ಸಂಗ್ರಹ ಚಿತ್ರ 
ರಾಜ್ಯ

ಅಂತರ್ಧರ್ಮೀಯ ಅಪ್ರಾಪ್ತೆಯೊಡನೆ ಪ್ರೇಮ, ಯುವತಿ ಪ್ರಾಪ್ತ ವಯಸ್ಥಳಾದ ಬಳಿಕ ನಡೆದದ್ದೇನು?

ಏಳು ತಿಂಗಳುಗಳ ಹಿಂದೆ ಅಂತರ್ಧರ್ಮೀಯ ಯುವಕನನ್ನು ಪ್ರೀತಿಸಿ ವಿವಾಹವಾಗಬೇಕೆಂದಿದ್ದ ಅಪ್ರಾಪ್ತ ಯುವತಿಯೊಬ್ಬಳನ್ನು ಅವಳು ಪ್ರಾಪ್ತ ವಯಸ್ಕಳಾಗುತ್ತಿದ್ದಂತೆ....

ಹಾಸನ: ಏಳು ತಿಂಗಳುಗಳ ಹಿಂದೆ ಅಂತರ್ಧರ್ಮೀಯ ಯುವಕನನ್ನು ಪ್ರೀತಿಸಿ ವಿವಾಹವಾಗಬೇಕೆಂದಿದ್ದ ಅಪ್ರಾಪ್ತ ಯುವತಿಯೊಬ್ಬಳನ್ನು ಅವಳು ಪ್ರಾಪ್ತ ವಯಸ್ಕಳಾಗುತ್ತಿದ್ದಂತೆ ಆಕೆಯ ಪೋಷಕರೇ ಬಂದು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಆಲೂರು ತಾಲೂಕಿನ ಕೆ.ಹೊಸಕೋಟೆ ಗ್ರಾಮದ ಯುವತಿ ರಂಶೀನಾಳನ್ನು ಕಾಗನೂರು ಹೊಸಹಳ್ಳಿ ಗ್ರಾಮದ ಯುವಕ ರಘು ಪರಸ್ಪರ ಪ್ರೀತಿಸುತ್ತಿದ್ದು ಆಕೆ ಪ್ರಾಪ್ತ ವಯಸ್ಕಲಾದ ಬಳಿಕ ವಿವಾಹವಾಗಲು ನಿರ್ಧರಿಸಿದ್ದ. ಅಂದೇ ಆಕೆಯನ್ನು ಅವಳ ಮನೆಯಿಂದ ಕರೆದೊಯ್ದು ದೂರವಿರಿಸಿದ್ದ.
ಇತ್ತ ಆಕೆಯನ್ನು ಕರೆದೊಯ್ದಿದ್ದ ಯುವಕನ ವಿರುದ್ಧ ಯುವತಿಯ ಪೋಷಕರು ಅಪಹರಣ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ನ್ಯಾಯಾಲಯದ ಕಟಕಟೆ ಏರಿ ನ್ಯಾಯಾಲಯ ಅಪ್ರಾಪ್ತೆಯನ್ನು ಬಾಲ ಮಂದಿರದಲ್ಲಿರಿಸಲು ಆದೇಶಿಸಿತ್ತು.
ಇಂದು (ಮಂಗಳವಾರ) ರಂಶೀನಾ ಪ್ರಾಪ್ತ ವಯಸ್ಕಾಳಾದ ಬೆನ್ನಲ್ಲೇ ಯುವತಿಯ ಪೋಷಕರು ಆಕೆ ಬಾಲ ಮಂದಿರಕ್ಕೆ ಆಗಮಿಸಿ ಆಕೆಯನ್ನು ಬಲವಂತವಾಗಿ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಎರಡೂ ಕೋಮುಗಳ ನಡುವೆ ಘರ್ಷಣೆ ನಡೆದು ಉದ್ವಿಗ್ನ ವಾತಾವರಣ ಉಂಟಾಗಿದೆ.
ರಂಶೀನಾ ಹಾಗೂ ರಘು ಇಬ್ಬರೂ ತಾವು ಜತೆಯಾಗಿರಲು ಬಯಸಿದ್ದು ರಂಶೀನಾ ತಾನು ರಘು ಜತೆ ಹೋಗುತ್ತೇನೆಂದು ಹಠ ಹಿಡಿದಿದ್ದರೆ ರಘು ತನಗೆ ಆಕೆಯೇ ಬೇಕು, ಅವಳಿಲ್ಲದೆ ಹೋದರೆ ಸಾಯುತ್ತೇನೆ ಎಂದು ಹೇಳಿದ್ದಾನೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂತಾದ ಬೆನ್ನಲ್ಲಿ ಹಾಸಾ ಪೋಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಗುಂಪಿನ ನಡುವೆ ಶಾಂತಿ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಕಡೆಗೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಕೋರ್ಟ್​ ಆದೇಶ ಬರುವವರೆಗೂ ಯುವತಿ ಬಾಲ ಮಂದಿರದಲ್ಲೇ ಇರಲಿ ಎನ್ನುವ ತೀರ್ಮಾನ ನೀಡಿದ್ದಾರೆ.
ಮಗಳು ನಮಗೆ ಬೇಕು. ಆಕೆ ಬುದ್ದಿಉವಂತೆ, ಓದಿ ನಮ್ಮನ್ನು ಸಾಕುವುದಾಗಿ ಹೇಳಿದ್ದಳು.ಇದೀಗ ಬೇಡದ ಘಟನೆ ನಡೆದಿದೆ, ಮಗಳ ಕೊರಗಲ್ಲಿ ತಾಯಿ ಹಾಸಿಗೆ ಹಿಡಿದಿದ್ದಾಳೆ ಎಂದು ಯುವತಿಯ ಪೋಷಕರು ಸಹ ಅಲವತ್ತುಕೊಂಡಿದ್ದಾರೆ.
ಸಧ್ಯ ಪ್ರಕರಣ ಕಗ್ಗಂತಾಗಿದ್ದು ನ್ಯಾಯಾಲಯದಲ್ಲಿ ಯಾವ ತೀರ್ಪು ಬರುವುದೋ ಕಾದು ನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

ಅಂತಿಮಗೊಳ್ಳದ ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 2 ನೇ ದಿನವಾದ ಇಂದು ಕೂಡಾ ಯುಎಸ್- ಇರಾನ್ ಮಾತುಕತೆ ಮುಂದುವರಿಕೆ!

PM Modi- Rahul: ರಾಜಕೀಯ ಬದ್ಧ ವೈರಿಗಳ ಅಪರೂಪದ ಚುಟುಕು ಸಂಭಾಷಣೆ- ವಿಡಿಯೋ ವೈರಲ್!

ಬೆಂಗಳೂರು: 500 ರೂ.ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

SCROLL FOR NEXT