಂದಿತಾ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಮಗಳಿಗೆ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸುವ ಉದ್ದೇಶವನ್ನು ಹೊಂದಿದ್ದರು. ಇದರಂತೆ ಮಗಳನ್ನು ಸರ್ಕಾರಿ ಶಾಲೆಗೆ ಸೇರ್ಪಡೆಗೊಳಿಸಿದ್ದರು. ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಹಾಜರಾತಿ ಇಲ್ಲದ ಕಾರಣ ಶಾಲೆಯೇ ಮುಚ್ಚಿ ಹೋದ ಕಾರಣ ನಂದಿತಾ ಪೋಷಕರು ಗೊಂದಲಕ್ಕೊಳಗಾದರು. 
ಬೇರೆ ಶಾಲೆಗೆ ಹೋಗಬೇಕಾದರೆ ಬಹಳ ದೂರ ಹೋಗಬೇಕಿತ್ತು. ಅಲ್ಲದೆ, ನಂದಿತಾ ಭದ್ರತೆ ಬಗ್ಗೆ ಕೂಡ ಪೋಷಕರಲ್ಲಿ ಆತಂಕ ಮನೆ ಮಾಡಿತ್ತು. 
ಹೀಗಾಗಿ ಶಾಲೆ ಮರು ತೆರೆಯುವಂತೆ ಮಾಡಲು ನಂದಿತಾ ಪೋಷಕರು ಪಟ್ಟು ಹಿಡಿದ್ದರು. ಇದರಂತೆ ಗ್ರಾಮಸ್ಥರ ನೆರವು ಪಡೆದುಕೊಂಡು ಹೋರಾಟ ನಡೆಸಲು ಆರಂಭಿಸಿದ್ದರು. ಈ ಹೋರಾಟದಲ್ಲಿ ಸರ್ಕಾರದ ಕಣ್ಣು ತೆರೆಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಪೋಷಕರ ಒತ್ತಡಕ್ಕೆ ಮಣಿದ ಸರ್ಕಾರ ಇದೀಗ ಮುಚ್ಚಿದ್ದ ಶಾಲೆಯನ್ನು ಮರು ತೆರೆದಿದ್ದಾರೆ. 
2017-18ನೇ ಶೈಕ್ಷಿಣಿಕ ವರ್ಷದಲ್ಲಿ ಶಾಲೆಯನ್ನು ಮತ್ತೆ ತೆರೆಯಲಾಗಿದ್ದು, ಶಾಲೆಯಲ್ಲಿ ಇದೀಗ ನಂದಿತಾ ಒಬ್ಬಳೇ ವಿದ್ಯಾರ್ಥಿ ಇದ್ದಾಳೆ. ಈಕೆಗಾಗಿ ಸರ್ಕಾರ ಓರ್ವ ಮಹಿಳಾ ಶಿಕ್ಷಕಿ ಕೋಮಲಾ ಜಿ.ಕೆ ಎಂಬುವವರನ್ನು ನೇಮಕ ಕೂಡ ಮಾಡಿದ್ದು, ಮಧ್ಯಾಹ್ನ ಬಾಲಕಿಗೆ ಬಿಸಿಯೂಟವನ್ನು ನೀಡಲಾಗುತ್ತದೆ. 
2016-17 ಶಾಲೆಯಲ್ಲಿ ಹಾಜರಾತಿಯೇ ಇರಲಿಲ್ಲ. ಹೀಗಾಗಿ ಸರ್ಕಾರ ಶಾಲೆಯನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿತ್ತು. ಬಳಿಕ ಇತರೆ ಶಾಲೆಗೆ ನನ್ನನ್ನು ನೇಮಕ ಮಾಡಿದ್ದರು. ಇದಾದ ಕೆಲವೇ ದಿನಗಳ ಬಳಿಕ ನಂದಿತಾ ಪೋಷಕರು ನನ್ನ ಬಳಿ ಬಂದು ಪಾಠ ಹೇಳಿಕೊಡುವಂತೆ ತಿಳಿಸಿದರು. ಈ ವೇಳೆ ನನಗೆ ಕೋಪ, ಆತಂಕಹ ಹಾಗೂ ಬೇಸರ ಎಲ್ಲವೂ ಆಗಿತ್ತು. ಶಾಲೆ ಬಂದ್ ಆಗಿದ್ದು, ಇದೀಗ ನನ್ನ ಮಗಳು ಏನು ಮಾಡಬೇಕೆಂದು ಕೇಳಿದರು. 
ನಂದಿತಾ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಬೇರೆ ಶಾಲೆಗೆ ಕಳುಹಿಸಬೇಕೆಂದರೆ ಬಹಳ ದೂರ ತೆರಳಬೇಕು. ಇಲ್ಲದೇ ಹೋದರೆ, ಹೆಚ್ಚು ಹಣವನ್ನು ಕಟ್ಟಿ ಖಾಸಗಿ ಶಾಲೆಗೆ ಸೇರ್ಪಡೆಗೊಳಿಸಬೇಕು. ಮಗಳ ಭದ್ರತೆ ಬಗ್ಗೆ ಆಲೋಚನೆ ಮಾಡಿದ್ದ ಪೋಷಕರಿಗೆ ದೂರ ಕಳುಹಿಸಲೂ ಆಗದೆ, ಹಣ ಕಟ್ಟಿ ಖಾಸಗಿ ಶಾಲೆಗೆ ಸೇರ್ಪಡೆಗೊಳಿಸಲೂ ಆಗದೆ ಸಂಕಷ್ಟ ಅನುಭವಿಸುತ್ತಿದ್ದರು. ಬಳಿಕ ಗ್ರಾಮಸ್ಥರೊಂದಿಗೆ ಸೇರಿಕೊಂಡು ಜಿಲ್ಲಾ ಪಂಚಾಯತಿ ಹಾಗೂ ಇತರೆ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರು. ಅವರ ಪರಿಶ್ರಮ ಹಾಗೂ ಹೋರಾಟದಿಂದಾಗಿ ಮುಚ್ಚಿದ್ದ ಶಾಲೆ ಮರು ತೆರೆದಿದ್ದೆ ಎಂದು ಶಿಕ್ಷಕಿ ಕೋಮಲಾ ಹೇಳಿದ್ದಾರೆ. 
2017-18 ಶೈಕ್ಷಣಿಕ ವರ್ಷದಲ್ಲಿ 3 ಮಕ್ಕಳಿದ್ದರು. ಆದರೆ, ಇದೀಗ ನಂದಿತಾ ಮಾತ್ರ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದಾರೆ. 5ನೇ ತರಗತಿವರೆಗೂ ಪೂರ್ಣಗೊಳಿಸಿದ ಇಬ್ಬರು ಮಕ್ಕಳು ಇತರೆ ಶಾಲೆಗೆ ಸೇರ್ಪಡೆಗೊಂಡಿದ್ದಾರೆ. 
ಒಬ್ಬಂಟಿಯಾಗಿ ಶಾಲೆಗೆ ಬಂದರೂ ಈ ಬಗ್ಗೆ ನಂದಿತಾ ಮಾತ್ರ ಬೇಸರ ವ್ಯಕ್ತಪಡಿಸಿಲ್ಲ. ಒಬ್ಬ ವಿದ್ಯಾರ್ಥಿ ಬಂದರೂ ಇಲಾಖೆ ಬಾಲಕಿಗಾಗಿ ಓರ್ವ ಶಿಕ್ಷಕಿಯನ್ನು ನಿಯೋಜಿಸಿದೆ. ಅಲ್ಲದೆ, ಬಿಸಿಯೂಟ ವ್ಯವಸ್ಥೆಯನ್ನೂ ಕಲ್ಪಿಸಿದೆ. ನನ್ನ ಶಿಕ್ಷಕಿ ನನಗೆ ಅತ್ಯುತ್ತಮ ಸ್ನೇಹಿತೆ ಎಂದು ಬಾಲಕಿ ನಂದಿತಾ ಹೇಳಿದ್ದಾಳೆ. 
ಈ ಶಾಲೆ 1978ರಲ್ಲಿ ನಿರ್ಮಾಣ ಗೊಂಡಿತ್ತು. 2010ರಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಖಾಸಗಿ ಶಾಲೆಗಳು ಹೆಚ್ಚಾದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು ಆರ್'ಟಿಇ ಕಾಯ್ದೆಯನ್ನು ದೂಷಿಸಿದರು. ಆರ್'ಟಿಇ ಕಾಯ್ದೆಯಡಿಯಲ್ಲಿ ಹಲವು ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಸೇರ್ಪಡೆಗೊಂಡರು ಎಂದು ಈ ಕ್ಷೇತ್ರದ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!