ರಾಜ್ಯ

ಮೈಸೂರು ಡಿಸಿಸಿ ಬ್ಯಾಂಕ್ ಮಾಜಿ ಮುಖ್ಯಸ್ಥನಿಂದ ಶಾಸಕ ನರೇಂದ್ರಗೆ ಕಪಾಳ ಮೋಕ್ಷ?

Shilpa D
ಮೈಸೂರು: ಕೆಲವು ಸಹಕಾರ ಸೊಸೈಟಿಗಳು ಅನುದಾನದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಪ್ರಕರಣ ಮೈಸೂರು ಡಿಸಿಸಿ ಬ್ಯಾಂಕ್ ಮಾಜಿ ಮುಖ್ಯಸ್ಥ ಹಾಗೂ ಕಾಂಗ್ರೆಸ್ ಶಾಸಕ ನರೇಂದ್ರ ಅವರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಈ ವೇಳೆ ಶಾಸಕ ನರೇಂದ್ರ ಅವರಿಗೆ ಬ್ಯಾಂಕ್ ಮಾಜಿ ಅಧ್ಯಕ್ಷ ಕಪಾಳ ಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ ಬ್ಯಾಂಕ್ ಅಧ್ಯಕ್ಷ ಮಹಾದೇವಪ್ಪ ಸೇರಿದಂತೆ ಎಲ್ಲಾ ನಿರ್ದೇಶಕರುಗಳು  ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ, ಮೂಲಗಳ ಪ್ರಕಾರ ಬ್ಯಾಂಕ್ ನ ಕಾರ್ಯದರ್ಶಿಗಳ ವರ್ಗಾವಣೆಗೆ ಶಾಸಕ ನರೇಂದ್ರ ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಸದ್ಯ ಬ್ಯಾಂಕ್ ನ ಎಂಡಿ ಆಗಿರುವ  ಲಿಂಗಯ್ಯ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬ್ಯಾಂಕ್ ನಿರ್ದೇಶಕರುಗಳಾದ ಹರೀಶ್ ಗೌಡ ಮತ್ತು ಬಸವೇಗೌಡ ಕೆಲವೊಂದು ಸೊಸೈಟಿಗಳಲ್ಲಿ ಕೋಟ್ಯಂತರ ರು ಹಣವನ್ನು ಡ್ರಾ ಮಾಡಲಾಗಿದೆ, ಹುಣಸೂರು ಮತ್ತು ಬಿಳಿಕಿರೆ ಬ್ಯಾಂಕ್ ಮ್ಯಾನೇಜರ್ ರಾಮಪ್ಪ ಪೂಜರ್ ಸೇವೆ ವೇಳೆಯಲ್ಲಿ ಅನುದಾನ ದುರುಪಯೋಗವಾಗಿದೆ ಎಂಬುದು ಕಂಡು ಬಂದಿದೆ. ಅವರು ತಪ್ಪು ಮಾಡಿಲ್ಲ ಎಂದು ಕಂಡುಬಂದರೆ ಅವರನ್ನು ಮತ್ತೆ ಅವರ ಸ್ಥಾನಗಳಿಗೆ ನೇಮಿಸಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರದ ಆದೇಶವನ್ನು ಅನುಷ್ಠಾನಕ್ಕೆ ತರುವುದು ನಮ್ಮ ಕರ್ತವ್ಯ. ನರೇಂದ್ರ ಅವರು ಬಸವೇಗೌಡ ಅವರ ಶರ್ಟಿನ ಕತ್ತಿನ ಪಟ್ಟಿ ಹಿಡಿದ ಕಾರಣ ಕಪಾಳಕ್ಕೆ ಹೊಡೆಯಲಾಯಿತು ಎಂದು ಹೇಳಲಾಗಿದೆ, ಈ ಸಂಬಂದ ಮಾಹಿತಿ ಪಡೆಯಲು ಸಂಪರ್ಕಿಸಿದಾಗ" ಬಸವೇಗೌಡ ನನ್ನನ್ನು ತಳ್ಳಿ ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು, ಈ ವೇಳೆ  ಬ್ಯಾಂಕ್ ನಿರ್ದೇಶಕರು ನನ್ನ ರಕ್ಷಿಸಿದರು ಎಂದು ನರೇಂದ್ರ ಹೇಳಿದ್ದಾರೆ.
ಆದರೆ ಬಸವೇಗೌಡ ಈ ಆರೋಪವನ್ನು ನಿರಾಕರಿಸಿದ್ದಾರೆ, ಸಭೆಯಲ್ಲಿ ತಾವು ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ಹೇಳಿದ್ದಾರೆ,  ತಾಳ್ಮೆ ಕಳೆದುಕೊಂಡ ನರೇಂದ್ರ ಅವರೇ ನನ್ನ ಶರ್ಟ್ ಕಾಲರ್ ಹಿಡಿದು ಎಳೆದಾಡಿದರು, ಆ ವೇಳೆ ನಾನು ಅವರನ್ನು ತಳ್ಳಿದೆ, ಆದರೆ ಅವರು ನಾನು ಅವರಿಗೆ ಕಪಾಳಕ್ಕೆ ಹೊಡೆದೆ ಎಂದು ಎಲ್ಲೆಡೆ ಹೇಳಿಕೊಳ್ಳುವ ಮೂಲಕ ಅನುಕಂಪ ಗಿಟ್ಟಿಸಲು ಯತ್ನಿಸತ್ತಿದ್ದಾರೆ ಎಂದು ದೂರಿದ್ದಾರೆ.
SCROLL FOR NEXT